ಕಾಂಗ್ರೆಸ್ ನಾಯಕ ಹಾಗೂ ಸಚಿವ ಜಮೀರ್ ಅಹ್ಮದ್ ಅವರ ಮಗ ಝೈದ್ ಖಾನ್ (Zaid Khan) ಅವರು ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅವರ ನಟನೆಯ ‘ಬನಾರಸ್’ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಟೈಮ್ ಟ್ರಾವೆಲ್ ಕಾನ್ಸೆಪ್ಟ್ ಆಧರಿಸಿ ಈ ಸಿನಿಮಾ ಮೂಡಿ ಬಂದಿತ್ತು. ಈಗ ಅವರ ಎರಡನೇ ಸಿನಿಮಾ ಬಗ್ಗೆ ಇತ್ತೀಚೆಗೆ ಅಪ್ಡೇಟ್ ಸಿಕ್ಕಿತ್ತು. ಈ ಚಿತ್ರದ ಹೊಸ ಪೋಸ್ಟರ್ ಗಮನ ಸೆಳೆದಿದೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘ZK -02’ ಎಂದು ಶೀರ್ಷಿಕೆ ಇಡಲಾಗಿದೆ.
ಈ ವರ್ಷ ಚಿಕ್ಕಣ್ಣ ನಟನೆಯ ‘ಉಪಾಧ್ಯಕ್ಷ’ ಸಿನಿಮಾ ರಿಲೀಸ್ ಆಗಿ ಗಮನ ಸೆಳೆಯಿತು. ಈ ಚಿತ್ರಕ್ಕೆ ಅನಿಲ್ ಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ಅವರ ಜೊತೆ ಝೈದ್ ಖಾನ್ ಕೈ ಜೋಡಿಸಿದ್ದಾರೆ. ಈ ಚಿತ್ರ ಪ್ರೇಮ ಕಥೆ ಹೊಂದಿರಲಿದೆ ಎನ್ನುವ ಸೂಚನೆ ಪೋಸ್ಟರ್ನಲ್ಲಿ ಸಿಕ್ಕಿದೆ. ಪೋಸ್ಟರ್ನಲ್ಲಿ ಮದ್ಯದ ಬಾಟಲಿ ಇದೆ. ಬೆಂಚ್ ಹಿಂಭಾಗದಲ್ಲಿ ‘ಬ್ಲಡಿ ಲವ್’ ಎಂದು ಬರೆಯಲಾಗಿದೆ. ಝೈದ್ ಖಾನ್ ಅವರು ಬೆನ್ನು ತೋರಿಸಿ ಕುಳಿತಿದ್ದಾರೆ. ಎದುರು ಭಾಗದಲ್ಲಿ ಹುಡುಗಿಯೊಬ್ಬಳ ಫೋಟೋ ಇದೆ. ಸದ್ಯದಲ್ಲೇ ಫಸ್ಟ್ ಲುಕ್ ರಿಲೀಸ್ ಮಾಡುವುದಾಗಿ ಪೋಸ್ಟರ್ ಮೂಲಕ ತಿಳಿಸಲಾಗಿದೆ.
ಝೈದ್ ಖಾನ್ ಹೀರೋ ನಟಿಸುತ್ತಿರುವ ಎರಡನೇ ಸಿನಿಮಾ ಇದು. ಆಶ್ರಿತ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. ಅನಿಲ್ ಕುಮಾರ್ ಅವರು ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಜೆ.ಎಸ್ ವಾಲಿ ಅವರು ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ, ಅರ್ಜುನ್ ಜನ್ಯ ಸಂಗೀತ ಸಂಯೋಜನೆ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಸಿನಿಮಾಗೆ ಇದೆ.
ಇದನ್ನೂ ಓದಿ: ಝೈದ್ ಖಾನ್ಗೆ ಆಕ್ಷನ್-ಕಟ್ ಹೇಳಲಿರುವ ‘ಉಪಾಧ್ಯಕ್ಷ’ ನಿರ್ದೇಶಕ
ಝೈದ್ ಖಾನ್ ಅವರ ಮೊದಲ ಸಿನಿಮಾ ‘ಬನಾರಸ್’ಗೆ ಸೋನಲ್ ಮೊಂತೆರೋ ನಾಯಕಿ ಆಗಿದ್ದರು. ಜಯತೀರ್ಥ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರ 2022ರ ನವೆಂಬರ್ 4ರಂದು ರಿಲೀಸ್ ಆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