AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಧಿಯ ಉಡುಗೆ ಜನರನ್ನು ಕೆರಳಿಸಿತು; ವಿವಾದಾತ್ಮಕ ಹೇಳಿಕೆ ಕೊಟ್ಟ ನಟ

ಹೈದರಾಬಾದ್ ಮಾಲ್ ಕಾರ್ಯಕ್ರಮದಲ್ಲಿ ನಟಿ ನಿಧಿ ಅಗರ್ವಾಲ್ ಅವರಿಗೆ ಆದ ಅನುಭವದ ಬಗ್ಗೆ ತೆಲುಗು ನಟ ಶಿವಾಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಟಿಯ ಉಡುಗೆಯೇ ಜನರನ್ನು ಕೆರಳಿಸಿತು ಎಂದು ಶಿವಾಜಿ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಿಧಿ ಅಗರ್ವಾಲ್, ಸಂತ್ರಸ್ತೆಯನ್ನು ದೂಷಿಸುವುದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ನಿಧಿಯ ಉಡುಗೆ ಜನರನ್ನು ಕೆರಳಿಸಿತು; ವಿವಾದಾತ್ಮಕ ಹೇಳಿಕೆ ಕೊಟ್ಟ ನಟ
ನಿಧಿ
ರಾಜೇಶ್ ದುಗ್ಗುಮನೆ
|

Updated on: Dec 25, 2025 | 3:01 PM

Share

ಹೈದರಾಬಾದ್‌ ಮಾಲ್​​ನಲ್ಲಿ ನಡೆದ ‘ರಾಜಾ ಸಾಬ್’ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ನಟಿ ನಿಧಿ ಅಗರ್​​ವಾಲ್ (Nidhi Agerwal) ಭಾಗಿ ಆಗಿದ್ದರು. ಈ ವೇಳೆ ನಟಿಯ ಮೇಲೆ ಅಲ್ಲಿದ್ದ ಜನರು ಮುಗಿಬಿದ್ದಿದ್ದರು.ಇದು ಸಾಕಷ್ಟು ಚರ್ಚೆಗೆ ಕಾರಣ ಆಗಿತ್ತು. ನಟಿ ಇದರಿಂದ ಸಾಕಷ್ಟು ತೊಂದರೆ ಅನುಭವಿಸಿದ್ದರು. ಈಗ ಈ ಘಟನೆ ಬಗ್ಗೆ ತೆಲುಗು ನಟ ಶಿವಾಜಿ ನೀಡಿದ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ‘ನಟಿಯರು ಸಾಧಾರಣ ಉಡುಗೆ ತೊಡಬೇಕು’ ಎಂದಿದ್ದಾರೆ. ಈ ಹೇಳಿಕೆ ನಟಿಗೆ ಬೇಸರ ಮೂಡಿಸಿದೆ.

ಡಿಸೆಂಬರ್ 17 ರಂದು ಹೈದರಾಬಾದ್‌ನ ಲುಲು ಮಾಲ್‌ನಲ್ಲಿ ರಾಜಾ ಸಾಬ್‌ನ ಹಾಡಿನ ಬಿಡುಗಡೆ ಸಮಾರಂಭದಲ್ಲಿ ನಿಧಿ ಚಿತ್ರತಂಡದೊಂದಿಗೆ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಊಹೆಗೂ ಮೀರಿದ ಸಂಖ್ಯೆಯಲ್ಲಿ ಜನರು ಸೇರಿದ್ದರು.ಈವೆಂಟ್ ಮುಗಿದ ಬಳಿಕ ನಟಿ ಅಲ್ಲಿಂದ ಹೊರ ಬರಲು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಸಾಕಷ್ಟು ಜನರು ಅವರ ದೇಹವನ್ನು ಟಚ್ ಮಾಡಿದ್ದರು. ಈ ಸಂಬಂಧ ಕೇಸ್ ಕೂಡ ದಾಖಲಾಯಿತು. ಶಿವಾಜಿ ಪ್ರತಿಕ್ರಿಯೆ..

ಹೈದರಾಬಾದ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರೋ ಶಿವಾಜಿ, ‘ನಿಧಿಯ ಉಡುಗೆ ಜನಸಮೂಹವನ್ನು ಕೆರಳಿಸಿತು’ ಎಂದು ನೇರವಾಗಿ ಅವರ ಉಡುಗೆ ಬಗ್ಗೆ ಆರೋಪ ಮಾಡಿದ್ದಾರೆ. ‘ಸಾಯಿ ಪಲ್ಲವಿ, ಅನುಷ್ಕಾ, ಸೌಂದರ್ಯ, ಭೂಮಿಕಾ ಮೊದಲಾದವರನ್ನು ಯಾರಾದರೂ ಟಚ್​ ಮಾಡಿದ್ದಾರಾ? ಏಕೆಂದರೆ ಅವರು ಸರಿಯಾಗಿ ಬಟ್ಟೆ ಹಾಕುತ್ತಾರೆ’ ಎಂದಿದ್ದಾರೆ ಶಿವಾಜಿ.

