‘ಪಸೂರಿ..’ ಹಾಡಿನ ರಿಮೇಕ್ ಕೇಳಿ ಸಿಟ್ಟಾದ ಶೋಯೆಬ್ ಅಖ್ತರ್; ಏನು ಹೇಳಿದ್ರು ನೋಡಿ..

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅವರ ಮಾತುಗಳಲ್ಲಿ ಅಸಮಾಧಾನ ಎದ್ದು ಕಾಣುತ್ತಿದೆ.  

‘ಪಸೂರಿ..’ ಹಾಡಿನ ರಿಮೇಕ್ ಕೇಳಿ ಸಿಟ್ಟಾದ ಶೋಯೆಬ್ ಅಖ್ತರ್; ಏನು ಹೇಳಿದ್ರು ನೋಡಿ..
ಶೋಯೆಬ್-ಕಾರ್ತಿಕ್-ಕಿಯಾರಾ
Follow us
ರಾಜೇಶ್ ದುಗ್ಗುಮನೆ
|

Updated on:Jun 28, 2023 | 1:15 PM

ಕಾರ್ತಿಕ್ ಆರ್ಯನ್ ಹಾಗೂ ಕಿಯಾರಾ ಅಡ್ವಾಣಿ (Kiara Advani) ಅವರು ‘ಸತ್ಯ ಪ್ರೇಮ್​ ಕಿ ಕಹಾನಿ’ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಜನಪ್ರಿಯ ‘ಪಸೂರಿ..’ ಹಾಡನ್ನು ರಿಮೇಕ್ ಮಾಡಲಾಗಿದೆ. ಇದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇವಲ ಭಾರತೀಯರು ಮಾತ್ರವಲ್ಲ ಪಾಕಿಸ್ತಾನದ ಮಂದಿಯೂ ಈ ಬಗ್ಗೆ ಅಪಸ್ವರ ತೆಗೆದಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ (Shoaib Akhtar) ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅವರ ಮಾತುಗಳಲ್ಲಿ ಅಸಮಾಧಾನ ಎದ್ದು ಕಾಣುತ್ತಿದೆ.

ಇತ್ತೀಚೆಗೆ ಹಾಡುಗಳನ್ನು ರಿಮೇಕ್ ಮಾಡುವ ಟ್ರೆಂಡ್ ಜೋರಾಗಿದೆ. ಆದರೆ, ಎಲ್ಲಾ ಸಂದರ್ಭದಲ್ಲೂ ಪರಿಸ್ಥಿತಿ ಹೀಗೆಯೇ ಇರುವುದಿಲ್ಲ. ಜನಪ್ರಿಯ ಹಾಡುಗಳನ್ನು ರಿಮೇಕ್ ಮಾಡಲಾಗುತ್ತದೆ ಎಂದರೆ ಅಲ್ಲಿ ಸಾಕಷ್ಟು ಎಚ್ಚರಿಕೆ ಬೇಕು. ಸ್ವಲ್ಪ ಹೆಚ್ಚುಕಡಿಮೆ ಆದರೂ ಟೀಕೆ ಪಕ್ಕಾ. ಈಗ ‘ಸತ್ಯ ಪ್ರೇಮ್ ಕಿ ಕಹಾನಿ’ ಸಿನಿಮಾದ ಕಥೆಯೂ ಹಾಗೆಯೇ ಆಗಿದೆ.

‘ಹಾಡಿನ ರಿಮೇಕ್ ಬಗ್ಗೆ ಟ್ವೀಟ್ ಮಾಡಿರುವ ಶೋಯೆಬ್ ಅಖ್ತರ್​, ‘ಏನಿದು ಅನಾಹುತ’ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ಸಾವಿರಾರು ಲೈಕ್ಸ್ ಪಡೆದುಕೊಂಡಿದೆ. ‘ಅವರು ಇದನ್ನು ಹಾಳು ಮಾಡಿದರು’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಟಿ ಸೀರಿಸ್​ನವರು ಎಂದಿನಂತೆ ಪಸೂರಿ ಹಾಡನ್ನು ಹಾಳು ಮಾಡಿದರು’ ಎಂದು ಕೆಲವರು ಹೇಳಿದ್ದಾರೆ. ‘ಟಿ ಸೀರಿಸ್​ಗೆ ಹೊಸ ದಿನ ಹೊಸ ಅವಮಾನ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Rishab Shetty: ಪಂಚೆ ಧರಿಸಿ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಪ್ರಶಸ್ತಿ ಪಡೆದ ರಿಷಬ್ ಶೆಟ್ಟಿ

ಅಲಿ ಸೇಥಿ ಅವರ ‘ಪಸೂರಿ’ ಹಾಡು ಕಳೆದ ವರ್ಷ ರಿಲೀಸ್ ಆಗಿ ಹಿಟ್ ಎನಿಸಿಕೊಂಡಿತು. ಇದನ್ನು ರಿಮೇಕ್ ಮಾಡುವ ಮೂಲಕ ‘ಸತ್ಯ ಪ್ರೇಮ್ ಕಿ ಕಥಾ’ ತಂಡ ಜನಪ್ರಿಯತೆ ಪಡೆಯಲು ಹೋಯಿತು. ಆದರೆ, ಈ ಪ್ರಯತ್ನ ಕೈ ಕೊಟ್ಟಿದೆ.

‘ಸತ್ಯ ಪ್ರೇಮ್ ಕಿ ಕಥಾ’ ಸಿನಿಮಾಗೆ ದೊಡ್ಡ ಮಟ್ಟದ ಪ್ರಚಾರ ನೀಡಲಾಗುತ್ತಿದೆ. ಇತ್ತೀಚೆಗೆ ಈ ತಂಡ ಮುಂಬೈನಲ್ಲಿ ಸಾಂಗ್ ರಿಲೀಸ್ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ವೇಳೆ ಕಿಯಾರಾಗೆ ಚಪ್ಪಲಿ ಹಾಕಿಕೊಳ್ಳಲು ಕಾರ್ತಿಕ್ ಆರ್ಯನ್ ಸಹಾಯ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:14 pm, Wed, 28 June 23