‘ವಿಕ್ರಾಂತ್ ರೋಣ’ ಸಿನಿಮಾ ವಿತರಣೆಗೆ ಮುಂದೆಬಂದ ಸಂಸ್ಥೆಗಳಿವು; ಇಲ್ಲಿದೆ ಮಾಹಿತಿ

| Updated By: ರಾಜೇಶ್ ದುಗ್ಗುಮನೆ

Updated on: Jul 14, 2022 | 9:21 PM

ಸುದೀಪ್​ಗೆ ಪರಭಾಷೆಯಲ್ಲೂ ಅಭಿಮಾನಿಗಳು ಇದ್ದಾರೆ. ಈಗಾಗಲೇ ಹಿಂದಿ, ತೆಲುಗು ಭಾಷೆಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಈ ಕಾರಣಕ್ಕೂ ಹಲವು ದೊಡ್ಡ ನಿರ್ಮಾಣ ಸಂಸ್ಥೆಗಳು ‘ವಿಕ್ರಾಂತ್ ರೋಣ’ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿವೆ.

‘ವಿಕ್ರಾಂತ್ ರೋಣ’ ಸಿನಿಮಾ ವಿತರಣೆಗೆ ಮುಂದೆಬಂದ ಸಂಸ್ಥೆಗಳಿವು; ಇಲ್ಲಿದೆ ಮಾಹಿತಿ
ಸುದೀಪ್
Follow us on

‘ವಿಕ್ರಾಂತ್ ರೋಣ’ ಸಿನಿಮಾ (Vikrant Rona Movie) ಸಾಕಷ್ಟು ಹೈಪ್ ಸೃಷ್ಟಿ ಮಾಡಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದೆ. ಈ ಸಿನಿಮಾ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ. ಈ ಸಿನಿಮಾ 3ಡಿಯಲ್ಲಿ ತೆರೆಗೆ ಬರುತ್ತಿದೆ ಅನ್ನೋದು ವಿಶೇಷ. ಈ ಚಿತ್ರಕ್ಕೆ ಅನೂಪ್ ಭಂಡಾರಿ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ಕನ್ನಡ ಮಾತ್ರವಲ್ಲದೆ, ಹಿಂದಿ, ತಮಿಳು, ತೆಲುಗು ಮೊದಲಾದ ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ವಿಶೇಷ ಎಂದರೆ ಪರಭಾಷೆಯಲ್ಲಿ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಈ ಚಿತ್ರವನ್ನು ಬಿಡುಗಡೆ ಮಾಡುವ ಜವಾಬ್ದಾರಿ ವಹಿಸಿಕೊಂಡಿದೆ. ತಮಿಳಿನಲ್ಲಿ ಈ ಚಿತ್ರವನ್ನು ಜೀ ಸ್ಟುಡಿಯೋಸ್ (Zee Studios) ವಿತರಣೆ ಮಾಡಲು ಮುಂದೆ ಬಂದಿದ್ದು, ಚಿತ್ರಕ್ಕೆ ದೊಡ್ಡ ಬಲ ಸಿಕ್ಕಂತೆ ಆಗಿದೆ.

ಸುದೀಪ್​ಗೆ ಪರಭಾಷೆಯಲ್ಲೂ ಅಭಿಮಾನಿಗಳು ಇದ್ದಾರೆ. ಈಗಾಗಲೇ ಹಿಂದಿ, ತೆಲುಗು ಭಾಷೆಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಈ ಕಾರಣಕ್ಕೂ ಹಲವು ದೊಡ್ಡ ನಿರ್ಮಾಣ ಸಂಸ್ಥೆಗಳು ‘ವಿಕ್ರಾಂತ್ ರೋಣ’ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿವೆ. ಈ ವಿಚಾರ ಕೇಳಿ ಸುದೀಪ್ ಫ್ಯಾನ್ಸ್ ಸಖತ್ ಖುಷಿ ಪಟ್ಟಿದ್ದಾರೆ.

