Samantha: ಮತ್ತೆ ವರ್ಕೌಟ್ ಶುರು ಮಾಡಿದ ಸಮಂತಾ; ವಿಚಿತ್ರ ಕಾಯಿಲೆಯಿಂದ ಹೊರಬರಲು ನಟಿಯ ಪ್ರಯತ್ನ

ಅತಿಯಾಗಿ ಜಿಮ್ ಮಾಡುವುದರಿಂದಲೂ Myositis ಬರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಸಮಂತಾ ಕೂಡ ಸಾಕಷ್ಟು ಸಮಯ ಜಿಮ್​ನಲ್ಲಿ ಕಳೆದಿದ್ದರು. ಇದರಿಂದಲೇ  ಅವರಿಗೆ Myositis ರೋಗ ಕಾಣಿಸಿಕೊಂಡಿದೆ ಎನ್ನಲಾಗಿತ್ತು.

Samantha: ಮತ್ತೆ ವರ್ಕೌಟ್ ಶುರು ಮಾಡಿದ ಸಮಂತಾ; ವಿಚಿತ್ರ ಕಾಯಿಲೆಯಿಂದ ಹೊರಬರಲು ನಟಿಯ ಪ್ರಯತ್ನ
ವರ್ಕೌಟ್ ಶುರು ಮಾಡಿದ ಸಮಂತಾ

Updated on: Jan 27, 2023 | 8:35 AM

ನಟಿ ಸಮಂತಾ Myositis ಹೆಸರಿನ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದರು. ಇದರಿಂದಾಗಿ ಅವರಿಗೆ ಸಾಕಷ್ಟು ತೊಂದರೆ ಆಗಿದೆ. ಈ ಕಾಯಿಲೆ ಕಾಣಿಸಿದ ನಂತರ  ಸ್ನಾಯುಗಳಲ್ಲಿ ಸೆಳೆತ ಶುರುವಾಗುತ್ತದೆ. ಸಮಂತಾಗೂ (Samantha Ruth Prabhu) ಅದೇ ಆಗಿತ್ತು. ಹೀಗಾಗಿ ಅವರು ವರ್ಕೌಟ್ ಬಿಟ್ಟು ಕಾಯಿಲೆಯಿಂದ ಗುಣಮುಖ ಆಗೋದು ಹೇಗೆ ಎನ್ನುವ ಬಗ್ಗೆಯೇ ಆಲೋಚನೆ ಮಾಡುತ್ತಿದ್ದರು. ಈಗ ಸಮಂತಾ ಅವರು ಮತ್ತೆ ಜಿಮ್​ಗೆ ಮರಳಿದ್ದಾರೆ. ಈ ವಿಡಿಯೋನ ಅವರು ಸೋಶಿಯಲ್ ಮೀಡಿಯಾದಲ್ಲಿ (Social Media) ಶೇರ್ ಮಾಡಿಕೊಂಡಿದ್ದಾರೆ.

ಅತಿಯಾಗಿ ಜಿಮ್ ಮಾಡುವುದರಿಂದಲೂ Myositis ಬರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಸಮಂತಾ ಕೂಡ ಸಾಕಷ್ಟು ಸಮಯ ಜಿಮ್​ನಲ್ಲಿ ಕಳೆದಿದ್ದರು. ಇದರಿಂದಲೇ  ಅವರಿಗೆ Myositis ರೋಗ ಕಾಣಿಸಿಕೊಂಡಿದೆ ಎನ್ನಲಾಗಿತ್ತು. ಅವರು ಸಂಪೂರ್ಣವಾಗಿ ಜಿಮ್ ತೊರೆದಿದ್ದರು. ಈಗ ಅವರು ವರ್ಕೌಟ್ ಮಾಡಲು ಮರಳಿದ್ದಾರೆ. ಈ ವಿಡಿಯೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ
‘ಖುಷಿ’ ಕಥೆಯಲ್ಲಿ ಬದಲಾವಣೆ ಕೇಳಿದ ಸಮಂತಾ; ನೋ ಎಂದ ನಿರ್ದೇಶಕನಿಗೆ ಡೇಟ್ಸ್ ನಿರಾಕರಿಸಿದ ನಟಿ?
Samantha: ಶಾಕುಂತಲೆ ಆಗಿ ಮಿಂಚಿದ ನಟಿ ಸಮಂತಾ; ಇಲ್ಲಿದೆ ಕ್ಯೂಟ್ ಫೋಟೋಸ್​
Samantha Photos: ‘ನಂಬಿಕೆಯ ಹಾದಿಯಲ್ಲಿ ಮೊದಲ ಹೆಜ್ಜೆ’; ಸಮಂತಾ ಬದುಕಿನ ಹೊಸ ಪಾಸಿಟಿವ್​ ಮಂತ್ರ ಇಲ್ಲಿದೆ..

