‘ಶೀ’ ವೆಬ್ ಸರಣಿ (She Series)ನಿರ್ದೇಶನ ಮಾಡಿ ಜನಪ್ರಿಯತೆ ಪಡೆದ ಅವಿನಾಶ್ ದಾಸ್ (Avinash Das) ಅವರನ್ನು ಪೊಲೀಸರು ಮುಂಬೈನಲ್ಲಿ ಮಂಗಳವಾರ (ಜುಲೈ 19) ಬಂಧಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಂಧಿತ ಐಎಎಸ್ ಅಧಿಕಾರಿ ಪೂಜಾ ಸಿಂಘಲ್ ಇಬ್ಬರೂ ಒಟ್ಟಾಗಿ ಇರುವ ಫೋಟೋವನ್ನು ಅವಿನಾಶ್ ದಾಸ್ ಅವರು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡು ದಾರಿ ತಪ್ಪಿಸುವ ಕೆಲಸ ಮಾಡಿದ್ದರು. ಈ ಕಾರಣಕ್ಕೆ ಅವಿನಾಶ್ ಅವರನ್ನು ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆಗೆ ಅಹಮದಾಬಾದ್ಗೆ ಅವರನ್ನು ಕರೆತರಲಾಗಿದೆ.
ಅಹಮದಾಬಾದ್ ಅಪರಾಧ ವಿಭಾಗದವರು ಅವಿನಾಶ್ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ. ಐಪಿಸಿಯ ಹಲವು ಸೆಕ್ಷನ್ಗಳ ಅಡಿಯಲ್ಲಿ ಅವರ ವಿರುದ್ಧ ಕೇಸ್ ದಾಖಲಾಗಿದೆ. ಈ ಬೆಳವಣಿಗೆಯಿಂದ ಅವಿನಾಶ್ ವೃತ್ತಿ ಜೀವನಕ್ಕೆ ಸಾಕಷ್ಟು ತೊಂದರೆ ಉಂಟಾಗುವ ಸಾಧ್ಯತೆ ಇದೆ.
ಅವಿನಾಶ್ ದಾಸ್ ಅವರ ವಿರುದ್ಧ ಜೂನ್ ತಿಂಗಳಲ್ಲೇ ಕೇಸ್ ದಾಖಲಾಗಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕಟಣದ ಅಡಿಯಲ್ಲಿ ಪೂಜಾ ಸಿಂಘಲ್ ಅವರನ್ನು ಜಾರಿ ನಿರ್ದೇಶನದ ಅಧಿಕಾರಿಗಳು ಅರೆಸ್ಟ್ ಮಾಡಿದ್ದರು. ಇದಾದ ಬಳಿಕ ಅಮಿತ್ ಶಾ ಕಿವಿಯಲ್ಲಿ ಪೂಜಾ ಏನನ್ನೋ ಹೇಳುತ್ತಿರುವ ಫೋಟೋವನ್ನು ಅವಿನಾಶ್ ಶೇರ್ ಮಾಡಿಕೊಂಡಿದ್ದರು. ‘ಪೂಜಾ ಅವರನ್ನು ಬಂಧಿಸುವುದಕ್ಕೂ ಕೆಲವೇ ದಿನಗಳ ಮೊದಲು ತೆಗೆದ ಫೋಟೋ ಇದು’ ಎಂದು ಅವಿನಾಶ್ ಕ್ಯಾಪ್ಶನ್ ನೀಡಿದ್ದರು. ಆದರೆ, ಈ ಫೋಟೋ ಕ್ಲಿಕ್ ಮಾಡಿದ್ದು 2017ರ ಸಮಯದಲ್ಲಿ. ಅಮಿತ್ ಶಾ ಅವರ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎನ್ನುವ ಆರೋಪವನ್ನು ಪೊಲೀಸರು ಮಾಡಿದ್ದಾರೆ.
ಮಹಿಳೆಯೊಬ್ಬಳು ರಾಷ್ಟ್ರಧ್ವಜವನ್ನು ಧರಿಸಿರುವ ಫೋಟೋವನ್ನು ಅವಿನಾಶ್ ಪೋಸ್ಟ್ ಮಾಡಿದ್ದರು. ಇದರಿಂದ ಅವರು ದೇಶದ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಕ್ರೈಮ್ ಬ್ರ್ಯಾಂಚ್ನವರು ಆರೋಪಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆಯೂ ಅವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಅವಿನಾಶ್ ಅವರು ನಿರೀಕ್ಷಣಾ ಜಾಮಿನು ನೀಡುವಂತೆ ಕೋರಿ ಜೂನ್ ತಿಂಗಳಲ್ಲಿ ಅಹಮದಾಬಾದ್ ಸೆಷನ್ ಕೋರ್ಟ್ಗೆ ಮನವಿ ಮಾಡಿದ್ದರು. ಆದರೆ, ಈ ಮನವಿಯನ್ನು ಕೋರ್ಟ್ ತಿರಸ್ಕರಿಸಿತ್ತು. ನಂತರ ಅವರು ಗುಜರಾತ್ ಹೈಕೋರ್ಟ್ ಮೆಟ್ಟಿಲು ಏರಿದ್ದರು. ಅಲ್ಲಿಯೂ ನಿರೀಕ್ಷಣಾ ಜಾಮೀನು ಸಿಕ್ಕಿಲ್ಲ .
ಇದನ್ನೂ ಓದಿ: ‘ಉದಯ’ ಟಿವಿಯಲ್ಲಿ ‘ಸಲಗ’ ಸಿನಿಮಾ; ಜುಲೈ 24ಕ್ಕೆ ದುನಿಯಾ ವಿಜಯ್ ಅಭಿಮಾನಿಗಳಿಗೆ ಹಬ್ಬ
ಅವಿನಾಶ್ ದಾಸ್ ಅವರು 2017ರಲ್ಲಿ ನಿರ್ದೇಶಕರಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ‘ಅನಾರ್ಕಲಿ ಆಫ್ ಆರಾ’ ಅವರ ಮೊದಲ ಸಿನಿಮಾ. ಸ್ವರಾ ಭಾಸ್ಕರ್, ಪಂಕಜ್ ತ್ರಿಪಾಟಿ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದರು. ಅವರ ನಿರ್ದೇನದ ‘ರಾತ್ ಬಾಕಿ ಹೈ’ ಚಿತ್ರ 2021 ತೆರೆಗೆ ಬಂತು. ‘ಶೀ’ ವೆಬ್ ಸರಣಿಗೂ ಅವರು ನಿರ್ದೇಶನ ಮಾಡಿದ್ದಾರೆ.