ಇದನ್ನೂ ಓದಿ
Kichcha Sudeep: ಕಿಚ್ಚ ಸುದೀಪ್​ ಬಗ್ಗೆ ಅವಹೇಳನಕಾರಿ ವಿಡಿಯೋ ಮಾಡಿದ ವ್ಯಕ್ತಿ ವಿರುದ್ಧ ನಿರ್ದೇಶಕ ನಂದ ಕಿಶೋರ್​ ಆಕ್ರೋಶ
ಕಿಚ್ಚ ಸುದೀಪ್​ಗೆ ಸಿಕ್ತು ಮತ್ತೊಂದು ಬ್ಯಾಟ್ ಗಿಫ್ಟ್​; ಇದರಲ್ಲಿದೆ ಹಲವು ದಿಗ್ಗಜರ ಆಟೋಗ್ರಾಫ್​
‘ವಿಕ್ರಾಂತ್ ರೋಣ’ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಮಿಂಚಿದ ಸುದೀಪ್​-ಜಾಕ್ವೆಲಿನ್
Vikrant Rona Press Meet: ರಕ್ಷಿತ್​ ಶೆಟ್ಟಿಯ ಮಾತಿಗೆ ಫಿದಾ ಆಗಿ ವೇದಿಕೆಗೆ ಬಂದು ತಬ್ಬಿಕೊಂಡ ಕಿಚ್ಚ ಸುದೀಪ್​

ಕರ್ನಾಟಕದಲ್ಲಿ ‘ಕಿಚ್ಚ ಕ್ರಿಯೇಶನ್ಸ್’ ಹಾಗೂ ‘ಶಾಲಿನಿ ಆರ್ಟ್ಸ್’ ಮೂಲಕ ‘ವಿಕ್ರಾಂತ್ ರೋಣ’ ವಿತರಣೆ ಆಗಲಿದೆ. ಕರ್ನಾಟಕದಲ್ಲಿ ಈ ಚಿತ್ರ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ಆ ಸಂದರ್ಭದಲ್ಲಿ ಯಾವುದೇ ದೊಡ್ಡ ಸಿನಿಮಾಗಳು ತೆರೆಗೆ ಬರುತ್ತಿಲ್ಲ. ಹೀಗಾಗಿ, ಸುದೀಪ್ ಚಿತ್ರಕ್ಕೆ ಹೆಚ್ಚು ಪರದೆಗಳು ಸಿಗುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: BBK 9: ‘ಬಿಗ್​ ಬಾಸ್ ಕನ್ನಡ ಸೀಸನ್​ 9’​ ಪ್ರೋಮೋ ಶೂಟಿಂಗ್​; ಕಿಚ್ಚ ಸುದೀಪ್​ ಗೆಟಪ್​ ​ನೋಡಿ ಫ್ಯಾನ್ಸ್​ ಫಿದಾ

ಬಾಲಿವುಡ್​ನಲ್ಲಿ ಸುದೀಪ್​ಗೆ ಸಲ್ಮಾನ್ ಖಾನ್ ಸಾಥ್ ನೀಡಿದ್ದಾರೆ. ‘ಸಲ್ಮಾನ್ ಖಾನ್ ಫಿಲಮ್ಸ್’ ಹಾಗೂ ‘ಪಿವಿಆರ್ ಪಿಕ್ಚರ್ಸ್’ ಉತ್ತರ ಭಾರತದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ. ಆಂಧ್ರ ಹಾಗೂ ತೆಲಂಗಾಣದಲ್ಲಿ ‘ಕಾಸ್ಮೋಸ್ ಎಂಟರ್​​ಟೇನ್​ಮೆಂಟ್ಸ್’ ಮೂಲಕ​​ ‘ವಿಕ್ರಾಂತ್​ ರೋಣ’ ಸಿನಿಮಾ ಹಂಚಿಕೆ ಆಗಲಿದೆ. ತಮಿಳಿನಲ್ಲಿ ‘ಜೀ ಸ್ಟುಡಿಯೋಸ್’ ಮೂಲಕ ಸುದೀಪ್ ಸಿನಿಮಾ ವಿತರಣೆಯಾಗಲಿದೆ. ಮಲಯಾಳಂನಲ್ಲಿ ದುಲ್ಖರ್ ಸಲ್ಮಾನ್ ಅವರ ‘ವೇಫೇರರ್ ಫಿಲಮ್ಸ್’ ಮೂಲಕ ಚಿತ್ರ ವಿತರಣೆಯಾಗಲಿದೆ. ವಿದೇಶದಲ್ಲಿ ‘ಒನ್ ಟ್ವೆಂಟಿ 8 ಮೀಡಿಯಾ’ ಈ ಚಿತ್ರವನ್ನು ವಿತರಣೆ ಮಾಡಲಿದೆ.

Published On - 8:22 pm, Thu, 14 July 22