ಇದನ್ನೂ ಓದಿ: ನಿಧಿ ಅಗರ್​​ವಾಲ್ ಜೊತೆ ಅನುಚಿತ ವರ್ತನೆ: ಮಾಲ್ ವಿರುದ್ಧ ಕೇಸ್ ದಾಖಲು

‘ಯಾರೂ ಪ್ರಚೋದಿಸಬೇಡಿ. ನೀವು ಹಾಗೆ ಮಾಡಿದಾಗ ಪುರುಷರು ನಿಮ್ಮನ್ನು ಮುಟ್ಟಬಹುದು ಎಂದು ಭಾವಿಸುತ್ತಾರೆ. ನಿಮಗೆ ಹೇಗೆ ಅನಿಸುತ್ತದೆಯೋ ಹಾಗೆ ಉಡುಗೆ ಧರಿಸಿ. ಆದರೆ,ನಾನು ನಿಜವನ್ನು ಹೇಳುತ್ತಿದ್ದೇನೆ’ ಎಂದಿದ್ದಾರೆ ಅವರು.

ನಟಿಯ ಪ್ರತಿಕ್ರಿಯೆ

ಈ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿದ ನಿಧಿ, ‘ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಲುಲು ಮಾಲ್ ಕಾರ್ಯಕ್ರಮದ ಫೋಟೋವನ್ನು ಹಂಚಿಕೊಂಡು, ‘ಸಂತ್ರಸ್ತೆಯನ್ನು ದೂಷಿಸುವುದು ತಪ್ಪು’ ಎಂರ್ಥದಲ್ಲಿ ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಚಿತ್ರದುರ್ಗ ಬಳಿ ಬಸ್​​ ದುರಂತ: ಮಕ್ಕಳು ನಾಪತ್ತೆ, ಪೋಷಕರ ಗೋಳಾಟ
ಚಿತ್ರದುರ್ಗ ಬಳಿ ಬಸ್​​ ದುರಂತ: ಮಕ್ಕಳು ನಾಪತ್ತೆ, ಪೋಷಕರ ಗೋಳಾಟ
ಹೋಟೆಲ್ ರೆಸ್ಟೋರೆಂಟ್, ಬೇಕರಿ ತಿಂಡಿ ತಿನ್ನುವ ಮೊದಲು ಎಚ್ಚರ
ಹೋಟೆಲ್ ರೆಸ್ಟೋರೆಂಟ್, ಬೇಕರಿ ತಿಂಡಿ ತಿನ್ನುವ ಮೊದಲು ಎಚ್ಚರ
ಹೊಸೂರು ಬಳಿ ಹಳ್ಳಿಗೆ ನುಗ್ಗಿದ 40ಕ್ಕೂ ಹೆಚ್ಚು ಕಾಡಾನೆ ಹಿಂಡು!
ಹೊಸೂರು ಬಳಿ ಹಳ್ಳಿಗೆ ನುಗ್ಗಿದ 40ಕ್ಕೂ ಹೆಚ್ಚು ಕಾಡಾನೆ ಹಿಂಡು!
ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: ಮೂವರು ನಾಪತ್ತೆ
ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: ಮೂವರು ನಾಪತ್ತೆ
ಕ್ಯಾಥೆಡ್ರಲ್ ಚರ್ಚ್​ನಲ್ಲಿ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಭಾಗವಹಿಸಿದ ಮೋದಿ
ಕ್ಯಾಥೆಡ್ರಲ್ ಚರ್ಚ್​ನಲ್ಲಿ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಭಾಗವಹಿಸಿದ ಮೋದಿ
‘10 ಬಾರಿ ನೋಡಿದ್ರೂ ಬೇಸರ ಬರಲ್ಲ’; ‘ಮಾರ್ಕ್’ ನೋಡಿ ಫ್ಯಾನ್ಸ್ ರಿಯಾಕ್ಷನ್
‘10 ಬಾರಿ ನೋಡಿದ್ರೂ ಬೇಸರ ಬರಲ್ಲ’; ‘ಮಾರ್ಕ್’ ನೋಡಿ ಫ್ಯಾನ್ಸ್ ರಿಯಾಕ್ಷನ್
ಡಿವೈಡರ್ ಹಾರಿ ಬಸ್​ಗೆ ಗುದ್ದಿದ ಲಾರಿ: ಪ್ರತ್ಯಕ್ಷದರ್ಶಿ ಹೇಳಿದ್ದೇನು ನೋಡಿ
ಡಿವೈಡರ್ ಹಾರಿ ಬಸ್​ಗೆ ಗುದ್ದಿದ ಲಾರಿ: ಪ್ರತ್ಯಕ್ಷದರ್ಶಿ ಹೇಳಿದ್ದೇನು ನೋಡಿ
ಟಿ20 ಪಂದ್ಯದಲ್ಲಿ 50 ಎಸೆತಗಳಲ್ಲಿ 61 ರನ್ ಬಾರಿಸಿದ RCB ದಾಂಡಿಗ..!
ಟಿ20 ಪಂದ್ಯದಲ್ಲಿ 50 ಎಸೆತಗಳಲ್ಲಿ 61 ರನ್ ಬಾರಿಸಿದ RCB ದಾಂಡಿಗ..!