
ತೆಲುಗು ಹಾಗೂ ತಮಿಳಿನಲ್ಲಿ ಮಿಂಚಿ ನಂತರ ‘ಯುವರತ್ನ’ (Sayyeshaa Saigal) ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟವರು ನಟಿ ಸಾಯೇಶಾ ಸೈಗಲ್. ‘ಯುವರತ್ನ’ದಲ್ಲಿ ಸಿಕ್ಕ ಅವಕಾಶವನ್ನು ಸಾಯೇಶಾ ಒಳ್ಳೆಯ ರೀತಿಯಲ್ಲಿ ಬಳಕೆ ಮಾಡಿಕೊಂಡರು ಎಂದೇ ಹೇಳಬಹುದು. ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಹೀಗಿರುವಾಗಲೇ ನಟ ಆರ್ಯ ಅವರನ್ನು ಮದುವೆ ಆದರು. ಸಾಯೇಶಾಗೆ ಈಗ 28 ವರ್ಷ. ಅವರ ಬಗ್ಗೆ ಇಂದು ತಿಳಿದುಕೊಳ್ಳೋಣ.
ಸಾಯೇಶಾ ಅವರು ಮುಂಬೈ ಮೂಲದವರು. ಅವರು ಜನಿಸಿದ್ದು 1997ರ ಆಗಸ್ಟ್ 12ರಂದು. ಸಾಯೇಶಾ ಹಿನ್ನೆಲೆ ಸಣ್ಣದೇನು ಅಲ್ಲ. ಅವರಿಗೆ ಚಿತ್ರರಂಗದ ಹಿನ್ನೆಲೆ ಇದೆ. 90ರ ದಶಕದಲ್ಲಿ ಬಾಲಿವುಡ್ನಲ್ಲಿ ಆ್ಯಕ್ಟಿವ್ ಆಗಿದ್ದ ನಟ ಹಾಗೂ ನಿರ್ಮಾಪಕ ಸುಮೀತ್ ಸೈಗಲ್ ಪುತ್ರಿಯೇ ಸಾಯೇಶಾ. ಹೀಗಾಗಿ, ಇವರಿಗೆ ಸಹಜವಾಗಿಯೇ ನಟನೆ ಬಗ್ಗೆ ಆಸಕ್ತಿ ಮೂಡಿತ್ತು ಎನ್ನಬಹುದು. ಜೊತೆಗೆ ಅವಕಾಶ ಕೂಡ ಸಿಕ್ಕಿತು.
10 ವರ್ಷಗಳ ಹಿಂದೆ ಅಂದರೆ 2015ರಲ್ಲಿ ತೆರೆಗೆ ಬಂದ ತೆಲುಗಿನ ‘ಅಖಿಲ್’ ಸಿನಿಮಾ ಮೂಲಕ ಸಾಯೇಶಾ ಸಿನಿಮಾ ಇಂಡಸ್ಟ್ರಿಗೆ ಕಾಲನ್ನು ಇಟ್ಟಿದ್ದಾರೆ. ನಂತರ ಅಜಯ್ ದೇವಗನ್ ನಟನೆಯ ‘ಶಿವಾಯ್’ ಸಿನಿಮಾದಲ್ಲಿ ಬಣ್ಣ ಹಚ್ಚಲು ಅವಕಾಶ ಪಡೆದುಕೊಂಡರು ಎನ್ನಬಹುದು. ಈ ಮೂಲಕ ಬಾಲಿವುಡ್ನಲ್ಲೂ ಅವರು ಖಾತೆ ತೆರೆದಿದ್ದಾರೆ. ನಂತರ ಸಾಲು ಸಾಲು ತಮಿಳು ಸಿನಿಮಾಗಳಲ್ಲಿ ನಟಿಸಿ ಸಾಯೇಶಾ ಗಮನ ಸೆಳೆದರು.
ಆರ್ಯ ಅವರನ್ನು ಭೇಟಿ ಆಗಿದ್ದು ಕೂಡ ಸೆಟ್ನಲ್ಲಿಯೇ. 2018ರಲ್ಲಿ ತೆರೆಗೆ ಬಂದ ‘ಗಜನಿಕಾಂತ್’ ಸಿನಿಮಾದಲ್ಲಿ ತಮಿಳಿನ ಸ್ಟಾರ್ ಹೀರೋ ಆರ್ಯಗೆ ಜೋಡಿಯಾಗಿ ಸಾಯೇಶಾ ನಟಿಸಿದ್ದರು. ನಂತರ ‘ಕಾಪನ್’, ‘ಟೆಡ್ಡಿ’ ಸಿನಿಮಾಗಳಲ್ಲೂ ಇಬ್ಬರೂ ಒಟ್ಟಾಗಿ ಬಣ್ಣ ಹಚ್ಚಿದರು. ಸಾಲು ಸಾಲು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ ಇವರ ಮಧ್ಯೆ ಸೆಟ್ನಲ್ಲೇ ಪ್ರೀತಿ ಮೂಡಿತು.
ಇದನ್ನೂ ಓದಿ: ‘ಯುವರತ್ನ’ ನಾಯಕಿಗೆ ವಿವಾಹ ವಾರ್ಷಿಕೋತ್ಸವ; ಸಂತಸ ಹಂಚಿಕೊಂಡ ಸಾಯೇಶಾ
ಆರ್ಯ ಹಾಗೂ ಸಾಯೇಶಾ ಕದ್ದುಮುಚ್ಚಿ ಓಡಾಡುತ್ತಿರುವ ಸುದ್ದಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು. ನಂತರ 2019ರ ಮಾರ್ಚ್ 10ರಂದು ಇಬ್ಬರೂ ಮದುವೆ ಆಗಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದರು. ಈ ಮೂಲಕ 21ನೇ ವಯಸ್ಸಿಗೆ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕೆಲ ವರ್ಷಗಳ ಹಿಂದೆ ಅವರು ಮಗು ಕೂಡ ಜನಿಸಿದೆ ಅನ್ನೋದು ವಿಶೇಷ.
ಸಾಯೇಶಾ ಹಾಗೂ ಆರ್ಯ ನಡುವಿನ ವಯಸ್ಸಿನ ಅಂತರ ಆಗಾಗ ಚರ್ಚೆ ಆಗುತ್ತದೆ. ಇವರ ಮಧ್ಯೆ 17 ವರ್ಷಗಳ ಅಂತರ ಇದೆ. ಇದು ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದ್ದಂತೂ ಸತ್ಯ. ಆದರೆ, ಈ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.