ನನ್ನ ಪ್ರೀತಿ ಅರ್ಥವಾದರೆ ನೀವೇ ಬಂದು ಬೀಳ್ತೀರಾ; ವೈಷ್ಣವಿಗೆ ಎಲ್ಲವನ್ನೂ ಹೇಳಿದ ರಘು ಗೌಡ
ಬಿಗ್ ಬಾಸ್ ಮನೆಯಲ್ಲಿ ಅತಿ ಸೈಲೆಂಟ್ ಆಗಿರುವ ಸ್ಪರ್ಧಿ ಎಂದಾಗ ನೆನಪಿಗೆ ಬರೋದು ವೈಷ್ಣವಿ ಗೌಡ. ಅವರು ಸೈಲೆಂಟ್ ಆಗಿದ್ದುಕೊಂಡೇ ಎಲ್ಲರನ್ನೂ ಆಕರ್ಷಿಸುತ್ತಿದ್ದಾರೆ.
ಬಿಗ್ ಬಾಸ್ ಮನೆ ಸೇರಿರುವ ವೈಷ್ಣವಿ ಗೌಡ ಆರಂಭದಲ್ಲಿ ಯಾರ ಜತೆಗೂ ಹೆಚ್ಚು ಬೆರೆತವರಲ್ಲ. ಆದರೆ, ಜೋಡಿ ಟಾಸ್ಕ್ ಮೂಲಕ ರಘು ಗೌಡ ಜತೆ ಹೆಚ್ಚು ಬೆರೆತರು. ಅವರ ಕಷ್ಟ ಸುಖ ಎರಡನ್ನೂ ಕೇಳಿದರು. ಕೆಲವೊಮ್ಮೆ ತುಂಬಾನೇ ಮರುಗಿದ್ದಾರೆ. ಇದಾದ ನಂತರದಲ್ಲಿ ಇಬ್ಬರ ನಡುವೆಯೂ ಉತ್ತಮ ಫ್ರೆಂಡ್ಶಿಪ್ ಬೆಳೆದಿದೆ. ಸದ್ಯ, ಇಬ್ಬರ ನಡುವೆ ನಡೆದ ಸಂಭಾಷಣೆ ಪ್ರೇಕ್ಷಕರಿಗೆ ಇಷ್ಟವಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಅತಿ ಸೈಲೆಂಟ್ ಆಗಿರುವ ಸ್ಪರ್ಧಿ ಎಂದಾಗ ನೆನಪಿಗೆ ಬರೋದು ವೈಷ್ಣವಿ ಗೌಡ. ಅವರು ಸೈಲೆಂಟ್ ಆಗಿದ್ದುಕೊಂಡೇ ಎಲ್ಲರನ್ನೂ ಆಕರ್ಷಿಸುತ್ತಿದ್ದಾರೆ. ಇದು ಮನೆಯವರ ಗಮನಕ್ಕೂ ಬಂದಿದೆ. ಏಕೆಂದರೆ, ಯಾರೊಬ್ಬರೂ ಈವರೆಗೆ ಅವರ ವಿರುದ್ಧ ತಿರುಗಿಬಿದ್ದಿಲ್ಲ. ಜತೆಗೆ, ಸಮಯ ಸಿಕ್ಕಾಗೆಲ್ಲಾ ಒಬ್ಬರಲ್ಲಾ ಒಬ್ಬರು ವೈಷ್ಣವಿ ಅವರನ್ನು ಹೊಗಳುತ್ತಲೇ ಇರುತ್ತಾರೆ. ಈಗ ರಘು ಗೌಡ ಪ್ರೀತಿ ವಿಚಾರ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಹಾಸ್ಟೆಲ್ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್ನಲ್ಲಿ ಗಂಡುಮಕ್ಕಳು ಹೆಣ್ಣುಮಕ್ಕಳಿಗೆ ಲವ್ ಲೆಟರ್ ಬರೆಯಬೇಕಿತ್ತು. ಈ ವೇಳೆ ರಘು ಗೌಡ ಅವರು ವೈಷ್ಣವಿ ಅವರಿಗೆ ಬರೆದಿದ್ದರು. ಈ ವಿಚಾರ ಏಪ್ರಿಲ್ 21ರ ಎಪಿಸೋಡ್ನಲ್ಲಿ ಚರ್ಚೆಗೆ ಬಂದಿದೆ.
ನಾನು ಲವ್ ಲೆಟರ್ ಬರೆಯದೆ 15 ವರ್ಷ ಆಗಿದೆ. ಹೀಗಾಗಿ ನಾನು ಬರೆದಿದ್ದು ಅರ್ಥವೇ ಆಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನು ಕೇಳಿದ ವೈಷ್ಣವಿ ಹೌದು, ನೀವು ಬರೆದಿದ್ದು ಯಾರಿಗೂ ಅರ್ಥವಾಗುವುದಿಲ್ಲ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ರಘು, ಹೌದು ನನ್ನ ಪ್ರೀತಿ ಯಾರಿಗೂ ಅರ್ಥವಾಗುವುದಿಲ್ಲ. ಅರ್ಥವಾದರೆ, ನೀವೆ ಬಂದು ಬೀಳ್ತೀರಾ ಎಂದು ಕಾಲೆಳೆದಿದ್ದಾರೆ.
ಇದನ್ನೂ ಓದಿ: ವೈಷ್ಣವಿಗೆ ತುರ್ತಾಗಿ ಗಂಡ ಬೇಕಂತೆ! ಬಿಗ್ ಬಾಸ್ ಮನೆಯಲ್ಲಿ ಸನ್ನಿಧಿಯ ಹೊಸ ಬೇಡಿಕೆ
ವೈಷ್ಣವಿ ಮಾಡಿದ ತಪ್ಪಿಗೆ ತಪ್ಪಲಿಲ್ಲ ಕಠಿಣ ಶಿಕ್ಷೆ; ಮನೆಯವರಿಗೆ ಸುಸ್ತೋ ಸುಸ್ತು