
ಮಹೇಶ್ ಬಾಬು (Mahesh Babu) ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾ (Sarkaru Vaari Paata Movie) ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡುತ್ತಿದೆ. ಚಿತ್ರ ಮೊದಲ ದಿನ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತು. ಆದರೆ, ಮಹೇಶ್ ಬಾಬು ಫ್ಯಾನ್ಸ್ ಸಿನಿಮಾವನ್ನು ಸೋಲೋಕೆ ಬಿಡುತ್ತಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹೀಗಾಗಿ, ಮೂರನೇ ದಿನವಾದ ಶನಿವಾರವೂ (ಮೇ 14) ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿದೆ. ಇದರಿಂದ ಸಿನಿಮಾ ತಂಡ ಖುಷಿಪಟ್ಟಿದೆ. ಇಂದು (ಮೇ 15) ಭಾನುವಾರ. ಹೀಗಾಗಿ, ಚಿತ್ರದ ಕಲೆಕ್ಷನ್ ಮತ್ತಷ್ಟು ಹೆಚ್ಚಬಹುದು. ಎರಡೇ ದಿನಕ್ಕೆ ಚಿತ್ರ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು ವಿಶೇಷ.
ಶುಕ್ರವಾರ ಸಿನಿಮಾ ರಿಲೀಸ್ ಆಗುವುದು ವಾಡಿಕೆ. ಆದರೆ, ‘ಸರ್ಕಾರು ವಾರಿ ಪಾಟ’ ಸಿನಿಮಾ ಗುರುವಾರ (ಮೇ 12) ತೆರೆಗೆ ಬಂತು. ಈ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದ್ದಿದ್ದರಿಂದ ಚಿತ್ರದ ಮೊದಲ ದಿನದ ಕಲೆಕ್ಷನ್ 75 ಕೋಟಿ ರೂಪಾಯಿ ಆಯಿತು. ಎರಡನೇ ದಿನ ಈ ಸಿನಿಮಾ 27.50 ಕೋಟಿ ರೂಪಾಯಿ ಹಾಗೂ ಮೂರನೇ ದಿನ 28.84 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 131.55 ಕೋಟಿ ರೂಪಾಯಿ ಆಗಿದೆ.
#SarkaruVaariPaata WW Box Office
CRUISING towards ₹150 cr milestone.
Day 1 – ₹ 75.21 cr
Day 2 – ₹ 27.50 cr
Day 3 – ₹ 28.84 cr
Total – ₹ 131.55 cr— Manobala Vijayabalan (@ManobalaV) May 15, 2022
‘ಸರ್ಕಾರು ವಾರಿ ಪಾಟ’ ಚಿತ್ರಕ್ಕೆ ಹೆಚ್ಚಿನ ಕಲೆಕ್ಷನ್ ತೆಲುಗು ನಾಡಿನಿಂದ ಹರಿದು ಬಂದಿದೆ. ಮೊದಲ ದಿನ ಈ ಸಿನಿಮಾ ತೆಲುಗು ನಾಡಿನಲ್ಲಿ 52.18 ಕೋಟಿ ರೂಪಾಯಿ ಗಳಿಸಿದೆ. ಎರಡನೇ ದಿನ 17.06 ಕೋಟಿ ರೂಪಾಯಿ ಹಾಗೂ ಮೂರನೇ ದಿನ 19.30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
#SarkaruVaariPaata AP/TS Box Office
Grows from STRENGTH to STRENGTH
Day 1 – ₹ 52.18 cr
Day 2 – ₹ 17.06 cr
Day 3 – ₹ 19.30 cr
Total – ₹ 88.54 cr#MaheshBabu— Manobala Vijayabalan (@ManobalaV) May 15, 2022
ಮಹೇಶ್ ಬಾಬು ಅವರಿಗೆ ದಕ್ಷಿಣ ಭಾರತದಲ್ಲಿ ಸಖತ್ ಬೇಡಿಕೆ ಇದೆ. ಅವರ ಸಿನಿಮಾಗಳು ದಕ್ಷಿಣದಲ್ಲಿ ಸೂಪರ್ ಹಿಟ್ ಆಗುತ್ತವೆ. ಈ ಹಿಂದೆ ಬಿಡುಗಡೆ ಆಗಿದ್ದ ‘ಸರಿಲೇರು ನೀಕೆವ್ವರು’ ಸಿನಿಮಾ ಕೂಡ ಹಿಟ್ ಆಗಿತ್ತು. ಈಗ ಅವರು ‘ಸರ್ಕಾರು ವಾರಿ ಪಾಟ’ ಚಿತ್ರದ ಮೂಲಕ ಮತ್ತೊಂದು ಗೆಲುವು ಕಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಬಾಲಿವುಡ್ ಬಗ್ಗೆ ನೀಡಿದ ಹೇಳಿಕೆ ಕೂಡ ಸಖತ್ ಚರ್ಚೆ ಹುಟ್ಟು ಹಾಕಿದೆ. ‘ಬಾಲಿವುಡ್ಗೆ ನನ್ನನ್ನು ಭರಿಸಲು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದರು. ಆ ಹೇಳಿಕೆ ಕುರಿತು ಬಾಲಿವುಡ್ನ ಅನೇಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ‘ಮಹೇಶ್ ಬಾಬು ಹೇಳಿದ್ದು ಸರಿ’ ಎಂದು ಕಂಗನಾ ರಣಾವತ್ ಪ್ರತಿಕ್ರಿಯಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.