AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಬಿಡುಗಡೆ ಆಗುತ್ತಿದೆ ‘ಸೀತಾರಾಮಂ’ ಸಿನಿಮಾ: ಯಾವಾಗ?

Seetha Ramam movie: ಮಾಸ್ ಸಿನಿಮಾಗಳು, ಕಮರ್ಶಿಯಲ್ ಸಿನಿಮಾಗಳ ಅಬ್ಬರದ ನಡುವೆ ಹೊಸ ಅಲೆ ಎಬ್ಬಿಸಿದ್ದ ಪ್ರೇಮಕಥಾ ಸಿನಿಮಾ ‘ಸೀತಾರಾಮಂ’ ಮತ್ತೆ ಬಿಡುಗಡೆ ಆಗುತ್ತಿದೆ.

ಮತ್ತೆ ಬಿಡುಗಡೆ ಆಗುತ್ತಿದೆ ‘ಸೀತಾರಾಮಂ’ ಸಿನಿಮಾ: ಯಾವಾಗ?
ಸೀತಾ-ರಾಮಂ
Follow us
ಮಂಜುನಾಥ ಸಿ.
|

Updated on: Feb 11, 2024 | 2:52 PM

ದುಲ್ಕರ್ ಸಲ್ಮಾನ್ (Dulquer Salmaan), ಮೃಣಾಲ್ ಠಾಕೂರ್ (Mrinal), ರಶ್ಮಿಕಾ ಮಂದಣ್ಣ (Rashmika Mandanna) ಒಟ್ಟಿಗೆ ನಟಿಸಿದ್ದ ‘ಸೀತಾರಾಮಂ’ ಸಿನಿಮಾ ಬಿಡುಗಡೆ ಆಗಿ ಒಂದೂವರೆ ವರ್ಷಗಳಾಗಿವೆ. 2022ರ ಆಗಸ್ಟ್​ನಲ್ಲಿ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಮಾಸ್ ಸಿನಿಮಾಗಳು, ಕಮರ್ಶಿಯಲ್ ಸಿನಿಮಾಗಳ ಅಬ್ಬರದ ನಡುವೆ ಈ ಪ್ರೇಮಕಥೆ ಹೊಸ ಅಲೆಯನ್ನೇ ಎಬ್ಬಿಸಿತ್ತು. ಆಗ ಉಪರಾಷ್ಟ್ರಪತಿಯಾಗಿದ್ದ ವೆಂಕಯ್ಯ ನಾಯ್ಡು ಅವರು ಸಹ ಸಿನಿಮಾ ಎಂದರೆ ಹೀಗಿರಬೇಕೆಂದು ‘ಸೀತಾರಾಮಂ’ ಸಿನಿಮಾವನ್ನು ಕೊಂಡಾಡಿದ್ದರು. ಇದೀಗ ಈ ಸಿನಿಮಾ ಮರು ಬಿಡುಗಡೆ ಆಗುತ್ತಿದೆ.

ಸಿನಿಮಾ ನಿರ್ಮಾಣ ಮಾಡಿರುವ ವೈಜಯಂತಿ ಮೂವೀಸ್​ನವರು ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ. ‘ಈ ಪ್ರೇಮಿಗಳ ದಿನಕ್ಕೆ ನಿಮ್ಮನ್ನು ಮತ್ತೆ ಭೇಟಿಯಾಗಲು ಸೀತಾರಾಮ ಬರುತ್ತಿದ್ದಾರೆ. ಸಿನಿಮಾ ಪ್ರೀತಿಗಾಗಿ ಹಾಗೂ ಪ್ರೀತಿಯಿಂದ ಪ್ರೀತಿಗಾಗಿ ನಾವು ಮತ್ತೊಮ್ಮೆ ಭೇಟಿ ಆಗೋಣ’ ಎಂದು ಬರೆದುಕೊಂಡಿದ್ದಾರೆ. ಆದರೆ ‘ಸೀತಾರಾಮಂ’ ಸಿನಿಮಾ ಆಯ್ದ ಕೆಲವು ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ ಮಾತ್ರವೇ ಬಿಡುಗಡೆ ಆಗಲಿದೆ.

‘ಸೀತಾರಾಮಂ’ ಸಿನಿಮಾ ರೆಟ್ರೋ ಕಾಲದ ಕತೆಯನ್ನು ಹೊಂದಿತ್ತು. ಒಬ್ಬ ಭಾರತೀಯ ಸೇನೆಯ ಯೋಧನೊಬ್ಬ ತನಗೆ ಪತ್ರ ಬರೆಯುತ್ತಿರುವ ಯುವತಿಯ ಹುಡುಕಿ ಹೊರಟು ಆಕೆಯ ಪ್ರೇಮದಲ್ಲಿ ಬೀಳುತ್ತಾನೆ, ಆದರೆ ಆಕೆಗೆ ಯೋಧನ ಮೇಲೆ ಅಪಾರ ಪ್ರೀತಿಯಾದರು, ಅವನನ್ನು ವರಿಸಲು ಹವಲು ಅಡೆ-ತಡೆಗಳಿವೆ. ಇಬ್ಬರೂ ಒಟ್ಟಿಗೆ ಸೇರಿದರಾ-ಇಲ್ಲವಾ ಎಂಬುದು ಸಿನಿಮಾದ ಕತೆ. ಅಂದಹಾಗೆ ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ಭಾರತಕ್ಕೆ ಬರುವ ಪಾಕಿಸ್ತಾನದ ಯುವತಿಯ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:ಭರ್ಜರಿ ಅವಕಾಶ ಬಾಚಿಕೊಂಡ ರಶ್ಮಿಕಾ ಮಂದಣ್ಣ, ಮತ್ತೊಬ್ಬ ಸ್ಟಾರ್ ನಟನಿಗೆ ನಾಯಕಿ

