ಕೊರೊನಾದಿಂದ ಪಾರಾಗಲು ನ್ಯೂಯಾರ್ಕ್​ಗೆ ಹಾರಿದ ಶಾರುಖ್ ಖಾನ್ ಕುಟುಂಬ

| Updated By: ಮದನ್​ ಕುಮಾರ್​

Updated on: Apr 22, 2021 | 4:12 PM

ಗೌರಿ ಖಾನ್ ಹಾಗೂ ಅವರ ಮಗ ಆರ್ಯನ್ ಖಾನ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರೂ ನ್ಯೂಯಾರ್ಕ್​ಗೆ  ಪ್ರಯಾಣ ಬೆಳೆಸುತ್ತಿದ್ದಾರೆ ಎನ್ನಲಾಗಿದೆ.

ಕೊರೊನಾದಿಂದ ಪಾರಾಗಲು ನ್ಯೂಯಾರ್ಕ್​ಗೆ  ಹಾರಿದ ಶಾರುಖ್ ಖಾನ್ ಕುಟುಂಬ
ಮುಂಬೈ ವಿಮಾನ ನಿಲ್ದಾಣದಲ್ಲಿ ಗೌರಿ ಖಾನ್​ ಹಾಗೂ ಆರ್ಯನ್​ ಖಾನ್​
Follow us on

ದೇಶದೆಲ್ಲೆಡೆ ಕೊರೊನಾ ವೈರಸ್ ಮಿತಿಮೀರಿ ಹರಡುತ್ತಿದೆ. ಗುರುವಾರ (ಏಪ್ರಿಲ್ 22) ಒಂದೇ ದಿನ 3 ಲಕ್ಷ ಕೊವಿಡ್ ಕೇಸ್​​ಗಳು ವರದಿ ಆಗಿವೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಕೊರೊನಾ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಹೀಗಾಗಿ, ಅಲ್ಲಿನ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಮಧ್ಯೆ ಸಾಕಷ್ಟು ನಟ-ನಟಿಯರು ಮುಂಬೈ ತೊರೆಯುತ್ತಿದ್ದಾರೆ. ಇತ್ತೀಚೆಗೆ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಬೆಂಗಳೂರಿಗೆ ಆಗಮಿಸಿದ್ದರು. ವಿಶೇಷ ಎಂದರೆ, ಶಾರುಖ್ ಕುಟುಂಬ ಈಗ ಅಮೆರಿಕಕ್ಕೆ ಪ್ರಯಾಣ ಬೆಳೆಸಿದೆ.

ಗೌರಿ ಖಾನ್ ಹಾಗೂ ಅವರ ಮಗ ಆರ್ಯನ್ ಖಾನ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರೂ ನ್ಯೂಯಾರ್ಕ್​ಗೆ  ಪ್ರಯಾಣ ಬೆಳೆಸುತ್ತಿದ್ದಾರೆ ಎನ್ನಲಾಗಿದೆ. ಸುಹಾನಾ ಖಾನ್ ನ್ಯೂಯಾರ್ಕ್ನಲ್ಲಿ ನೆಲೆಸಿದ್ದಾರೆ. ಹೀಗಾಗಿ, ದೇಶದಲ್ಲಿ ಕೊರೊನಾ ಕೇಸ್ ಹೆಚ್ಚುತ್ತಿದೆ. ಹೀಗಾಗಿ, ಮಗಳನ್ನು ನೋಡೋಕೆ ಇವರು ಅಮೆರಿಕಕ್ಕೆ ತೆರಳಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.

ಗೌರಿ ಹಾಗೂ ಆರ್ಯನ್ ಕ್ಯಾಮೆರಾಗೆ ಪೋಸ್ ನೀಡಿಲ್ಲ. ಅವರು ನೇರವಾಗಿ ವಿಮಾನ ನಿಲ್ದಾಣದ ಒಳಗೆ ತೆರಳಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನ್ಯೂಯಾರ್ಕ್ ವಿಶ್ವ ವಿದ್ಯಾಲಯದಲ್ಲಿ ಸುಹಾನಾ ಅಭ್ಯಾಸ ನಡೆಸುತ್ತಿದ್ದಾರೆ. ಕಳೆದ ವರ್ಷ ಅವರು ಭಾರತಕ್ಕೆ ಬಂದಿದ್ದರು. ನಂತರ ಜನವರಿ ವೇಳೆಗೆ ಮತ್ತೆ ಅಮೆರಿಕಕ್ಕೆ ಹಾರಿದ್ದರು.

ಸದ್ಯ, ಐಪಿಎಲ್ ನಡೆಯುತ್ತಿದೆ. ಶಾರುಖ್ ಖಾನ್ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ ಆಟ ನೋಡಲು ಶಾರುಖ್ ಮೈದಾನಕ್ಕೆ ತೆರಳುತ್ತಿದ್ದಾರೆ. ಹೀಗಾಗಿ, ಕುಟುಂಬದವರನ್ನು ಭೇಟಿ ಮಾಡಲು ಅವರಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ಅಮೆರಿಕಕ್ಕೆ ತೆರಳಿಲ್ಲ ಎನ್ನಲಾಗುತ್ತಿದೆ.

ಶಾರುಖ್ ಸಿನಿಮಾ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ಸಿನಿಮಾದಲ್ಲಿ ಶಾರುಖ್ ಅಭಿನಯಿಸುತ್ತಿದ್ದಾರೆ. ಕೊರೊನಾ ಕಾರಣದಿಂದ ಸಿನಿಮಾ ಕೆಲಸಗಳು ನಿಂತಿವೆ.

ಇದನ್ನೂ ಓದಿ: ರಾತ್ರೋರಾತ್ರಿ ಮುಂಬೈ ಬಿಟ್ಟು ಬೆಂಗಳೂರಿಗೆ ಬಂದ ದೀಪಿಕಾ-ರಣವೀರ್​ ಸಿಂಗ್​! ಕೊರೊನಾ ಕಾರಣ

ಕ್ಷಮಿಸಿ, ನಾನು ಸಂಭಾವನೆ ಪಡೆಯಲ್ಲ; ಶಾರುಖ್​ಗಾಗಿ ಸಲ್ಮಾನ್​ ಹೀಗೊಂದು ತ್ಯಾಗ!