‘ಅಭಿಮಾನ, ಪ್ರೀತಿ ನಮ್ಮ ಕುಟುಂಬದ ನೋವಿಗೆ ಕಾರಣವಾಗಬಾರದು’; ಶಿವಣ್ಣ ಭಾವುಕ ಪೋಸ್ಟ್

ಬೆಂಗಳೂರಿನಲ್ಲಿ ಆರ್‌ಸಿಬಿ ಗೆಲುವಿನ ಸಂಭ್ರಮದ ವೇಳೆ ನಡೆದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿದ್ದಾರೆ. ಶಿವರಾಜ್ ಕುಮಾರ್, ರಕ್ಷಿತಾ ಪ್ರೇಮ್, ನಿಶ್ವಿಕಾ ನಾಯ್ಡು ಮತ್ತು ಕಮಲ್ ಹಾಸನ್ ಸೇರಿದಂತೆ ಅನೇಕರು ಈ ದುರಂತಕ್ಕೆ ಸಂತಾಪ ಸೂಚಿಸಿದ್ದಾರೆ. ಘಟನೆಯಿಂದ ಆಘಾತಕ್ಕೊಳಗಾಗಿರುವ ಜನರು ಸರ್ಕಾರವನ್ನು ದೂಷಿಸುತ್ತಿದ್ದಾರೆ.

‘ಅಭಿಮಾನ, ಪ್ರೀತಿ ನಮ್ಮ ಕುಟುಂಬದ ನೋವಿಗೆ ಕಾರಣವಾಗಬಾರದು’; ಶಿವಣ್ಣ ಭಾವುಕ ಪೋಸ್ಟ್
ಶಿವಣ್ಣ

Updated on: Jun 05, 2025 | 7:31 AM

ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿದ್ದಾರೆ. ಆರ್​ಸಿಬಿ ಗೆಲುವಿನ ಖುಷಿಯಲ್ಲಿದ್ದ ಅಭಿಮಾನಿಗಳು ಅಸುನೀಗಿದ್ದು ನಿಜಕ್ಕೂ ಶಾಕಿಂಗ್ ಸಂಗತಿ. ಈ ಘಟನೆ ಬಗ್ಗೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. ನಟ ಶಿವರಾಜ್​ಕುಮಾರ್ (Shivarajkumar), ನಟಿ ರಕ್ಷಿತಾ ಪ್ರೇಮ್, ನಿಶ್ವಿಕಾ ನಾಯ್ಡು ಸೇರಿದಂತೆ ಅನೇಕರು ಘಟನೆಯ ಬಗ್ಗೆ ಪೋಸ್ಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಸಂತ್ರಸ್ತರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ.

‘ಗೆಲುವಿನ ಸಂಭ್ರಮಕ್ಕೆ ಸಾವಿನ ಸೂತಕ ತುಂಬಾ ನೋವಿನ ಸಂಗತಿ. ನೊಂದ ಕುಟುಂಬಸ್ಥರಿಗೆ ಆ ದೇವರು ಈ ನೋವನ್ನು ಭರಿಸುವ ಶಕ್ತಿ ಕೊಡಲಿ. ಸರ್ಕಾರ ಮೃತಪಟ್ಟವರಿಗೆ ನೆರವಾಗಿ ನಿಲ್ಲಲ್ಲಿ ಎಂದು ಪ್ರಾರ್ಥಿಸುತ್ತೇವೆ. ನಾನು ಇಂದಿಗೂ ಹೇಳೋದು ಒಂದೇ, ಅಭಿಮಾನ, ಪ್ರೀತಿ ನಮ್ಮ ಕುಟುಂಬದ ನೋವಿಗೆ ಕಾರಣವಾಗಬಾರದು. ನಿಮ್ಮ ಅಭಿಮಾನ, ನಿಮ್ಮ ಪ್ರೀತಿ ಎಲ್ಲರನ್ನು ಕಾಪಾಡುತ್ತದೆ. ನಿಮ್ಮ ಕುಟುಂಬದವರನ್ನು ನೀವು ಮಾತ್ರ ಕಾಪಾಡಲು ಸಾಧ್ಯ. ಓಂ ಶಾಂತಿ’ ಎಂದು ಶಿವಣ್ಣ ಪೋಸ್ಟ್ ಮಾಡಿದ್ದಾರೆ.

