Sarath Babu: ಕೊನೆಗೂ ಈಡೇರಲಿಲ್ಲ ನಟ ಶರತ್ ಬಾಬು ಕೊನೆಯ ಆಸೆ

Sarath Babu: ಹಿರಿಯ ನಟ ಶರತ್ ಬಾಬು ಮೇ 22 ರಂದು ಹೈದರಾಬಾದ್​ನಲ್ಲಿ ನಿಧನ ಹೊಂದಿದ್ದಾರೆ. ಐದು ದಶಕದಿಂದ ಚಿತ್ರರಂಗದಲ್ಲಿದ್ದು ಸಾಕಷ್ಟು ಹಣ, ಆಸ್ತಿ ಹೆಸರು ಗಳಿಸಿದ್ದ ಶರತ್ ಬಾಬು ಅವರ ಕೊನೆಯ ಆಸೆ ಈಡೇರಿಲ್ಲ.

Sarath Babu: ಕೊನೆಗೂ ಈಡೇರಲಿಲ್ಲ ನಟ ಶರತ್ ಬಾಬು ಕೊನೆಯ ಆಸೆ
ಶರತ್ ಬಾಬು
Follow us
ಮಂಜುನಾಥ ಸಿ.
|

Updated on:May 23, 2023 | 8:28 PM

ಬಹುಭಾಷಾ ಹಿರಿಯ ನಟ ಶರತ್ ಬಾಬು (Sarath Babu) ನಿನ್ನೆ ಹೈದರಾಬಾದ್​ನಲ್ಲಿ (Hyderabad) ನಿಧನ ಹೊಂದಿದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದಲೂ ಅನಾರೋಗ್ಯದಿಂದ ಬಳಲಿದ್ದ ಶರತ್ ಬಾಬುಗೆ ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್​ಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. ಶರತ್ ಬಾಬು ಆರೋಗ್ಯಕ್ಕಾಗಿ ಆತ್ಮೀಯರು, ಅಭಿಮಾನಿಗಳು ಪ್ರಾರ್ಥಿಸಿದ್ದರು ಆದರೆ ಯಾವುದೂ ಫಲಿಸಲಿಲ್ಲ. ಮೇ 22 ರಂದು ಹೈದರಾಬಾದ್​ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಶರತ್ ಕೊನೆಯ ದಿನಗಳ ಹಿತಕರವಾಗಿರಲಿಲ್ಲ. ಸುಮಾರು ಎರಡು ತಿಂಗಳಿಗೂ ಹೆಚ್ಚು ಕಾಲ ಅವರು ಆಸ್ಪತ್ರೆಯ ಬೆಡ್​ ಮೇಲೆ ಐಸಿಯುವಿನ ಉಪಕರಣಗಳ ನಡುವೆಯೇ ಕಳೆದರು. ಶರತ್ ಅವರನ್ನು ಉಳಿಸಿಕೊಳ್ಳಲು ಅವರ ಕುಟುಂಬ ಸದಸ್ಯರು ಬಹಳ ಪ್ರಯತ್ನಪಟ್ಟರಾದರೂ ಅದು ಸಾಧ್ಯವಾಗಿಲ್ಲ. ಆದರೆ ಶರತ್ ಬಾಬು ಅವರ ಕೊನೆಯ ಆಸೆಯೊಂದು ಈಡೇರದೆ ಉಳಿಯಿತು ಎಂಬುದು ಅವರ ಕುಟುಂಬ, ಆಪ್ತೇಷ್ಟರಿಗೆ ಬೇಸರದ ಸಂಗತಿ.

ಸಿನಿಮಾದಿಂದ ತುಸು ಅಂತರ ಕಾಯ್ದುಕೊಂಡಿದ್ದ ಶರತ್ ಕುಮಾರ್, ಆಗೊಮ್ಮೆ ಈಗೊಮ್ಮೆ ಸಣ್ಣ ಪುಟ್ಟ ಪಾತ್ರಗಳಲ್ಲಿ ಮಾತ್ರವೇ ನಟಿಸುತ್ತಿದ್ದರು. ಬರೋಬ್ಬರಿ ಐವತ್ತು ವರ್ಷಗಳ ಕಾಲ ಚಿತ್ರರಂಗದಲ್ಲಿದ್ದ ಶರತ್ ಬಾಬು ಸಿನಿಮಾ ಮುಖೇನ ಒಳ್ಳೆಯ ಹಣ, ಆಸ್ತಿ ಗಳಿಸಿದ್ದರು. ಅವರಿಗೆ ತಮ್ಮ ವಿಶ್ರಾಂತ ಜೀವನಕ್ಕಾಗಿ ಒಂದು ಐಶಾರಾಮಿ ಮನೆಯನ್ನು ಕಟ್ಟಿಕೊಳ್ಳುವ ಆಸೆಯಿತ್ತು. ಅದರಲ್ಲಿಯೂ ಹೈದರಾಬಾದ್​ನ ಹಾರ್ಸ್ಲೆ ಹಿಲ್​ನಲ್ಲಿಯೇ ಮನೆ ಕಟ್ಟು ಆಸೆ ಅವರಿಗಿತ್ತು.

