AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samantha: ಸಮಂತಾ 10ನೇ ತರಗತಿಯಲ್ಲಿ ಪಡೆದ ಅಂಕ ಎಷ್ಟು? ವೈರಲ್​ ಆಗಿದೆ ನಟಿಯ ಮಾರ್ಕ್ಸ್​ ಕಾರ್ಡ್​

Samantha Ruth Prabhu 10th Marks: ಶಾಲೆಯಲ್ಲಿ ಸಮಂತಾ ಮಾಡಿದ ಸಾಧನೆ ಕಂಡು ಶಿಕ್ಷಕರಿಗೆ ಖುಷಿ ಆಗಿತ್ತು. ರಿಪೋರ್ಟ್​ ಕಾರ್ಡ್​ನಲ್ಲಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಬರೆಯಲಾಗಿತ್ತು.

Samantha: ಸಮಂತಾ 10ನೇ ತರಗತಿಯಲ್ಲಿ ಪಡೆದ ಅಂಕ ಎಷ್ಟು? ವೈರಲ್​ ಆಗಿದೆ ನಟಿಯ ಮಾರ್ಕ್ಸ್​ ಕಾರ್ಡ್​
ಸಮಂತಾ ಮಾರ್ಕ್ಸ್ ಕಾರ್ಡ್
Follow us
ಮದನ್​ ಕುಮಾರ್​
|

Updated on:Apr 24, 2023 | 11:11 PM

ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಅವರು ಚಿತ್ರರಂಗದಲ್ಲಿ ಸಾಧನೆ ಮಾಡಿದ್ದಾರೆ. ದೇಶಾದ್ಯಂತ ಅವರು ಅಭಿಮಾನಿಗಳನ್ನು ಹೊಂದಿದ್ದಾರೆ. ಟಾಲಿವುಡ್​ನಲ್ಲಿ (Tollywood) ಅವರು ಬಹುಬೇಡಿಕೆಯ ನಟಿ. ಸಿನಿಮಾ ಮತ್ತು ವೆಬ್​ ಸಿರೀಸ್​ ಲೋಕದಲ್ಲಿ ಅವರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ನಟನೆಯಲ್ಲಿ ಮಾತ್ರವಲ್ಲದೇ ಶೈಕ್ಷಣಿಕ ವಿಚಾರದಲ್ಲೂ ಅವರು ಬ್ರಿಲಿಯಂಟ್​. ಈ ವಿಚಾರ ಪ್ರಸ್ತಾಪ ಆಗಲು ಕಾರಣ ಆಗಿರುವುದು ಅವರ 10ನೇ ತರಗತಿಯ ಮಾರ್ಕ್ಸ್​ ಕಾರ್ಡ್​. ಶಾಲೆಯಲ್ಲಿದ್ದಾಗ ಸಮಂತಾ ಅವರು ಬುದ್ಧಿವಂತ ವಿದ್ಯಾರ್ಥಿನಿ ಆಗಿದ್ದರು. ಎಲ್ಲ ವಿಷಯದಲ್ಲೂ ಅವರು ಹೆಚ್ಚು ಅಂಕ ಪಡೆದಿದ್ದರು. ತಮ್ಮ ನೆಚ್ಚಿನ ನಟಿಯ ಅಂಕ ಪಟ್ಟಿ (Samantha 10th Marks Card) ನೋಡಿ ಅಭಿಮಾನಿಗಳು ಹೆಮ್ಮೆಪಟ್ಟುಕೊಂಡಿದ್ದಾರೆ. ‘ಎಲ್ಲ ವಿದ್ಯಾರ್ಥಿಗಳಿಗೆ ಸಮಂತಾ ಸ್ಫೂರ್ತಿ’ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ.

ಸಮಂತಾ ಅವರು ಪ್ರೌಢ ಶಿಕ್ಷಣ ಪಡೆದಿದ್ದು ಚೆನ್ನೈನಲ್ಲಿ. ಅವರು 2001-2002ರ ವೇಳೆಗೆ 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ನಡೆದ ಪರೀಕ್ಷೆಯಲ್ಲಿ ಸಮಂತಾ ಅವರು ಉತ್ತಮವಾಗಿ ಸ್ಕೋರ್​ ಮಾಡಿದ್ದರು. ಇಂಗ್ಲಿಷ್​ನಲ್ಲಿ 100ಕ್ಕೆ 90 ಅಂಕ ಪಡೆದಿದ್ದರು. ಗಣಿತದಲ್ಲಿ 100ಕ್ಕೆ 100 ಮಾರ್ಕ್ಸ್​ ಪಡೆಯುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದರು.

ಇದನ್ನೂ ಓದಿ: Chittibabu: ತಮ್ಮ ಬಗ್ಗೆ ಕೆಟ್ಟದಾಗಿ ಮಾತಾಡಿದ ನಿರ್ಮಾಪಕನ ಕಿವಿ ಕೂದಲಿನ ರಹಸ್ಯ ಬಯಲು ಮಾಡಿದ ಸಮಂತಾ

