ಕಿಯಾರ ಮಾಡಿದ ಆ ಬೋಲ್ಡ್ ಪಾತ್ರದಿಂದ ಹೆಚ್ಚಿತ್ತು ಸೆ* ಟಾಯ್ ಮಾರಾಟ
ಪತಿಯಿಂದ ಲೈಂಗಿಕವಾಗಿ ತೃಪ್ತಿ ಪಡೆಯದ ಮಹಿಳೆಯಾಗಿ ಕಿಯಾರಾ ಕಾಣಿಸಿಕೊಂಡಿದ್ದರು. ಈ ಕಾರಣಕ್ಕೆ ಕಥಾ ನಾಯಕಿ ಸೆ*ಕ್ಸ್ ಟಾಯ್ ಮೊರೆ ಹೋಗುತ್ತಾರೆ. ಈ ಸಿನಿಮಾ ದೃಶ್ಯ ಸಖತ್ ವೈರಲ್ ಆಗಿತ್ತು. ಕಿಯಾರಾಗೆ ಸಖತ್ ಫೇಮ್ ಕೊಟ್ಟ ಸಿನಿಮಾ ಇದು.
ನಟಿ ಕಿಯಾರಾ ಅಡ್ವಾಣಿ (Kiara Advani) ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. ಸೇಲ್ಸ್ ಹೆಚ್ಚಿಸಿಕೊಳ್ಳಲು ಅನೇಕ ಬ್ರ್ಯಾಂಡ್ಗಳು ಅವರ ಜೊತೆ ಒಪ್ಪಂದ ಮಾಡಿಕೊಂಡಿವೆ. ಆ ಬ್ರ್ಯಾಂಡ್ಗಳ ಪ್ರಚಾರವನ್ನು ಕಿಯಾರಾ ಮಾಡುತ್ತಾರೆ. ಒಮ್ಮೆ ಕಿಯಾರಾ ಅವರು ಪ್ರಚಾರ ಮಾಡದೇ ಇದ್ದರೂ ಒಂದು ಪ್ರಾಡಕ್ಟ್ನ ಮಾರಾಟದಲ್ಲಿ ತೀವ್ರ ಗತಿಯಲ್ಲಿ ಏರಿಕೆ ಕಂಡಿತ್ತು. ಈ ವಿಚಾರ ಈಗ ರಿವೀಲ್ ಆಗಿದೆ. ಕರಣ್ ಜೋಹರ್ ಒಡೆತನದ ‘ಧರ್ಮ ಪ್ರೊಡಕ್ಷನ್ಸ್’ನ ಸೋಮನ್ ಮಿಶ್ರಾ ಈ ಬಗ್ಗೆ ಮಾತನಾಡಿದ್ದಾರೆ.
‘ಲಸ್ಟ್ ಸ್ಟೋರಿಸ್’ ಸಿನಿಮಾ 2018ರ ಜೂನ್ 15ರಂದು ರಿಲೀಸ್ ಆಗಿತ್ತು. ಬೇರೆ ಬೇರೆ ಕಥೆಗಳನ್ನು ಸೇರಿಸಿ ಒಂದು ಸಿನಿಮಾ ಮಾಡಲಾಗಿತ್ತು. ಲೈಂಗಿಕ ವಿಚಾರಗಳು ಈ ಚಿತ್ರದಲ್ಲಿ ಇದ್ದವು. ಈ ಚಿತ್ರದಲ್ಲಿ ವಿಕ್ಕಿ ಕೌಶಲ್ ಹಾಗೂ ಕಿಯಾರಾ ಅಡ್ವಾಣಿ ಒಟ್ಟಾಗಿ ನಟಿಸಿದ್ದರು. ಪತಿಯಿಂದ ಲೈಂಗಿಕವಾಗಿ ತೃಪ್ತಿ ಪಡೆಯದ ಮಹಿಳೆಯಾಗಿ ಕಿಯಾರಾ ಕಾಣಿಸಿಕೊಂಡಿದ್ದರು. ಈ ಕಾರಣಕ್ಕೆ ಕಥಾ ನಾಯಕಿ ಸೆ*ಕ್ಸ್ ಟಾಯ್ ಮೊರೆ ಹೋಗುತ್ತಾರೆ. ಈ ಸಿನಿಮಾ ದೃಶ್ಯ ಸಖತ್ ವೈರಲ್ ಆಗಿತ್ತು. ಕಿಯಾರಾಗೆ ಸಖತ್ ಫೇಮ್ ಕೊಟ್ಟ ಸಿನಿಮಾ ಇದು.
