ಡಾಲಿ ಧನಂಜಯ್, ಸತ್ಯದೇವ್ ನಟನೆಯ ‘ಜೀಬ್ರಾ’ ಸಿನಿಮಾದಿಂದ ಫಸ್ಟ್ ಲುಕ್ ರಿಲೀಸ್
‘ಜೀಬ್ರಾ’ ಸಿನಿಮಾದಲ್ಲಿ ಸತ್ಯದೇವ್, ಡಾಲಿ ಧನಂಜಯ್, ಅಮೃತಾ ಐಯ್ಯಂಗಾರ್, ಸತ್ಯರಾಜ್, ಸುನಿಲ್, ಪ್ರಿಯಾ ಭವಾನಿ ಶಂಕರ್, ಊರ್ವಶಿ ರೌಟೇಲಾ ಮುಂತಾದವರು ನಟಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯ ಆಗಿದೆ. ಸತ್ಯದೇವ್ ಬರ್ತ್ಡೇ ಸಲುವಾಗಿ ಅವರ ಫಸ್ಟ್ ಲುಕ್ ಪೋಸ್ಟರ್ ಅನಾವರಣ ಮಾಡಲಾಗಿದೆ. ಈ ಸಿನಿಮಾ ತಂಡದ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ..
ಸತ್ಯದೇವ್ ನಾಯಕನಾಗಿ ನಟಿಸುತ್ತಿರುವ ‘ಜೀಬ್ರಾ’ ಸಿನಿಮಾಗೆ ಈಶ್ವರ್ ಕಾರ್ತಿಕ್ ನಿರ್ದೇಶನ ಮಾಡುತ್ತಿದ್ದಾರೆ. ಈ ಬಹುತಾರಾಗಣದ ಸಿನಿಮಾದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ ಕೂಡ ಒಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇದು ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಸತ್ಯದೇವ್ ಅವರ ಜನ್ಮದಿನದ ಪ್ರಯುಕ್ತ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ‘ಪದ್ಮಜಾ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್’ ಹಾಗೂ ‘ಓಲ್ಡ್ ಟೌನ್ ಪಿಕ್ಚರ್ಸ್’ ಸಂಸ್ಥೆಗಳ ಮೂಲಕ ಈ ಸಿನಿಮಾ ಮೂಡಿಬರುತ್ತಿದೆ. ಎಸ್.ಎನ್. ರೆಡ್ಡಿ, ಎಸ್. ಪದ್ಮಜಾ, ಬಾಲ ಸುಂದರಂ ಹಾಗೂ ದಿನೇಶ್ ಸುಂದರಂ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಎಸ್. ಶ್ರೀಲಕ್ಷ್ಮಿ ರೆಡ್ಡಿ ಅವರು ಸಹ ನಿರ್ಮಾಪಕಿ ಆಗಿದ್ದಾರೆ.
‘ಜೀಬ್ರಾ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ನಲ್ಲಿ ಸತ್ಯದೇವ್ ಅವರು ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಸೂಟ್ ಧರಿಸಿ, ಖಡಕ್ ಲುಕ್‌ನಲ್ಲಿ ಅವರು ಪೋಸ್ ನೀಡಿದ್ದಾರೆ. ಭುಜದ ಮೇಲೆ ಚೀಲ, ಕೈಯಲ್ಲಿ ಪೆನ್ನು ಹಿಡಿದು ಕಾಣಿಸಿಕೊಂಡ ಅವರನ್ನು ನೋಡಿ ಸಿನಿಪ್ರಿಯರ ಕೌತುಕ ಹೆಚ್ಚಿದೆ. ಈ ಪೋಸ್ಟರ್ನ ಬ್ಯಾಕ್‌ರೌಂಡ್‌ನಲ್ಲಿ ನೋಟುಗಳು ಹಾರುತ್ತಿವೆ. ಆ ಮೂಲಕ ಕಥೆಯ ಬಗ್ಗೆ ಸುಳಿವು ಬಿಟ್ಟುಕೊಡಲಾಗಿದೆ. ʻಲಕ್ ಫೇವರ್ಸ್ ದಿ ಬ್ರೇವ್ʼ ಎಂದು ಟ್ಯಾಗ್ ಲೈಗ್ ಸಹ ಗಮನ ಸೆಳೆಯುತ್ತಿದೆ.
Thrilled to bring this exciting role as SURYA to life and can’t wait to share it with you all!
All thanks to the director @EashvarKarthic #snreddy garu, #bala, #dinesh and the whole team of #ZEBRA for this! @Dhananjayaka @priya_Bshankar @JeniPiccinato @SNReddy09… pic.twitter.com/BdmKDExHnS
— Satya Dev (@ActorSatyaDev) July 4, 2024
ಡಾಲಿ ಧನಂಜಯ್, ಸತ್ಯದೇವ್ ಮಾತ್ರವಲ್ಲದೇ ಅಮೃತಾ ಐಯ್ಯಂಗಾರ್, ಸುನಿಲ್, ಪ್ರಿಯಾ ಭವಾನಿ ಶಂಕರ್, ಸತ್ಯರಾಜ್, ಊರ್ವಶಿ ರೌಟೆಲ್ಲ ಮುಂತಾದ ಕಲಾವಿದರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಈಶ್ವರ್ ಕಾರ್ತಿಕ್ ಅವರು ಕಥೆ ಮತ್ತು ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಪೂರ್ಣಗೊಳಿಸಲಾಗಿದೆ. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಸದ್ಯದಲ್ಲೇ ರಿಲೀಸ್ ದಿನಾಂಕದ ಬಗ್ಗೆ ಮಾಹಿತಿ ಹೊರಬೀಳಲಿದೆ.
ಇದನ್ನೂ ಓದಿ: ಕೆಂಪೇಗೌಡ ಪಾತ್ರದಲ್ಲಿ ಡಾಲಿ ಧನಂಜಯ್, ನಾಗಾಭರಣ ನಿರ್ದೇಶಕ
ಕ್ರೈಮ್ ಆ್ಯಕ್ಷನ್ ಎಂಟರ್‌ಟೈನರ್ ಶೈಲಿಯಲ್ಲಿ ‘ಜೀಬ್ರಾ’ ಸಿನಿಮಾ ಮೂಡಿಬರುತ್ತಿದೆ. ರವಿ ಬಸ್ರೂರ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಸತ್ಯ ಪೊನ್ಮಾರ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಅನಿಲ್ ಕ್ರಿಶ್ ಸಂಕಲನ ಮಾಡುತ್ತಿದ್ದಾರೆ. ಮೀರಾಖ್ ಅವರು ಸಂಭಾಷಣೆ ಬರೆದಿದ್ದಾರೆ. ಅಶ್ವಿನಿ ಮುಲ್ಪುರಿ, ಗಂಗಾಧರ ಬೊಮ್ಮರಾಜು ಅವರು ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.