ಶಾಲೆಯಲ್ಲಿ ಸಮಂತಾ ಮಾಡಿದ ಸಾಧನೆ ಕಂಡು ಶಿಕ್ಷಕರಿಗೆ ಖುಷಿ ಆಗಿತ್ತು. ‘ಸಮಂತಾ ಚೆನ್ನಾಗಿ ಪರೀಕ್ಷೆ ಬರೆದಿದ್ದಾಳೆ. ಈಕೆ ನಮ್ಮ ಶಾಲೆಯ ಆಸ್ತಿ’ ಎಂದು ರಿಪೋರ್ಟ್​ ಕಾರ್ಡ್​​ನಲ್ಲಿ ಶಿಕ್ಷಕರು ಉಲ್ಲೇಖ ಮಾಡಿದ್ದರು. ಈ ಮೊದಲು ಕೂಡ ಮಾರ್ಕ್ಸ್​ ಕಾರ್ಡ್​ ವೈರಲ್​ ಆದಾಗ ಸಮಂತಾ ಅವರು ಅದಕ್ಕೆ ಪ್ರತಿಕ್ರಿಯೆ ನೀಡಿದ್ದರು. ‘ಹ್ಹ ಹ್ಹ ಹ್ಹ.. ಇದು ಮತ್ತೆ ಕಾಣಿಸುತ್ತಿದೆ’ ಎಂದು ಅವರು ಬರೆದುಕೊಂಡಿದ್ದರು.

ಇದನ್ನೂ ಓದಿ: Shaakuntalam: ಸಮಂತಾ ಅಭಿಮಾನಿಗಳನ್ನು ಕೆಣಕಿದ ನಾಗ ಚೈತನ್ಯ ಫ್ಯಾನ್ಸ್​; ಸೋಶಿಯಲ್​ ಮೀಡಿಯಾದಲ್ಲಿ ಶುರುವಾಗಿದೆ ಕಿತ್ತಾಟ

ಸಿನಿಮಾಗಳ ವಿಚಾರಕ್ಕೆ ಬರೋದಾದರೆ ಸಮಂತಾ ಅವರಿಗೆ ಈ ವರ್ಷ ನಿರೀಕ್ಷಿತ ಮಟ್ಟದ ಗೆಲುವು ಸಿಕ್ಕಿಲ್ಲ. ಪೌರಾಣಿಕ ಪಾತ್ರದಲ್ಲಿ ಅವರು ನಟಿಸಿದ ‘ಶಾಕುಂತಲಂ’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಸೋತಿದೆ. ಬಹುಕೋಟಿ ರೂಪಾಯಿ ಬಂಡವಾಳದಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ಮೊದಲ ಮೂರು ದಿನದಲ್ಲಿ 10 ಕೋಟಿ ರೂಪಾಯಿ ಕಲೆಕ್ಷನ್​ ಮಾಡಲು ಕೂಡ ಸಾಧ್ಯವಾಗಲಿಲ್ಲ. ಇದರಿಂದ ನಿರ್ಮಾಪಕರಿಗೆ ಸಖತ್​ ನಷ್ಟ ಆಗಿದೆ.

ವೈಯಕ್ತಿಕ ಜೀವನದಲ್ಲಿ ಸಮಂತಾ ಅವರು ಸಾಕಷ್ಟು ನೊಂದಿದ್ದಾರೆ. ಆಗಾಗ ಅವರಿಗೆ ಅನಾರೋಗ್ಯ ಕಾಟ ಕೊಡುತ್ತಿದೆ. ಈ ನಡುವೆ ಕೆಲವರು ಅವರ ಬಗ್ಗೆ ಖಾರವಾಗಿ ಟೀಕೆ ಮಾಡುತ್ತಿದ್ದಾರೆ. ಅದೆಲ್ಲವನ್ನೂ ಎದುರಿಸಿ ಸಮಂತಾ ಮುನ್ನುಗ್ಗುತ್ತಿದ್ದಾರೆ. ‘ಸಿಟಾಡೆಲ್​’ ವೆಬ್​ ಸರಣಿಯ ಇಂಡಿಯನ್​ ವರ್ಷನ್​ನಲ್ಲಿ ಅವರು ಮುಖ್ಯ ಪಾತ್ರ ಮಾಡುತ್ತಿದ್ದಾರೆ. ‘ಖುಷಿ’ ಚಿತ್ರಕ್ಕೂ ಅವರು ನಾಯಕಿ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:11 pm, Mon, 24 April 23

ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ
ನಟ ಕಮಲ್​ ಹಾಸನ್​ಗೆ ಕನ್ನಡದ ಇತಿಹಾಸ ಗೊತ್ತಿಲ್ಲ: ವ್ಯಂಗ್ಯವಾಡಿದ ಸಿಎಂ
ನಟ ಕಮಲ್​ ಹಾಸನ್​ಗೆ ಕನ್ನಡದ ಇತಿಹಾಸ ಗೊತ್ತಿಲ್ಲ: ವ್ಯಂಗ್ಯವಾಡಿದ ಸಿಎಂ
ಆರ್ಮಿ ಜಾಕೆಟ್ ತೊಟ್ಟು ಬೀಗಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್
ಆರ್ಮಿ ಜಾಕೆಟ್ ತೊಟ್ಟು ಬೀಗಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್
ಮೇಕೆಗೆ ಸುತ್ತಿಕೊಂಡಿತ್ತು ವಿಷಕಾರಿ ಹಾವು
ಮೇಕೆಗೆ ಸುತ್ತಿಕೊಂಡಿತ್ತು ವಿಷಕಾರಿ ಹಾವು
ರಜೆ ಮೇಲೆ ತೆರಳಿದ್ದ ಸಿಬ್ಬಂದಿಯನ್ನು ವಾಪಸ್ಸು ಕರೆಸಿಕೊಳ್ಳಲಾಗಿದೆ: ವೈದ್ಯ
ರಜೆ ಮೇಲೆ ತೆರಳಿದ್ದ ಸಿಬ್ಬಂದಿಯನ್ನು ವಾಪಸ್ಸು ಕರೆಸಿಕೊಳ್ಳಲಾಗಿದೆ: ವೈದ್ಯ
ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ
ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