ಈ ಸಿನಿಮಾದ ಪರಿಣಾಮಗಳ ಬಗ್ಗೆ ಸೋಮನ್ ಮಿಶ್ರಾ ಮಾತನಾಡಿದ್ದಾರೆ. ಈ ಸಿನಿಮಾ ರಿಲೀಸ್ ಬಳಿಕ ಸೆ*ಕ್ಸ್ ಟಾಯ್ಸ್ ಮಾರಾಟದಲ್ಲಿ ತೀವ್ರಗತಿಯಲ್ಲಿ ಏರಿಕೆ ಕಂಡಿತ್ತಂತೆ. ‘ಆ ಸಿನಿಮಾದ ದೃಶ್ಯ ವೈರಲ್ ಆಗಲು ಅದರದ್ದೇ ಆದ ಕಾರಣಗಳಿದ್ದವು. ಇದರಿಂದ ಸೆ*ಕ್ಸ್ ಟಾಯ್ಸ್ ಮಾರಾಟದಲ್ಲಿ ಏರಿಕೆ ಕಂಡಿತ್ತು. 50-50 ಪರ್ಸೆಂಟ್ ಏರಿಕೆ ಕಂಡಿತ್ತು. ಗೂಗಲ್ನಲ್ಲಿ ಜನರು ಕಿಯಾರಾ ಅಡ್ವಾಣಿ ವೈಬ್ರೇಟರ್, ಕಿಯಾರಾ ಅಡ್ವಾಣಿ ಸೆ*ಕ್ಸ್ ಟಾಯ್ಸ್ ಎಂದು ಹುಡುಕುತ್ತಿದ್ದರು’ ಎಂದಿದ್ದಾರೆ ಸೋಮನ್.
ಕಿಯಾರಾಗಿಂತ ಮೊದಲು ಈ ಪಾತ್ರವನ್ನು ಕೃತಿ ಸನೋನ್ಗೆ ನೀಡಲಾಗಿತ್ತು. ಆದರೆ, ಅವರು ಈ ಪಾತ್ರ ಮಾಡಲು ಒಪ್ಪಿರಲಿಲ್ಲ. ‘ಈ ಚಿತ್ರದ ಸ್ಕ್ರಿಪ್ಟ್ ನೋಡಿ, ಸಿನಿಮಾದ ಕಥೆ ಕೇಳಿ ನನ್ನ ತಾಯಿ ಈ ಪಾತ್ರ ಮಾಡೋದು ಬೇಡ ಅಂದರು. ಅಮ್ಮನ ವಿರೋಧಿಸಿ ಸಿನಿಮಾ ಮಾಡಲು ಇಷ್ಟ ಇರಲಿಲ್ಲ. ಹೀಗಾಗಿ ಸಿನಿಮಾ ಮಾಡಲು ನೋ ಎಂದೆ’ ಎಂದು ಈ ಮೊದಲು ಕೃತಿ ಸನೋನ್ ಅವರು ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್ ಶೋನಲ್ಲಿ ಹೇಳಿಕೊಂಡಿದ್ದರು.
ಇದನ್ನೂ ಓದಿ: ತಮಿಳು ಸಿನಿಮಾದಲ್ಲಿ ಅವಕಾಶ ಗಿಟ್ಟಸಿಕೊಂಡ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ
ಕಿಯಾರಾ ಅಡ್ವಾಣಿ ಅವರಿಗೆ ‘ಲಸ್ಟ್ ಸ್ಟೋರಿಸ್’ ಚಿತ್ರದಿಂದ ಫೇಮ್ ಸಿಕ್ಕಿದೆ. ಕೆಲವರು ಅವರನ್ನು ಟ್ರೋಲ್ ಮಾಡಿದ್ದೂ ಇದೆ. ಆದರೆ, ಅವರು ಹೆಚ್ಚು ಜಾಗರೂಕರಾಗಿ ಸಿನಿಮಾ ಒಪ್ಪಿಕೊಳ್ಳೋಕೆ ಆರಂಭಿಸಿದರು. ‘ಕಬೀರ್ ಸಿಂಗ್’, ‘ಗುಡ್ ನ್ಯೂಸ್’, ‘ಶೇರ್ಷಾ’ ರೀತಿಯ ಸಿನಿಮಾಗಳನ್ನು ಅವರು ನೀಡಿದ್ದಾರೆ. ಸದ್ಯ ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಹಾಗೂ ಜೂನಿಯರ್ ಎನ್ಟಿಆರ್ ಅಭಿನಯದ ‘ವಾರ್ 2’ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಕಿಯಾರಾ ಅವರು ಸಿದ್ದಾರ್ಥ್ ಮಲ್ಹೋತ್ರಾನ ಮದುವೆ ಆಗಿದ್ದು, ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