ದಶಕಗಳ ಬಳಿಕ ಭಾರತದಲ್ಲಿ ರಿಲೀಸ್ ಆಗುತ್ತಿದೆ ಪಾಕ್ ಸಿನಿಮಾ; ಈ ಚಿತ್ರದ ವಿಶೇಷತೆಗಳೇನು?
The Legend of Maula Jatt | Pakistan Movie: ‘ದಿ ಲೆಜೆಂಡ್ಸ್ ಆಫ್ ಮೌಲಾ ಜತ್’ ಚಿತ್ರದಲ್ಲಿ ಫವಾದ್ ಖಾನ್ ಹಾಗೂ ಮಹಿರಾ ಖಾನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಈ ವರ್ಷ ಅಕ್ಟೋಬರ್ 13ರಂದು ರಿಲೀಸ್ ಆಗಿದೆ. ಎರಡು ತಿಂಗಳ ಬಳಿಕ ಇದನ್ನು ಭಾರತದಲ್ಲಿ ರಿಲೀಸ್ ಮಾಡುವ ಸಾಹಸಕ್ಕೆ ಐನಾಕ್ಸ್ ಮುಂದಾಗಿದೆ.

2008ರ ಮುಂಬೈ ದಾಳಿಯ ಹಿಂದೆ ಪಾಕಿಸ್ತಾನ (Pakistan) ಉಗ್ರರ ಕೈವಾಡ ಇದೆ ಎಂಬ ಸಾಕ್ಷ್ಯ ಸಿಕ್ಕ ನಂತರದಲ್ಲಿ ಪಾಕಿಸ್ತಾನದ ಸಿನಿಮಾಗಳನ್ನು ಭಾರತದಲ್ಲಿ ಬ್ಯಾನ್ ಮಾಡಲಾಯಿತು. ಅಲ್ಲಿನ ಕಲಾವಿದರು ಹಾಗೂ ಗಾಯಕರಿಗೆ ಗೇಟ್ ಪಾಸ್ ನೀಡಲಾಯಿತು. ಈಗ ದಶಕಗಳ ಬಳಿಕ ಪಾಕಿಸ್ತಾನದ ಸಿನಿಮಾ ಭಾರತದಲ್ಲಿ ರಿಲೀಸ್ ಆಗುತ್ತಿದೆ. ಪಾಕಿಸ್ತಾನದಲ್ಲಿ ಸೂಪರ್ ಹಿಟ್ ಆದ ‘ದಿ ಲೆಜೆಂಡ್ಸ್ ಆಫ್ ಮೌಲಾ ಜತ್’ ಸಿನಿಮಾ (The Legend of Maula Jatt Movie) ಅನ್ನು ಐನಾಕ್ಸ್ ಭಾರತದಲ್ಲಿ ರಿಲೀಸ್ ಮಾಡಲು ಮುಂದಾಗಿದೆ. ಇದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.
‘ದಿ ಲೆಜೆಂಡ್ಸ್ ಆಫ್ ಮೌಲಾ ಜತ್’ ಚಿತ್ರದಲ್ಲಿ ಫವಾದ್ ಖಾನ್ ಹಾಗೂ ಮಹಿರಾ ಖಾನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ (2022) ಈ ವರ್ಷ ಅಕ್ಟೋಬರ್ 13ರಂದು ರಿಲೀಸ್ ಆಗಿದೆ. ಎರಡು ತಿಂಗಳ ಬಳಿಕ ಇದನ್ನು ಭಾರತದಲ್ಲಿ ರಿಲೀಸ್ ಮಾಡುವ ಸಾಹಸಕ್ಕೆ ಐನಾಕ್ಸ್ ಮುಂದಾಗಿದೆ. ಈ ಬೆಳವಣಿಗೆಯನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಹಾಗಂತ ಈ ಸಿನಿಮಾ ದೇಶಾದ್ಯಂತ ತೆರೆಗೆ ಬರುತ್ತಿಲ್ಲ. ‘ಈ ಚಿತ್ರ ಪಂಜಾಬ್ ಹಾಗೂ ದೆಹಲಿ ಭಾಗದಲ್ಲಿ ರಿಲೀಸ್ ಆಗಲಿದೆ. ಪಂಜಾಬಿ ಮಾತನಾಡುವವರಿಗೋಸ್ಕರ ಈ ಸಿನಿಮಾ ರಿಲೀಸ್ ಆಗಲಿದೆ’ ಎಂದು ಐನಾಕ್ಸ್ ತಿಳಿಸಿದೆ. ಈ ಬಗ್ಗೆ ಮಲ್ಟಿಪ್ಲೆಕ್ಸ್ ಚೈನ್ ಪಿವಿಆರ್ ಮಾಹಿತಿ ನೀಡಿದೆ. ನಂತರ ಈ ಪೋಸ್ಟ್ನ ಡಿಲೀಟ್ ಮಾಡಲಾಗಿದೆ. ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಪೋಸ್ಟ್ ಡಿಲೀಟ್ ಮಾಡಲಾಗಿದೆ ಎನ್ನಲಾಗುತ್ತಿದೆ.
‘ದಿ ಲೆಜೆಂಡ್ಸ್ ಆಫ್ ಮೌಲಾ ಜತ್’ ಸಿನಿಮಾ 50 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾಗಿದೆ. ಈ ಸಿನಿಮಾ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಪಾಕಿಸ್ತಾನದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ. ಈ ಚಿತ್ರವನ್ನು ಬಿಲಾಲ್ ಲಷರಿ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: ‘ನಮ್ಮ ಸಿನಿಮಾ RRR ಚಿತ್ರದ ಕಲೆಕ್ಷನ್ ಹಿಂದಿಕ್ಕಿದೆ; ಪಾಕಿಸ್ತಾನದ ಬಿಗ್ ಬಜೆಟ್ ಚಿತ್ರತಂಡದಿಂದ ಘೋಷಣೆ
2011ರಲ್ಲಿ ‘ಬೋಲ್ ಸಿನಿಮಾ ತೆರೆಗೆ ಬಂದಿತ್ತು. ಅದಾದ ಬಳಿಕ ಯಾವುದೇ ಪಾಕಿಸ್ತಾನ ಸಿನಿಮಾ ಭಾರದದ ಚಿತ್ರಮಂದಿರದಲ್ಲಿ ರಿಲೀಸ್ ಆಗಿಲ್ಲ. ಈಗ ‘ದಿ ಲೆಜೆಂಡ್ಸ್ ಆಫ್ ಮೌಲಾ ಜತ್’ ಸಿನಿಮಾ 11 ವರ್ಷಗಳ ಬಳಿಕ ತೆರೆಗೆ ಬರುತ್ತಿದೆ. ಈ ಸಿನಿಮಾಗೆ ತೀವ್ರ ವಿರೋಧ ವ್ಯಕ್ತವಾದರೆ ಚಿತ್ರವನ್ನು ರಿಲೀಸ್ ಮಾಡದೆ ಇರಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:15 am, Tue, 27 December 22







