
ದಕ್ಷಿಣ ಭಾರತದ ಜನಪ್ರಿಯ ನಟಿ ಚಿತ್ರಾ (Actress Chitra) ಅವರು ಹೃದಯಾಘಾತದಿಂದ (Heart Attack) ಶನಿವಾರ (ಆ.21) ಮುಂಜಾನೆ ನಿಧನರಾಗಿದ್ದಾರೆ. ಈ ಸುದ್ದಿ ಕೇಳಿ ಅವರ ಅಭಿಮಾನಿಗಳು ಮತ್ತು ಚಿತ್ರರಂಗದ ಸೆಲೆಬ್ರಿಟಿಗಳು ಕಂಬನಿ ಮಿಡಿಯುತ್ತಿದ್ದಾರೆ. ಮೂಲತಃ ಕೇರಳದವರಾಗಿದ್ದ ಅವರು ದಕ್ಷಿಣ ಭಾರತದ ಎಲ್ಲ ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದರು. ಹಿಂದಿ ಚಿತ್ರಗಳಲ್ಲೂ ಅವರು ಅಭಿನಯಿಸಿದ್ದರು. ಕನ್ನಡದ ‘ಸುಂದರ ಸ್ವಪ್ನಗಳು’, ‘ಕೃಷ್ಣ ಮೆಚ್ಚಿದ ರಾಧೆ’, ‘ಅಜಯ್ ವಿಜಯ್’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದರು.
100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಬಹುಭಾಷಾ ಕಲಾವಿದೆ ಚಿತ್ರಾ ಅವರಿಗೆ 56 ವರ್ಷ ವಯಸ್ಸಾಗಿತ್ತು. ಚೆನ್ನೈನ ಸಾಲಿಗ್ರಾಮಂನಲ್ಲಿ ಅವರು ವಾಸಿಸುತ್ತಿದ್ದರು. ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಅಂತ್ಯಸಂಸ್ಕಾರ ನೆರವೇರಲಿದೆ. ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ಚಿತ್ರಾ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ.
ಬಾಲನಟಿಯಾಗಿಯೇ ಚಿತ್ರಾ ಅವರು ಸಿನಿಮಾರಂಗಕ್ಕೆ ಕಾಲಿಟ್ಟಿದ್ದರು. ಕಮಲ್ ಹಾಸನ್ ಅಭಿನಯದ ‘ಅಪೂರ್ವ ರಾಗಂಗಳ್’ ಚಿತ್ರದಲ್ಲಿ ಅವರು ಬಾಲನಟಿಯಾಗಿ ಬಣ್ಣ ಹಚ್ಚಿದ್ದರು. ನಾಯಕಿಯಾಗಿ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದರು. 1990ರಲ್ಲಿ ವಿಜಯ್ ರಾಘವನ್ ಜೊತೆ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಂತರ ಸಿನಿಮಾಗಳಿಂದ ದೂರು ಉಳಿದುಕೊಂಡಿದ್ದ ಅವರು ಕುಟುಂಬದ ಕಡೆಗೆ ಹೆಚ್ಚು ಗಮನ ನೀಡಿದರು. ಈಗ ಪತಿ ಮತ್ತು ಮಗಳು ಮಹಾಲಕ್ಷ್ಮೀ ಅವರನ್ನು ಚಿತ್ರಾ ಅಗಲಿದ್ದಾರೆ.
Deeply saddened by the sudden demise of the Malayalam actress Smt.Chitra. She acted in more than 130 films in various south Indian languages. My prayers are with her family and friends. Om Shanti. pic.twitter.com/xfHKarMH8S
— K Surendran (@surendranbjp) August 21, 2021
‘ನಲ್ಲೆನೈ’ ಚಿತ್ರಾ ಎಂದು ಕೂಡ ಅವರನ್ನು ಕರೆಯಲಾಗುತ್ತಿತ್ತು. ಎಣ್ಣೆ ಕಂಪನಿಯೊಂದರ ಜಾಹೀರಾತಿನಲ್ಲಿ ನಟಿಸಿ ಫೇಮಸ್ ಆಗಿದ್ದರಿಂದ ಅವರನ್ನು ಹೀಗೆ ಕರೆಯುತ್ತಿದ್ದರು. ಮಲಯಾಳಂನಲ್ಲಿ ಅವರು ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ ‘ಅಟ್ಟಕಳಶಂ’. ಆ ಚಿತ್ರದಲ್ಲಿ ಮೋಹನ್ ಲಾಲ್ ಮತ್ತು ಪ್ರೇಮ್ ನಜಿರ್ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಚಿತ್ರಾಗೆ ಸಿಕ್ಕಿತ್ತು. ಮಾಲಿವುಡ್ನ ಮತ್ತೋರ್ವ ಸ್ಟಾರ್ ನಟ ಮಮ್ಮೂಟ್ಟಿ ಜೊತೆಗೂ ಅವರು ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ:
Anandha Kannan: ಖ್ಯಾತ ನಿರೂಪಕ, ನಟ ಆನಂದ ಕಣ್ಣನ್ ಕ್ಯಾನ್ಸರ್ನಿಂದ ನಿಧನ; ಸೆಲೆಬ್ರಿಟಿಗಳ ಸಂತಾಪ
ಹಾಸ್ಯ ನಟ ಅಯ್ಯಪ್ಪನ್ ಗೋಪಿ ಹೃದಯಾಘಾತದಿಂದ ನಿಧನ; ಚಿತ್ರರಂಗಕ್ಕೆ ಮತ್ತೊಂದು ಆಘಾತ
(Senior actress Chitra death due to heart attack in Chennai)
Published On - 10:18 am, Sat, 21 August 21