‘ಸೀತಾ ರಾಮಂ’ ಮಾತ್ರವೇ ಅಲ್ಲದೆ ತೆಲುಗಿನ ಇನ್ನೂ ಕೆಲವು ಪ್ರೇಮಕಥಾ ಸಿನಿಮಾಗಳು ಫೆಬ್ರವರಿ 14ಕ್ಕೆ ಮರು ಬಿಡುಗಡೆ ಆಗಲಿವೆ. ತಮಿಳಿನ ಸೂಪರ್ ಹಿಟ್ ಸಿನಿಮಾ ‘96’ ಸಹ ಅದೇ ದಿನ ಮರು ಬಿಡುಗಡೆ ಆಗಲಿದೆ. ವಿಜಯ್ ಸೇತುಪತಿ ಹಾಗೂ ತ್ರಿಷಾ ನಟನೆಯ ಈ ಸಿನಿಮಾ 2018ರಲ್ಲಿ ಬಿಡುಗಡೆ ಆಗಿತ್ತು. ಶಾಲಾ ದಿನಗಳಲ್ಲಿ ಪ್ರೇಮಿಸಿದವರು ಪರಸ್ಪರ ದೂರಾದಿ ದಶಕಗಳ ಬಳಿಕ ಮತ್ತೆ ಭೇಟಿ ಆದಾಗ ಇಬ್ಬರ ಮನಸ್ಥಿತಿ, ಇಬ್ಬರೂ ಕಳೆಯುವ ಕ್ಷಣಗಳ ಚಿತ್ರಣವನ್ನು 96 ಸಿನಿಮಾ ಒಳಗೊಂಡಿದೆ.

ಕನ್ನಡದಲ್ಲಿಯೂ ಹಲವು ಅತ್ಯುತ್ತಮ ಪ್ರೇಮಕಥಾ ಸಿನಿಮಾಗಳಿವೆ. ‘ಮುಂಗಾರುಮಳೆ’, ‘ಗಾಳಿಪಠ’, ‘ಪರಮಾತ್ಮ’ ಇನ್ನೂ ಹಲವು ಸಿನಿಮಾಗಳಿವೆ. ಇವುಗಳನ್ನು ಈ ಪ್ರೇಮಿಗಳ ದಿನಾಚರಣೆಗೆ ಮತ್ತೆ ಬಿಡುಗಡೆ ಮಾಡುವ ಅವಕಾಶವಿದೆ. ಆದರೆ ಕನ್ನಡದ ಯಾವುದೇ ಸಿನಿಮಾಗಳು ಪ್ರೇಮಿಗಳ ದಿನಾಚರಣೆಗೆ ಮರು ಬಿಡುಗಡೆ ಆಗುತ್ತಿರುವ ಸುದ್ದಿಯಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್
ಐಪಿಎಲ್ ಧಡೂತಿ ಲೀಗ್​ ಆಗಿ ಬದಲಾದ್ರೆ ಹೇಗಿರುತ್ತೆ? ಇಲ್ಲಿದೆ ವಿಡಿಯೋ
ಐಪಿಎಲ್ ಧಡೂತಿ ಲೀಗ್​ ಆಗಿ ಬದಲಾದ್ರೆ ಹೇಗಿರುತ್ತೆ? ಇಲ್ಲಿದೆ ವಿಡಿಯೋ
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಚಿಕ್ಕಮಗಳೂರಿನಲ್ಲಿ ಬಿಗಿ ಬಂದೋಬಸ್ತ್
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಚಿಕ್ಕಮಗಳೂರಿನಲ್ಲಿ ಬಿಗಿ ಬಂದೋಬಸ್ತ್
ಬನಸಗೌಡ ಯತ್ನಾಳ್ ಮಾಧ್ಯಮದವರ ಕೈಗೆ ಸಿಗುತ್ತಿಲ್ಲವಂತಲ್ಲ? ಜಮೀರ್ ಅಹ್ಮದ್
ಬನಸಗೌಡ ಯತ್ನಾಳ್ ಮಾಧ್ಯಮದವರ ಕೈಗೆ ಸಿಗುತ್ತಿಲ್ಲವಂತಲ್ಲ? ಜಮೀರ್ ಅಹ್ಮದ್
ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್