ರಶ್ಮಿಕಾಗೋಸ್ಕರ ಅತಿಥಿ ಪಾತ್ರ ಮಾಡಲು ರೆಡಿ ಆಗಿದ್ದ ಸಂದೀಪ್ ವಂಗ; ನೋ ಎಂದಿದ್ದೇಕೆ?

ರಶ್ಮಿಕಾ ಮಂದಣ್ಣ ಅವರು ‘ದಿ ಗರ್ಲ್​ಫ್ರೆಂಡ್’ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ದೀಕ್ಷಿತ್ ಶೆಟ್ಟಿ ಹೀರೋ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಹುಡುಗ ಹಾಗೂ ಹುಡುಗಿ ಮಧ್ಯೆ ಇರೋ ಪ್ರೀತಿ ವಿಚಾರವನ್ನು ಸಿನಿಮಾದಲ್ಲಿ ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಸಂದೀಪ್ ಅವರು ಅತಿಥಿ ಪಾತ್ರ ಮಾಡಬೇಕಿತ್ತು.

ರಶ್ಮಿಕಾಗೋಸ್ಕರ ಅತಿಥಿ ಪಾತ್ರ ಮಾಡಲು ರೆಡಿ ಆಗಿದ್ದ ಸಂದೀಪ್ ವಂಗ; ನೋ ಎಂದಿದ್ದೇಕೆ?
ರಶ್ಮಿಕಾ-ಸಂದೀಪ್

Updated on: Oct 28, 2025 | 12:54 PM

ಸಂದೀಪ್ ರೆಡ್ಡಿ ವಂಗ (Sandeep Reddy Vanga) ಆಗಾಗ ಸುದ್ದಿ ಆಗುತ್ತಾ ಇರುತ್ತಾರೆ. ಅವರು ನಿರ್ದೇಶನ ಮಾಡುತ್ತಿರುವ ‘ಸ್ಪಿರಿಟ್’ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರು ಅತಿಥಿ ಪಾತ್ರ ಮಾಡಬೇಕಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅವರು ನೋ ಎಂದರು. ಈ ವಿಚಾರ ಸಾಕಷ್ಟು ಚರ್ಚೆ ಆಯಿತು. ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆದವು. ಈಗ ಸಂದೀಪ್ ರೆಡ್ಡಿ ವಂಗ ಅವರೇ ಸಿನಿಮಾ ಒಂದರಲ್ಲಿ ನಟಿಸೋದಾಗಿ ಹೇಳಿ ಆ ಬಳಿಕ ನೋ ಎಂದಿದ್ದಾರೆ ಎಂದು ವರದಿ ಆಗಿದೆ.

ರಶ್ಮಿಕಾ ಮಂದಣ್ಣ ಅವರು ‘ದಿ ಗರ್ಲ್​ಫ್ರೆಂಡ್’ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ದೀಕ್ಷಿತ್ ಶೆಟ್ಟಿ ಹೀರೋ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಹುಡುಗ ಹಾಗೂ ಹುಡುಗಿ ಮಧ್ಯೆ ಇರೋ ಪ್ರೀತಿ ವಿಚಾರವನ್ನು ಸಿನಿಮಾದಲ್ಲಿ ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಸಂದೀಪ್ ಅವರು ಅತಿಥಿ ಪಾತ್ರ ಮಾಡಬೇಕಿತ್ತು. ಆದರೆ, ಕೊನೇ ಕ್ಷಣದಲ್ಲಿ ಅವರು ಇದನ್ನು ತಿರಸ್ಕರಿಸಿದರು ಎನ್ನಲಾಗಿದೆ.

ಸಂದೀಪ್ ನಿರ್ದೇಶನದ ‘ಅನಿಮಲ್’ ಸಿನಿಮಾಗೆ ರಶ್ಮಿಕಾ ನಾಯಕಿ. ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಹೀಗಾಗಿ, ರಶ್ಮಿಕಾ ಹಾಗೂ ಸಂದೀಪ್ ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿದೆ. ಈ ಗೆಳೆತನದ ಕಾರಣದಿಂದಲೇ ರಶ್ಮಿಕಾ ಮಂದಣ್ಣ ಅವರು ಸಂದೀಪ್ ಬಳಿ ‘ಗರ್ಲ್​ಫ್ರೆಂಡ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವಂತೆ ಕೋರಿದ್ದರು. ಇದಕ್ಕೆ ಸಂದೀಪ್ ಒಪ್ಪಿದ್ದರು. ಆದರೆ, ಅವರಿಗೆ ಈ ಪಾತ್ರ ತಮಗೆ ಸೂಕ್ತ ಅಲ್ಲ ಎನಿಸಿತು.

ಇದನ್ನೂ ಓದಿ
ಪುನೀತ್ ಪ್ರೀತಿ ವಿಚಾರ ಹೇಳಿದಾಗ ರಾಜ್​ಕುಮಾರ್ ರಿಯಾಕ್ಷನ್ ಹೇಗಿತ್ತು?
ಸಾವಿರ ಕೋಟಿ ತಲುಪಲ್ಲ ‘ಕಾಂತಾರ: ಚಾಪ್ಟರ್ 1’ ಕಲೆಕ್ಷನ್; ದೊಡ್ಡ ಕನಸು ಭಗ್ನ
‘ಜಾನ್ವಿ ಗೆಳೆತನದಿಂದ ನನಗೆ ಕಳಂಕ ಬಂದಿದೆ’; ಬದಲಾದ ಅಶ್ವಿನಿ ಗೌಡ
‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರಿಷಬ್ ಮಾಯಕಾರನಾಗಲು ಬೇಕಾಯ್ತು 6 ಗಂಟೆ

ಇದನ್ನೂ ಓದಿ: ಸಂದೀಪ್ ರೆಡ್ಡಿ ವಂಗ ಯಾವಾಗಲೂ ಕುರ್ತಾ ಧರಿಸೋದು ಏಕೆ? ಆ ಘಟನೆಯೇ ಕಾರಣ

ಸಂದೀಪ್​ಗೆ ಕೊಡಲಾದ ಪಾತ್ರ ಕೇವಲ ಅತಿಥಿ ಪಾತ್ರ ಆಗಿರಲಿಲ್ಲ. ಇದಕ್ಕೆ ಸಾಕಷ್ಟು ತೂಕ ಇದೆಯಂತೆ. ಇದನ್ನು ತಾವು ಮಾಡೋ ಬದಲು ಅದಕ್ಕೆ ಸೂಕ್ತ ಎನಿಸಿದ ಕಲಾವಿದರೇ ಮಾಡಲಿ ಎಂಬುದು ಸಂದೀಪ್ ಅವರ ಅಭಿಪ್ರಾಯ ಆಗಿತ್ತು. ಈ ಕಾರಣದಿಂದಲೇ ಅವರು ತಾವು ನಟಿಸೋದಿಲ್ಲ ಎಂದರು. ನಂತರ ಇದನ್ನು ವೆನ್ನಲ್ಲ ಕಿಶೋರ್​ಗೆ ನೀಡಲಾಯಿತು. ಅವರು ಕೂಡ ಆಫರ್ ತಿರಸ್ಕರಿಸಿದರು. ಕೊನೆಗೆ ಚಿತ್ರದ ನಿರ್ದೇಶಕ ರಾಹುಲ್ ರವೀಂದ್ರನ್ ಅವರೇ ಈ ಚಿತ್ರದಲ್ಲಿ ನಟಿಸಬೇಕಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.