ಸಮಂತಾ ಅವರು ಫಿಟ್​ನೆಸ್​ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಸಾಕಷ್ಟು ಸಮಯವನ್ನು ಅವರು ಜಿಮ್​ನಲ್ಲಿ ಕಳೆಯುತ್ತಿದ್ದರು. ಈ ವಿಚಿತ್ರ ಕಾಯಿಲೆ ಕಾಣಿಸಿಕೊಂಡ ನಂತರದಲ್ಲಿ ಅನಿವಾರ್ಯವಾಗಿ ದಿನಚರಿಯಲ್ಲಿ ಹಲವು ಬದಲಾವಣೆ ಮಾಡಿಕೊಳ್ಳಬೇಕಾಯಿತು. ಈಗ ಸಮಂತಾ ಅವರು ಕಂಬ್ಯಾಕ್ ಮಾಡಿರುವುದು ಖುಷಿಯ ವಿಚಾರ.

ಸಮಂತಾ ನಟನೆಯ ‘ಯಶೋದ’ ಚಿತ್ರ 2022ರಲ್ಲಿ ರಿಲೀಸ್ ಆಯಿತು. ಈ ಸಿನಿಮಾ ಡಬ್ಬಿಂಗ್ ಸಂದರ್ಭದಲ್ಲಿ ಅವರು ವೈದ್ಯಕೀಯ ನೆರವು ಪಡೆದಿದ್ದರು. ಕೈಗೆ ಡ್ರಿಪ್ ಹಾಕಿಕೊಂಡಿದ್ದ ಫೋಟೋ ವೈರಲ್ ಆಗಿತ್ತು. ಈ ವೇಳೆ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಆಗಿತ್ತು. ಈಗ ಅವರ ಆರೋಗ್ಯ ಚೇತರಿಕೆ ಕಾಣುತ್ತಿರುವ ಬಗ್ಗೆ ಅಭಿಮಾನಿಗಳಿಗೆ ಖುಷಿ ಇದೆ.

ಇದನ್ನೂ ಓದಿ: ‘ಖುಷಿ’ ಕಥೆಯಲ್ಲಿ ಬದಲಾವಣೆ ಕೇಳಿದ ಸಮಂತಾ; ನೋ ಎಂದ ನಿರ್ದೇಶಕನಿಗೆ ಡೇಟ್ಸ್ ನಿರಾಕರಿಸಿದ ನಟಿ?

ಸಮಂತಾ ‘ಶಾಕುಂತಲಂ’ ಸಿನಿಮಾ ರಿಲೀಸ್​ಗಾಗಿ ಕಾಯುತ್ತಿದ್ದಾರೆ. ಫೆಬ್ರವರಿ 17ರಂದು ಈ ಚಿತ್ರ ರಿಲೀಸ್ ಆಗುತ್ತಿದೆ. ಶಾಕುಂತಲೆಯ ಕಥೆಯನ್ನು ಆಧರಿಸಿ ಈ ಸಿನಿಮಾ ಸಿದ್ಧಗೊಳ್ಳುತ್ತಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲೂ ಸಮಂತಾ ಭಾಗಿ ಆಗಲಿದ್ದಾರೆ ಎನ್ನಲಾಗಿದೆ. ಸಮಂತಾ ಅವರು ಸ್ಟ್ರಿಕ್ಟ್ ಆಗಿ ಡಯಟ್ ಫಾಲೋ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us