ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಯನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸರ್ಕಾರ ಗೋಲ್ಡನ್ ವೀಸಾ ನೀಡಿದೆ. ಈ ಫಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಅವರಿಗೆ ಗೋಲ್ಡನ್ ವೀಸಾ ಸಿಕ್ಕಿರುವುದಕ್ಕೆ ಸಾಕಷ್ಟು ಜನರು ಶುಭಾಶಯ ಕೋರಿದ್ದಾರೆ.
ಗೋಲ್ಡನ್ ವೀಸಾ ಪಡೆದುಕೊಂಡಿರುವ ಫೋಟೋ ಹಂಚಿಕೊಂಡಿರುವ ಸಂಜಯ್ ದತ್, ಆ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅಲ್ಲಿನ ನಾಯಕರು ಹಾಗೂ ಅಧಿಕಾರಿಗಳಿಗೆ ಧನ್ಯವಾದ ಹೇಳಿದ್ದಾರೆ.
Honoured to have received a golden visa for the UAE in the presence of Major General Mohammed Al Marri, Director General of @GDRFADUBAI. Thanking him along with the @uaegov for the honour. Also grateful to Mr. Hamad Obaidalla, COO of @flydubai for his support?? pic.twitter.com/b2Qvo1Bvlc
— Sanjay Dutt (@duttsanjay) May 26, 2021
ಯುಎಇ ಪ್ರಧಾನ ಮಂತ್ರಿ ಹಾಗೂ ಉಪಾಧ್ಯಕ್ಷ ಶೇಖ್ ಮೊಹ್ಮದ್ ಬಿನ್ ರಷೀದ್ ಅಲ್ ಮಕ್ತೌಮ್ 10 ವರ್ಷಗಳ ಗೋಲ್ಡನ್ ವೀಸಾ ನೀಡಲು ಕಳೆದ ಅಕ್ಟೋಬರ್ ತಿಂಗಳಲ್ಲಿ ಅನುಮತಿ ನೀಡಿದ್ದರು. ಈ ಮೂಲಕ ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದರು.
ಏನಿದು ಗೋಲ್ಡನ್ ವೀಸಾ?
ಬೇರೆ ರಾಷ್ಟ್ರದ ಆಯ್ದ ವ್ಯಕ್ತಿಗಳಿಗೆ ಯುಎಇ ಗೋಲ್ಡನ್ ವೀಸಾ ನೀಡುತ್ತದೆ. ಇದನ್ನು ಪಡೆದವರು ಯುಎಇಯಲ್ಲಿ ಯಾವುದೇ ವಿಶೇಷ ಒಪ್ಪಿಗೆ ಇಲ್ಲದೆ, ಬದುಕ ಬಹುದು, ಕೆಲಸ ಮಾಡಬಹುದು, ಉದ್ಯಮ ನಡೆಸಬಹುದು. ಯುಎಇಯಲ್ಲಿನ ಕಂಪೆನಿ ಮೇಲೆ ಶೇ. 100ರಷ್ಟು ಒಡೆತನ ಹೊಂದುವ ಅವಕಾಶ ಸಿಗಲಿದೆ. ಈ ಅವಕಾಶ ಈ ಮೊದಲು ಇರಲಿಲ್ಲ.
‘ಕೆಜಿಎಫ್ 2’ನಲ್ಲಿ ಸಂಜಯ್ ದತ್
ಸಂಜಯ್ ದತ್ ‘ಕೆಜಿಎಫ್ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮುಖ್ಯ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದು ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜುಲೈ 13ರಂದು ಸಿನಿಮಾ ತೆರೆಗೆ ಬರುತ್ತಿದೆ. ಆದರೆ, ಕೊವಿಡ್ ಕಾರಣದಿಂದ ಸಿನಿಮಾ ಮುಂದೂಡಲ್ಪಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಶೀಘ್ರವೇ ಸ್ಪಷ್ಟ ಚಿತ್ರಣ ಸಿಗಲಿದೆ. ಯಶ್ ಮುಖ್ಯಭೂಮಿಕೆಯಲ್ಲಿದ್ದು, ಪ್ರಶಾಂತ್ ನೀಲ್ ನಿರ್ದೇಶನ ಈ ಚಿತ್ರಕ್ಕಿದೆ.
ಇದನ್ನೂ ಓದಿ: ಸಂಜಯ್ ದತ್ ಮಗಳು ತ್ರಿಶಲಾ ಬಾಯ್ ಫ್ರೆಂಡ್ ಸತ್ತಿದ್ದು ಹೇಗೆ? ಸ್ಟಾರ್ ಪುತ್ರಿಗೆ ಕಿರಿಕಿರಿ ತಂದ ಪ್ರಶ್ನೆ!