‘ವಾರಿಸು’ ಆಡಿಯೋ ಲಾಂಚ್ನಲ್ಲಿ ‘ರಂಜಿತಮೆ..’ ಹಾಡಿಗೆ ಮಸ್ತ್ ಸ್ಟೆಪ್ ಹಾಕಿದ ರಶ್ಮಿಕಾ ಮಂದಣ್ಣ; ವಿಡಿಯೋ ವೈರಲ್
‘ವಾರಿಸು’ ಸಿನಿಮಾ ಜನವರಿ 12ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ವಿಜಯ್ ಹಾಗೂ ರಶ್ಮಿಕಾ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮವನ್ನು ಚೆನ್ನೈನಲ್ಲಿ ಅದ್ದೂರಿಯಾಗಿ ನೆರವೇರಿದೆ.

ರಶ್ಮಿಕಾ ಮಂದಣ್ಣ (Rashmika Mandanna) ಅವರು ಹೆಚ್ಚು ಸುದ್ದಿಯಲ್ಲಿದ್ದಾರೆ. ವೈಯಕ್ತಿಕ ವಿಚಾರಗಳಿಗೆ ಅವರು ಅನೇಕ ಬಾರಿ ಸುದ್ದಿ ಆಗಿದ್ದಿದೆ. ಅದೇ ರೀತಿ ಸಿನಿಮಾ ವಿಚಾರಗಳಿಂದಲೂ ಅವರು ಆಗಾಗ ಸದ್ದು ಮಾಡುತ್ತಾರೆ. ಸದ್ಯ ದಳಪತಿ ವಿಜಯ್ ಜತೆಗಿನ ‘ವಾರಿಸು’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಈ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ‘ರಂಜಿತಮೆ..’ ಹಾಡಿಗೆ (Ranjithame Song) ರಶ್ಮಿಕಾ ಮಸ್ತ್ ಆಗಿ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋ ಅನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘ವಾರಿಸು’ ಸಿನಿಮಾ ಜನವರಿ 12ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ವಿಜಯ್ ಹಾಗೂ ರಶ್ಮಿಕಾ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮವನ್ನು ಚೆನ್ನೈನಲ್ಲಿ ಅದ್ದೂರಿಯಾಗಿ ನೆರವೇರಿದೆ. ಈ ವೇಳೆ ‘ರಂಜಿತಮೆ..’ ಹಾಡಿಗೆ ವೇದಿಕೆ ಮೇಲೆ ರಶ್ಮಿಕಾ ಮಂದಣ್ಣ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋಗಳನ್ನು ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಈ ವರ್ಷ ಗೆಲುವು-ಸೋಲು ಎರಡನ್ನೂ ಕಂಡಿದ್ದಾರೆ. ‘ಸೀತಾ ರಾಮಂ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿ ಅವರು ಗಮನ ಸೆಳೆದರು. ಈ ಸಿನಿಮಾ ಗೆದ್ದು ಬೀಗಿದೆ. ಅವರು ಹಿಂದಿಯಲ್ಲಿ ನಟಿಸಿದ ‘ಗುಡ್ಬೈ’ ಚಿತ್ರ ಹಾಗೂ ತೆಲುಗಿನ ‘ಆಡುವಾಳ್ಳು ಮೀಕು ಜೋಹಾರ್ಲು’ ಸಿನಿಮಾಗಳು ಸೋಲು ಕಂಡವು. ಸದ್ಯ ನಾಲ್ಕು ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ.
ரஞ்சிதமே பாட்டுக்கு நடனமாடிய #RashmikaMandanna #VarisuAudioLaunch @actorvijay @iamRashmika @rajaduraikannan @The_Abinesh @ZeeTamilNews @kalilulla_it @rameshlaus pic.twitter.com/yfzJTbU1yw
— Nowshath A (@Nousa_journo) December 24, 2022
ಇದನ್ನೂ ಓದಿ: Christmas 2022: ಸೆಲೆಬ್ರಿಟಿಗಳ ಕ್ರಿಸ್ಮಸ್ ಸಂಭ್ರಮ: ರಶ್ಮಿಕಾ, ಐಶ್ವರ್ಯಾ ರೈ, ಪ್ರೀತಿ ಜಿಂಟಾ ಮನೆಯಲ್ಲಿ ಸಡಗರ
‘ವಾರಿಸು’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಸಿದ್ದಾರ್ಥ್ ಮಲ್ಹೋತ್ರಾ ಜತೆಗಿನ ‘ಮಿಷನ್ ಮಜ್ನು’ ಚಿತ್ರ ಜನವರಿ 20ರಂದು ನೇರವಾಗಿ ನೆಟ್ಫ್ಲಿಕ್ಸ್ ಒಟಿಟಿ ಮೂಲಕ ರಿಲೀಸ್ ಆಗಲಿದೆ. ರಣಬೀರ್ ಕಪೂರ್ ಜತೆಗಿನ ‘ಅನಿಮಲ್’ ಚಿತ್ರದ ಶೂಟಿಂಗ್ನಲ್ಲಿ ರಶ್ಮಿಕಾ ಭಾಗಿ ಆಗುತ್ತಿದ್ದಾರೆ. ‘ಪುಷ್ಪ 2’ ಚಿತ್ರದ ಕೆಲಸಗಳು ಇನ್ನಷ್ಟೇ ಆರಂಭ ಆಗಬೇಕಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಪಾತ್ರ ಕೂಡ ಮುಖ್ಯವಾಗಿರಲಿದೆ ಎನ್ನಲಾಗುತ್ತಿದೆ. ಅವರ ಪಾತ್ರದ ಬಗ್ಗೆ ಸಾಕಷ್ಟು ವದಂತಿ ಹುಟ್ಟಿಕೊಂಡಿದ್ದವು. ಆದರೆ, ಈ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