ಯುವರತ್ನ ನಟಿ ಸಾಯೆಶಾಗೆ ಮಗು ಜನಿಸಿದ ಬಳಿಕ ಗಂಡನಿಂದಾಗಿ ಮುಜುಗರ; ಪರಸ್ತ್ರೀ ಜೊತೆ ಆರ್ಯ ಲವ್ವಿಡವ್ವಿ?

 ಜರ್ಮನಿ ಮೂಲದ ವಕೀಲರ ಸಹಾಯದಿಂದ ಯುವತಿ ದೂರು ದಾಖಲು ಮಾಡಿದ್ದಾರೆ. ಇದು ಕೋರ್ಟ್​ ಮೆಟ್ಟಿಲು ಕೂಡ ಏರಿದ್ದು, ನ್ಯಾಯಾಧೀಶರು ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುವಂತೆ ಪೊಲೀಸರಿಗೆ ಹೇಳಿದ್ದಾರೆ ಎಂದು ವರದಿಯಾಗಿದೆ.

ಯುವರತ್ನ ನಟಿ ಸಾಯೆಶಾಗೆ ಮಗು ಜನಿಸಿದ ಬಳಿಕ ಗಂಡನಿಂದಾಗಿ ಮುಜುಗರ; ಪರಸ್ತ್ರೀ ಜೊತೆ ಆರ್ಯ ಲವ್ವಿಡವ್ವಿ?
ಯುವರತ್ನ ನಟಿ ಸಾಯೆಶಾಗೆ ಮಗು ಜನಿಸಿದ ಬಳಿಕ ಗಂಡನಿಂದಾಗಿ ಮುಜುಗರ; ಪರಸ್ತ್ರೀ ಜೊತೆ ಆರ್ಯ ಲವ್ವಿಡವ್ವಿ?
Edited By:

Updated on: Jul 29, 2021 | 3:23 PM

ಬಹುಭಾಷಾ ನಟಿ ಸಾಯೆಶಾ ಸೈಗಲ್ ಅವರು ಇತ್ತೀಚಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳಿಗೆ ಸಂತಸ ಆಗಿದೆ. ಆದರೆ, ಈಗ ಕಹಿ ಸುದ್ದಿಯೊಂದು ಸಿಕ್ಕಿದೆ. ಸಾಯೆಶಾ ಪತಿ, ನಟ ಆರ್ಯ ವಿರುದ್ಧ ಈಗ ವಂಚನೆ ಪ್ರಕರಣವೊಂದು ದಾಖಲಾಗಿದೆ.

ಜರ್ಮನಿ ಮೂಲದ ವಿದ್ಜಾ ಹೆಸರಿನ ಯುವತಿ ಆರ್ಯ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಅವರು ಹೇಳುವ ಪ್ರಕಾರ, ಆರ್ಯ 70 ಲಕ್ಷ ರೂಪಾಯಿ ತೆಗೆದುಕೊಂಡು ಮದುವೆಯಾಗುವುದಾಗಿ ನಂಬಿಸಿದ್ದರಂತೆ. ಆರ್ಯ ಹಾಗೂ ತಮ್ಮ ನಡುವೆ ನಡೆದ ಚಾಟ್​ನ ಸ್ಕ್ರೀನ್​ ಶಾಟ್​ಗಳನ್ನು ವಿದ್ಜಾ ಪೊಲೀಸರ ಜತೆ ಹಂಚಿಕೊಂಡಿದ್ದಾರೆ.

ಜರ್ಮನಿ ಮೂಲದ ವಕೀಲರ ಸಹಾಯದಿಂದ ಯುವತಿ ದೂರು ದಾಖಲು ಮಾಡಿದ್ದಾರೆ. ಇದು ಕೋರ್ಟ್​ ಮೆಟ್ಟಿಲು ಕೂಡ ಏರಿದ್ದು, ನ್ಯಾಯಾಧೀಶರು ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ ಎಂದು ವರದಿಯಾಗಿದೆ. ಮುಂದಿನ ವಿಚಾರಣೆ ಆಗಸ್ಟ್​ 17ಕ್ಕೆ ನಿಗದಿಯಾಗಿದೆ. ಅಚ್ಚರಿಯ ವಿಚಾರ ಎಂದರೆ, ಆರ್ಯ ಆಗಲಿ ಅವರ ತಂಡವಾಗಲಿ ಈ ದೂರನ್ನು ವಿರೋಧಿಸಿಲ್ಲ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

2015ರಲ್ಲಿ ತೆಲುಗಿನ ‘ಅಖಿಲ್’ ಸಿನಿಮಾ ಮೂಲಕ ಬಣ್ಣದ ಬದುಕಿಗೆ ಎಂಟ್ರಿ ನೀಡಿದ ಸಾಯೆಶಾ ಅವರು ತಮಿಳು, ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ. ಪುನೀತ್​ ರಾಜ್​ಕುಮಾರ್​ ಜೊತೆ ‘ಯುವರತ್ನ’ ಸಿನಿಮಾದಲ್ಲಿ ಬಣ್ಣ ಹಚ್ಚುವ ಮೂಲಕ ಅವರು ಸ್ಯಾಂಡಲ್​ವುಡ್​ಗೂ ಕಾಲಿಟ್ಟರು. ಈ ಸುಂದರಿಗೆ ಈಗಿನ್ನೂ 23ರ ಪ್ರಾಯ. ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇಟ್ಟುಕೊಂಡು, ಕೇವಲ 21ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅವರ ನಿರ್ಧಾರಕ್ಕೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದರು. ಅಂದಹಾಗೆ, ಅವರ ಪತಿ ಆರ್ಯ ವಯಸ್ಸು 40.

ಆರ್ಯ ನಟಿಸಿರುವ ‘ಸರ್ಪಟ್ಟ ಪರಂಬರೈ’ ಚಿತ್ರ ಓಟಿಟಿಯಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಅದಕ್ಕೂ ಕೂಡ ಅವರಿಗೆ ಎಲ್ಲರಿಂದ ಅಭಿನಂದನೆ ಸಲ್ಲಿಕೆ ಆಗುತ್ತಿದೆ. ಸಿನಿಮಾದ ಯಶಸ್ಸು ಮತ್ತು ಮಗುವಿನ ಜನನದಿಂದಾಗಿ ಡಬಲ್​ ಸಂಭ್ರಮದ ನಡುವೆ ಈ ಬೆಳವಣಿಗೆ ಅವರ ಫ್ಯಾನ್ಸ್​ಗೆ ಬೇಸರ ತರಿಸಿದೆ.

ಇದನ್ನೂ ಓದಿ: 23 ವರ್ಷದ ಯುವರತ್ನ ನಾಯಕಿ ಸಾಯೇಶಾ ಪತಿ ತಮಿಳಿನ ಸ್ಟಾರ್​ ಹೀರೋ; ಇಲ್ಲಿದೆ ಇವರ ಲವ್​ ಸ್ಟೋರಿ

ಹೆಣ್ಣು ಮಗುವಿಗೆ ಜನ್ಮ ನೀಡಿದ ಯುವರತ್ನ ನಟಿ ಸಾಯೆಶಾ; ಆರ್ಯ ಕುಟುಂಬದಲ್ಲಿ ಸಂಭ್ರಮ