ಪುನೀತ್ ರಾಜ್ಕುಮಾರ್ ನಟನೆಯ ‘ಯುವರತ್ನ’ ಸಿನಿಮಾ ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ತೆರೆಕಂಡಿತ್ತು. ಅವರು ಬದುಕಿದ್ದಾಗ ತೆರೆಕಂಡ ಕೊನೆಯ ಚಿತ್ರ ಇದು. ಈಗ ಅವರ ನಟನೆಯ ‘ಜೇಮ್ಸ್’, ಅತಿಥಿ ಪಾತ್ರ ಮಾಡಿರುವ ‘ಲಕ್ಕಿ ಮ್ಯಾನ್’ ಸಿನಿಮಾಗಳು ರಿಲೀಸ್ ಆಗಬೇಕಿವೆ. ಆದರೆ, ಅಭಿಮಾನಿಗಳ ಜತೆ ಕುಳಿತು ಸಿನಿಮಾ ನೋಡೋಕೆ ಅವರಿಲ್ಲ. ಈಗ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 15ರಂದು ಉದಯ ಟಿವಿಯಲ್ಲಿ ‘ಯುವರತ್ನ’ ಸಿನಿಮಾ ಪ್ರಸಾರವಾಗಿದೆ. ಈ ಚಿತ್ರವನ್ನು ಅಭಿಮಾನಿಗಳು ಸ್ವಾಗತ ಮಾಡಿಕೊಂಡ ರೀತಿ ಕಣ್ತುಂಬಿ ಬರುವಂತಿತ್ತು. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿವೆ.
ಪುನೀತ್ಗೆ ದೊಡ್ಡ ಅಭಿಮಾನಿ ಬಳಗ ಇದೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಅವರನ್ನು ಆರಾಧಿಸುವ ಸಾಕಷ್ಟು ಮಂದಿ ಇದ್ದಾರೆ. ಅವರ ಸಿನಿಮಾ ರಿಲೀಸ್ ಆಗುತ್ತಿದೆ ಎಂದರೆ ಅಭಿಮಾನಿಗಳು ಸಂಭ್ರಮಿಸುತ್ತಿದ್ದರು. ಅವರ ಕಟೌಟ್ಗೆ ಮಾಲೆ ಹಾಕಿ, ಹಾಲಿನ ಅಭಿಷೇಕ ಮಾಡುತ್ತಿದ್ದರು. ‘ಯುವರತ್ನ’ ಸಿನಿಮಾವನ್ನು ಕಿರುತೆರೆ ಪ್ರೇಕ್ಷಕರು ಹೀಗೆಯೇ ಸ್ವಾಗತಿಸಿದ್ದಾರೆ.
‘ಯುವರತ್ನ’ ಸಿನಿಮಾ ಪ್ರಸಾರವಾಗುತ್ತಿದ್ದಂತೆ ಅವರ ಅಭಿಮಾನಿಗಳು ಟಿವಿಗೆ ಹಾರ ಹಾಕಿ ಪೂಜೆ ಮಾಡಿದ್ದಾರೆ. ಈ ಮೂಲಕ ಪುನೀತ್ ಸತ್ತಿಲ್ಲ ಎನ್ನುವ ಭಾವನೆಯನ್ನು ಮನದಲ್ಲಿ ಇಟ್ಟುಕೊಂಡಿದ್ದಾರೆ. ಈ ರೀತಿ ಮಾಡಿರುವುದು ಕೇವಲ ಒಬ್ಬಿಬ್ಬರಲ್ಲ. ಅನೇಕರು ಇದೇ ರೀತಿ ‘ಯುವರತ್ನ’ನನ್ನು ಸ್ವಾಗತಿಸಿದ್ದಾರೆ. ಸದ್ಯ, ವಿಡಿಯೋ ವೈರಲ್ ಆಗುತ್ತಿದೆ. ಇದು ಪುನೀತ್ ಮೇಲಿನ ಅಭಿಮಾನಕ್ಕೆ ಸಾಕ್ಷಿ ಆಗಿದೆ.
It’s all about yesterday scenerio across Karnataka State#Yuvarathnaa #PuneethRajkumar @PuneethRajkumar @SanthoshAnand15 @hombalefilms pic.twitter.com/7tRo0Jno0q
— Appu ?? (@PlzComeBackAppu) January 16, 2022
Craze ka Baap ??#Yuvarathnaa #PuneethRajkumar ? pic.twitter.com/yRtQ3zxtVc
— ಪವರ್ ಸ್ಟಾರ್™ / ?????ᵀʰᵉ ᵀʳᵃᵈᵉᴹᵃʳᵏ (@AppuBossFan) January 15, 2022
#Yuvarathnaa Craze Level ??
Fan Girls……?#KingAppu #PuneethRajkumar pic.twitter.com/YFXNWn4d9s
— ಪವರ್ ಸ್ಟಾರ್™ / ?????ᵀʰᵉ ᵀʳᵃᵈᵉᴹᵃʳᵏ (@AppuBossFan) January 15, 2022
‘ಯುವರತ್ನ’ ಚಿತ್ರಕ್ಕೆ ಸಂತೋಷ್ ಆನಂದ್ರಾಮ್ ನಿರ್ದೇಶನ ಮಾಡಿದ್ದು, ಸಾಯೆಶಾ ಸೈಗಲ್ ನಾಯಕಿಯಾಗಿ ನಟಿಸಿದ್ದಾರೆ. ಪ್ರತಿಷ್ಠಿತ ‘ಹೊಂಬಾಳೆ ಫಿಲ್ಮ್ಸ್’ ಮೂಲಕ ‘ಯುವರತ್ನ’ ಸಿನಿಮಾ ನಿರ್ಮಾಣ ಆಗಿದೆ. 2021ರ ಏಪ್ರಿಲ್ 1ರಂದು ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆ ಆಗಿತ್ತು. ಆ ಸಂದರ್ಭದಲ್ಲಿ ಕೊರೊನಾ 2ನೇ ಅಲೆಯ ಹಾವಳಿ ಇದ್ದಿದ್ದರಿಂದ ಚಿತ್ರಮಂದಿರದಲ್ಲಿ ಶೇ.50 ಆಸನ ಮಿತಿ ನಿಯಮವನ್ನು ಜಾರಿ ಮಾಡಲಾಯಿತು. ಇದರಿಂದ ಚಿತ್ರದ ಕಲೆಕ್ಷನ್ಗೆ ಹೊಡೆತಬಿದ್ದಿತ್ತು. ಅಲ್ಲದೇ ಬಹುಪಾಲು ಪ್ರೇಕ್ಷಕರಿಗೆ ಈ ಚಿತ್ರವನ್ನು ನೋಡಲು ಸಾಧ್ಯವಾಗಿರಲಿಲ್ಲ.
ಇದನ್ನೂ ಓದಿ: ಪುನೀತ್ ಯುವರತ್ನ, ಶಿವರಾಂ ಭಕ್ತಿರತ್ನ; ತಿಂಗಳಲ್ಲಿ ಎರಡು ರತ್ನಗಳನ್ನು ಕಳೆದುಕೊಂಡಿದ್ದೇವೆ: ನಿರ್ದೇಶಕ ಭಗವಾನ್ ಕಂಬನಿ
ಉದಯ ಟಿವಿಯಲ್ಲಿ ಪ್ರಸಾರ ಆಗಲಿದೆ ‘ಯುವರತ್ನ’ ಚಿತ್ರ; ದಿನಾಂಕ, ಸಮಯದ ಬಗ್ಗೆ ಇಲ್ಲಿದೆ ವಿವರ