‘ಅಮಾಯಕ ಜೀವಗಳು ಬಲಿಯಾಗಿವೆ. ಸುದ್ದಿ ವಾಹಿನಿಗಳಲ್ಲಿ ಕಾರ್ಯಕ್ರಮ ಲೈವ್ ವೀಕ್ಷಣೆಗೆ ಅವಕಾಶ ಇತ್ತು. ಅಲ್ಲಿಯೇ ಕಾರ್ಯಕ್ರಮ ವೀಕ್ಷಿಸಬಹುದಿತ್ತು. ಮನೆಯಲ್ಲೇ ಇರಿ. ವಿಧಾನಸೌಧದಲ್ಲಿ ಕಾರ್ಯಕ್ರಮ ಸಂಘಟಿತವಾಗಿ ನಡೆದಿಲ್ಲ. ಇದೊಂದು ರಾಜಕೀಯ ಕಾರ್ಯಕ್ರಮದ ರೀತಿ ಇತ್ತು’ ಎಂದು ಅಸಮಧಾನ ಹೊರಹಾಕಿದ್ದಾರೆ. ನಟಿ ನಿಶ್ವಿಕಾ ನಾಯ್ಡು ಕೂಡ ಘಟನೆಯಿಂದ ಶಾಕ್​ಗೆ ಒಳಗಾಗಿದ್ದಾರೆ.

ಇದನ್ನೂ ಓದಿ
‘ಥಗ್ ಲೈಫ್’ ಸಿನಿಮಾ ರಿಲೀಸ್ ವೇಳೆ ಬೆಂಗಳೂರಿಗರ ನೆನೆದು ಮರುಗಿದ ಕಮಲ್ ಹಾಸನ್
ದಾಖಲೆ ಭರ್ಜರಿ ದಾಖಲೆ... ಈ ರೀತಿಯಾಗಿ ಟ್ರೋಫಿ ಎತ್ತಿಹಿಡಿದ ಏಕೈಕ ತಂಡ RCB
RCB ಮ್ಯಾಚ್ ನೋಡುತ್ತಲೇ ಮುಗಿದಯೋಯ್ತು ವೈಷ್ಣವಿ ‘ಸಂಗೀತ್’ ಕಾರ್ಯಕ್ರಮ
ತಮಿಳಿಗರಿಗೆ ಕಮಲ್ ಅಭಿಮಾನಿಗಳಿಂದ ಓಪನ್ ಪತ್ರ; ಎಚ್ಚರಿಕೆಯ ಸಂದೇಶ ರವಾನೆ

ಇದನ್ನೂ ಓದಿ: ‘ಥಗ್ ಲೈಫ್’ ಸಿನಿಮಾ ರಿಲೀಸ್ ವೇಳೆ ಬೆಂಗಳೂರಿಗರ ನೆನೆದು ಮರುಗಿದ ಕಮಲ್ ಹಾಸನ್

ಕಮಲ್ ಹಾಸನ್ ಕೂಡ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ‘ಬೆಂಗಳೂರಿನಲ್ಲಿ ಹೃದಯ ವಿದ್ರಾವಕ ದುರಂತ ನಡೆದಿದೆ. ಈ ಘಟನೆಯಿಂದ ತೀವ್ರ ದುಃಖಿತನಾಗಿದ್ದೇನೆ. ಈ ದುಃಖದ ಕ್ಷಣದಲ್ಲಿ ಸಂತ್ರಸ್ತರ ಕುಟುಂಬಗಳಿಗೆ ನಾನು ಮಿಡಿಯುತ್ತೇನೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ’ ಎಂದು ಕಮಲ್ ಹಾಸನ್ ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 7:30 am, Thu, 5 June 25

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us