ಶಂಕರ್ ಅಶ್ವತ್ಥ್-ಶಮಂತ್ ನಡುವೆ ಫೈಟ್; ಮೂಗಲ್ಲಿ ರಕ್ತ ಎಂದು ಕೂಗಿದ ಸಂಬರಗಿ
ಶಂಕರ್-ಬ್ರೋ ಗೌಡ ನಡುವೆ ನಡೆದಿದ್ದು ಗಂಭೀರ ಫೈಟ್ ಅಲ್ಲ. ಮನೆಯಲ್ಲಿ ಟೈಮ್ಪಾಸ್ಗೆ ಸ್ಪರ್ಧಿಗಳು ನಾಟಕವಾಡುತ್ತಾರೆ, ಹರಟೆ ಹೊಡೆಯುತ್ತಾರೆ, ತರಲೆ ಮಾಡುತ್ತಾರೆ. ಇಂದು ನಡೆದಿದ್ದು ಕೂಡ ಅದೇ.
ಬಿಗ್ ಬಾಸ್ ಮನೆಯಲ್ಲಿ ಜಗಳಗಳು ನಡೆಯೋದು ಕಾಮನ್! ಆದರೆ, ಒಬ್ಬರ ಮೇಲೆ ಒಬ್ಬರು ಕೈಮಾಡಿಕೊಂಡ ಪ್ರಕರಣ ತುಂಬಾನೇ ಅಪರೂಪ. ಒಂದೊಮ್ಮೆ ಒಬ್ಬರ ಮೇಲೆ ಒಬ್ಬರು ಕೈಮಾಡಿದರೆ ಅಂಥ ಸ್ಪರ್ಧಿಗಳ ವಿರುದ್ಧ ಬಿಗ್ ಬಾಸ್ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತಾರೆ. ಈಗ ಬಿಗ್ ಬಾಸ್ ಮನೆಯಲ್ಲಿ ಶಂಕರ್ ಅಶ್ವತ್ಥ್-ಶಮಂತ್ ಬ್ರೋ ಗೌಡ ನಡುವೆ ಫೈಟ್ ನಡೆದಿದೆ. ಇದು ಅಂತಿಂಥ ಹೊಡೆದಾಟವಲ್ಲ, ಮೂಗಲ್ಲಿ ರಕ್ತ ಬರುವಷ್ಟು ದೊಡ್ಡ ಫೈಟ್. ಇಷ್ಟೆಲ್ಲ ಆಗುವಾಗ ಮನೆ ಮಂದಿ ಏನು ಮಾಡುತ್ತಿದ್ದರು? ಬಿಗ್ ಬಾಸ್ ಏನೂ ಕ್ರಮ ಕೈಗೊಂಡಿಲ್ಲವೇ ಎನ್ನುವ ಪ್ರಶ್ನೆಯೇ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಶಂಕರ್-ಬ್ರೋ ಗೌಡ ನಡುವೆ ನಡೆದಿದ್ದು ಗಂಭೀರ ಫೈಟ್ ಅಲ್ಲ. ಮನೆಯಲ್ಲಿ ಟೈಮ್ಪಾಸ್ಗೆ ಸ್ಪರ್ಧಿಗಳು ನಾಟಕವಾಡುತ್ತಾರೆ, ಹರಟೆ ಹೊಡೆಯುತ್ತಾರೆ, ತರಲೆ ಮಾಡುತ್ತಾರೆ. ಇಂದು ನಡೆದಿದ್ದು ಕೂಡ ಅದೇ. ಶಂಕರ್ ಅಶ್ವತ್ಥ್ ಹಾಗೂ ಶಮಂತ್ ಫೈಟಿಂಗ್ಗೆ ಇಳಿದಿದ್ದರು. ನಾಟಕೀಯವಾಗಿ ಕೈ ಕೈ ಮಿಲಾಯಿಸಿಕೊಂಡಿದ್ದರು. ಮೊದಲ ಬಾರಿ ಶಂಕರ್ ಅಶ್ವತ್ಥ್ ನೆಲಕ್ಕೆ ಬಿದ್ದಂತೆ ನಾಟಕ ಮಾಡಿದರೆ, ಎರಡನೇ ಬಾರಿಗೆ ಶಮಂತ್ ನೆಲಕ್ಕೆ ಬಿದ್ದಿದ್ದಾರೆ.
ಇನ್ನು ಇವರ ಫೈಟ್ ನಡೆಯುವಾಗ ಮನೆ ಮಂದಿಯೆಲ್ಲ ಕೂತು ಮನರಂಜನೆ ತೆಗೆದುಕೊಳ್ಳುತ್ತಿದ್ದರು. ಕೆಲವರು ಶಂಕರ್ ಅಶ್ವತ್ಥ್ ಅವರನ್ನು ಬೆಂಬಲಿಸಿದರೆ ಇನ್ನೂ ಕೆಲವರು ಶಮಂತ್ ಅವರಿಗೆ ಜೈಕಾರ ಹಾಕಿದ್ದಾರೆ. ಈ ವೇಳೆ ಬೇಕಂತಲೇ ಪ್ರಶಾಂತ್ ಅವರು, ಶಮಂತ್ ಮೂಗಲ್ಲಿ ರಕ್ತ ಎಂದು ಕೂಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರೋಮೋ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಮನೆ ಮಂದಿ ಸಖತ್ ಎಂಜಾಯ್ ಮಾಡಿದಂತೆ ಕಂಡು ಬಂದಿದೆ.
View this post on Instagram
ಇಲ್ಲಿ ಮತ್ತೊಂದು ವಿಚಾರವನ್ನು ಗಮನಿಸಬೇಕು. ಶಂಕರ್ ಅಶ್ವತ್ಥ್ ಹಿರಿಯರು ಎನ್ನುವ ಕಾರಣಕ್ಕೆ ಆರಂಭದಲ್ಲಿ ಅವರನ್ನು ಎಲ್ಲರೂ ಬೇರೆ ತಕ್ಕಡಿಯಲ್ಲೇ ಇಟ್ಟು ತೂಗುತ್ತಿದ್ದರು. ಆದರೆ, ಈಗ ಶಂಕರ್ ಅಶ್ವತ್ಥ್ ಮನೆಯ ಎಲ್ಲ ಸದಸ್ಯರ ಜೊತೆ ಬೆರೆಯುತ್ತಿದ್ದಾರೆ. ಈ ಪ್ರೋಮೋ ಇದಕ್ಕೆ ತಾಜಾ ಉದಾಹರಣೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಅಶ್ವತ್ಥ್ ಶಂಕರ್ ನಿಜವಾದ ಬಣ್ಣ ಬಯಲು..