ಅದನ್ನು ನೆರವೇರಿಸಿಕೊಳ್ಳುವ ಪ್ರಯತ್ನದಲ್ಲಿದ್ದ ಶರತ್ ಬಾಬು, ಹಾರ್ಸ್ಲೆ ಹಿಲ್​ನಲ್ಲಿ ಜಾಗ ಖರೀದಿಸಿ ಐಶಾರಾಮಿ ಮನೆ ನಿರ್ಮಾಣವನ್ನು ಸಹ ಆರಂಭಿಸಿದ್ದರು. ಮನೆ ನಿರ್ಮಾಣ ಕಾರ್ಯ ನಡೆಯುತ್ತಿರುವಾಗಲೇ ಶರತ್ ಬಾಬು ಆರೋಗ್ಯದಲ್ಲಿ ವ್ಯತ್ಯಯವವಾಯಿತು. ಅಚಾನಕ್ಕಾಗಿ ಅವರು ಹಾಸಿಗೆ ಹಿಡಿದರು. ಮೊದಲಿಗೆ ಅವರಿಗೆ ಚೆನ್ನೈನಲ್ಲಿಯೇ ಚಿಕಿತ್ಸೆ ನೀಡಲಾಯಿತು. ಆ ಬಳಿಕ ಅವರನ್ನು ಬೆಂಗಳೂರಿಗೆ ಕರೆತಂದು ಚಿಕಿತ್ಸೆ ನೀಡಲಾಯಿತು. ಇಲ್ಲಿ ತುಸು ಚೇತರಿಸಿಕೊಂಡ ಕಾರಣ ಅವರನ್ನು ಹೈದರಾಬಾದ್ ನಿವಾಸಕ್ಕೆ ಕರೆದುಕೊಂಡು ಹೋದರು. ಅಲ್ಲಿ ಹೋದ ಬಳಿಕ ಮತ್ತೆ ಅನಾರೋಗ್ಯ ಕಾಣಿಸಿಕೊಂಡ ಕಾರಣ ಏಪ್ರಿಲ್ 20 ರಂದು ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅದಾದ ಬಳಿಕ ಅಲ್ಲಿಂದ ಹೊರಬರಲೇ ಇಲ್ಲ ಶರತ್ ಬಾಬು.

ಶರತ್ ಬಾಬು ತಮ್ಮ 21ನೇ ವಯಸ್ಸಿನಲ್ಲಿಯೇ ಸಿನಿಮಾದಲ್ಲಿ ನಟಿಸಲು ಆರಂಭಿಸಿದರು. ತಂದೆಯ ವಿರೋಧದ ನಡುವೆಯೂ, ಸ್ನೇಹಿತರ ಹಾಗೂ ತಾಯಿಯ ಬೆಂಬಲದಿಂದ ಸಿನಿಮಾದಲ್ಲಿ ನಟಿಸಲು ಆರಂಭಿಸಿದರು. ನೋಡಲು ಸ್ಪುರದ್ರೂಪಿಯಾಗಿದ್ದ ಶರತ್ ಬಾಬುಗೆ ಕೇಳಿದ ಕೂಡಲೇ ಅವಕಾಶ ದೊರಕಿತು. ಮೊದಲ ಸಿನಿಮಾ ಬಳಿಕ ಶರತ್ ಬಾಬು ಹಿಂತಿರುಗಿ ನೋಡಿದ್ದೇ ಇಲ್ಲ. ಒಂದು ಕಾಲದಲ್ಲಿ ತಮಿಳು-ತೆಲುಗಿನಲ್ಲಿ ದೊಡ್ಡ ಸ್ಟಾರ್ ಆಗಿ ಶರತ್ ಬಾಬು ಮೆರೆದರು. ಕನ್ನಡದಲ್ಲಿ ಅಮೃತವರ್ಷಿಣಿ, ನೀಲಾ, ತುಳಸಿದಳ, ಉಷಾ, ರಣಚಂಡಿ, ಶಕ್ತಿ, ಕಂಪನ, ಗಾಯ, ಹೃದಯ ಹೃದಯ, ಓ ಪ್ರಿಯತಮ, ನಮ್ಮೆಜಮಾನ್ರು, ಬೃಂದಾವನ, ಆರ್ಯನ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರೀತಿಗಾಗಿ ಧಾರಾವಾಹಿಯಲ್ಲಿಯೂ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:54 pm, Tue, 23 May 23

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು