ತಮಿಳು ನಟಿಯ ಖಾಸಗಿ ವಿಡಿಯೋ ಲೀಕ್, ಕಾಸ್ಟಿಂಗ್ ಕೌಚ್​ ಜೊತೆ ಲಿಂಕ್

| Updated By: ಮಂಜುನಾಥ ಸಿ.

Updated on: Mar 27, 2025 | 4:08 PM

Shruthi Narayanan: ತಮಿಳು ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ತಮ್ಮ ನಟನೆಯಿಂದ ಹೆಸರು ಮಾಡಿರುವ ನಟಿ ಶ್ರುತಿ ನಾರಾಯಣ್ ಅವರದ್ದು ಎನ್ನಲಾದ ಖಾಸಗಿ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ಖಾಸಗಿ ವಿಡಿಯೋ, ಕಾಸ್ಟಿಂಗ್ ಕೌಚ್ ವಿಡಿಯೋ ಎನ್ನಲಾಗುತ್ತಿದೆ.

ತಮಿಳು ನಟಿಯ ಖಾಸಗಿ ವಿಡಿಯೋ ಲೀಕ್, ಕಾಸ್ಟಿಂಗ್ ಕೌಚ್​ ಜೊತೆ ಲಿಂಕ್
Shruthi Narayan
Follow us on

ತಮಿಳು ಚಿತ್ರರಂಗ (Kollywood) ಹಾಗೂ ಕಿರುತೆರೆಯಲ್ಲಿ ಹೆಸರು ಮಾಡಿರುವ ಖ್ಯಾತ ನಟಿ ಶ್ರುತಿ ನಾರಾಯಣ್ ಅವರದ್ದು ಎನ್ನಲಾಗುತ್ತಿರುವ ಖಾಸಗಿ ವಿಡಿಯೋ ಒಂದು ಲೀಕ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಎಬ್ಬಿಸಿದೆ. ವಿಡಿಯೋ ಇದೀಗ ವೈರಲ್ ಆಗಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ನಟಿ ಶ್ರುತಿ ನಾರಾಯಣ್ ತಮ್ಮ ಇನ್​ಸ್ಟಾಗ್ರಾಂ ಖಾತೆಯನ್ನು ಪ್ರೈವೇಟ್ ಮಾಡಿಟ್ಟುಕೊಂಡಿದ್ದಾರೆ.

ಕಿರಿ ಧಾರಾವಾಹಿ, ರಿಯಾಲಿಟಿ ಶೋಗಳ ಮೂಲಕ ಸಾಕಷ್ಟು ಸಂಖ್ಯೆಯ ಅಭಿಮಾನಿಗಳನ್ನು ಶ್ರುತಿ ನಾರಾಯಣ್ ಹೊಂದಿದ್ದಾರೆ. ಇದೀಗ ಲೀಕ್ ಆಗಿರುವ ವಿಡಿಯೋ, ಕಾಸ್ಟಿಂಗ್ ಕೌಚ್​ ವಿಡಿಯೋ ಎನ್ನಲಾಗುತ್ತಿದೆ. ಪಾತ್ರವೊಂದನ್ನು ಪಡೆಯಲು ನಟಿ ಹೀಗೆಲ್ಲ ಮಾಡಿದ್ದು, ಅದನ್ನು ಯಾರೋ ರೆಕಾರ್ಡ್ ಮಾಡಿಕೊಂಡು ಇದೀಗ ವೈರಲ್ ಮಾಡಿದ್ದಾರೆ ಎಂಬ ವಾದಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿವೆ.

ಶ್ರುತಿ ನಾರಾಯಣ್, ಕೆಲವು ಧಾರಾವಾಹಿ ಹಾಗೂ ಕೆಲವು ಜನಪ್ರಿಯ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ತಮಿಳಿನ ಸೂಪರ್ ಹಿಟ್ ಧಾರಾವಾಹಿ ‘ಕಾರ್ತಿಕ ದೀಪಂ’ನಲ್ಲಿ ಶ್ರುತಿ ನಾರಾಯಣ್ ನಟಿಸಿದ್ದಾರೆ. ಅದರ ಹೊರತಾಗಿ ‘ಮಾರಿ’ ಸಿನಿಮಾದಲ್ಲಿಯೂ ಶ್ರುತಿ ನಟಿಸಿದ್ದರು. ಸಮಂತಾ ಹಾಗೂ ವರುಣ್ ಧವನ್ ನಟಿಸಿರುವ ವೆಬ್ ಸರಣಿ ‘ಸಿಟಾಡೆಲ್: ಹನಿ ಬನಿ’ಯಲ್ಲಿಯೂ ಸಹ ಶ್ರುತಿ ನಾರಾಯಣ್ ನಟಿಸಿದ್ದು ಮಾತ್ರವೇ ಅಲ್ಲದೆ ನಟನೆಗೆ ಒಟಿಟಿ ಅವಾರ್ಡ್​ ಸಹ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ಹುಬ್ಬಳ್ಳಿ: ಪ್ರೇಯಸಿಯ ಖಾಸಗಿ ವಿಡಿಯೋ, ಫೋಟೋ ಶೇರ್ ಮಾಡಿ ಪ್ರಿಯಕರ ಆತ್ಮಹತ್ಯೆ

ತಮ್ಮ ವಿಡಿಯೋ ವೈರಲ್ ಆಗುತ್ತಿದ್ದಂತೆ ತಮ್ಮ ಇನ್​ಸ್ಟಾಗ್ರಾಂನ ಖಾತೆಯನ್ನು ಪ್ರೈವೇಟ್ ಮಾಡಿಕೊಂಡಿರುವ ನಟಿ, ತಮ್ಮ ಚಿತ್ರಗಳಿಗೆ ಯಾರೂ ಕಮೆಂಟ್ ಮಾಡದಂತೆ ಮಾಡಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ಇಂದು (ಮಾರ್ಚ್ 27) ಮಧ್ಯಾಹ್ನ ತಮ್ಮ ಕೆಲವು ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಚಿತ್ರಗಳನ್ನು ಸಹ ಪ್ರೈವೇಟ್ ಮಾಡಿರಿಸಿಕೊಂಡಿದ್ದಾರೆ ನಟಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