
ಕಮಲ್ ಹಾಸನ್ (Kamal Haasan) ಪುತ್ರಿ ಶ್ರುತಿ ಹಾಸನ್ (Shruti Haasan), ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 25 ವರ್ಷಗಳಾದವು. ಬಾಲಿವುಡ್ನ ‘ಲಕ್’ ಸಿನಿಮಾ ಮೂಲಕ ನಾಯಕಿಯಾದ ಶ್ರುತಿ ಹಾಸನ್ಗೆ ಮೊದಲ ಕೆಲ ವರ್ಷ ಲಕ್ ಕೈ ಹಿಡಿಯಲಿಲ್ಲ. ಆದರೆ ಆ ಬಳಿಕ ಶ್ರುತಿ ಹಾಸನ್ ಸ್ಟಾರ್ ನಾಯಕಿಯಾಗಿ ಮಿಂಚಿದರು. ಪ್ಯಾನ್ ಇಂಡಿಯಾ ಹವಾ ಶುರುವಾಗುವ ಮುಂಚೆಯೇ ಶ್ರುತಿ ಹಾಸನ್ ಪ್ಯಾನ್ ಇಂಡಿಯಾ ನಟಿಯಾಗಿ ಗುರುತಿಸಿಕೊಂಡಿದ್ದರು. 25 ವರ್ಷದ ಬಳಿಕವೂ ಶ್ರುತಿ ಹಾಸನ್ ಬೇಡಿಕೆ ಉಳಿಸಿಕೊಂಡಿದ್ದಾರೆ.
ಶ್ರುತಿ ಹಾಸನ್ ಸಿನಿಮಾಗಳಷ್ಟೆ ಅವರ ಖಾಸಗಿ ಜೀವನದಿಂದಲೂ ಸುದ್ದಿಯಲ್ಲಿರುತ್ತಾರೆ. 39 ವರ್ಷದ ನಟಿ ಶ್ರುತಿ ಹಾಸನ್ ಜೊತೆಗೆ ಹಲವು ನಟರ ಹೆಸರುಗಳು ಕೇಳಿ ಬಂದಿವೆ. ಹಲವು ಬಾಯ್ಫ್ರೆಂಡ್ಗಳನ್ನು ಶ್ರುತಿ ಹಾಸನ್ ಹೊಂದಿದ್ದರು. ಇತರೆ ನಟಿಯರ ರೀತಿ ತಮ್ಮ ಲವ್ ಲೈಫ್ ಅನ್ನು ಮುಚ್ಚಿಟ್ಟುಕೊಂಡವರಲ್ಲ ಶ್ರುತಿ ಹಾಸನ್. ಆದರೆ ಇದೇ ಕಾರಣಕ್ಕೆ ಹಲವು ಬಾರಿ ಟ್ರೋಲ್ ಸಹ ಆಗಿದ್ದಾರೆ ಶ್ರುತಿ ಹಾಸನ್.
‘ಎಷ್ಟನೇ ಬಾಯ್ಫ್ರೆಂಡ್?’ ‘ಎಷ್ಟು ಬಾಯ್ಫ್ರೆಂಡ್ಗಳನ್ನು ಹೊಂದಿದ್ದೀಯ?’ ಎಂದೆಲ್ಲ ನೆಟ್ಟಿಗರು ಶ್ರುತಿ ಹಾಸನ್ ಅವರನ್ನು ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಶ್ರುತಿ ಹಾಸನ್, ‘ಎಲ್ಲರಿಗೂ ಒಬ್ಬ ಕೆಟ್ಟ ಅಥವಾ ಟಾಕ್ಸಿಕ್ ಬಾಯ್ಫ್ರೆಂಡ್ ಇದ್ದೇ ಇರುತ್ತಾನೆ’ ಎಂದಿದ್ದಾರೆ. ಮುಂದುವರೆದು, ‘ಜನ, ಎಷ್ಟನೇ ಬಾಯ್ಫ್ರೆಂಡ್ ಎಂದು ಕೇಳಿದಾಗ ಅವರಿಗೆ ಅದು ಬರೀ ಸಂಖ್ಯೆ ಅಷ್ಟೆ, ಆದರೆ ನನಗೆ ಹಾಗಲ್ಲ, ಎಷ್ಟು ಬಾರಿ ನಾನು ನಿಜ ಪ್ರೀತಿ ಪಡೆಯುವುದರಲ್ಲಿ ಎಡವಿದ್ದೇನೆ ಎಂದಾಗಿರುತ್ತದೆ’ ಎಂದಿದ್ದಾರೆ.
ಇದನ್ನೂ ಓದಿ:ಏನು ಕಿಕ್ಕು, ಏನು ಪಂಚು, ನಟಿ ಶ್ರುತಿ ಹಾಸನ್ ಹೊಸ ಹವ್ಯಾಸ
‘ಜನ ಹಾಗೆಲ್ಲ ಕೇಳಿದಾಗ ನನಗೆ ತುಸು ಬೇಸರ ಆಗುವುದು ನಿಜವೇ, ಆದರೆ ನಾನು ಅಂಥಹಾ ಟಾಕ್ಸಿಕ್ ಕಮೆಂಟ್ಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ನನ್ನ ಈ ವರೆಗಿನ ರಿಲೇಶನ್ಶಿಪ್ಗಳಲ್ಲಿ ನಿಷ್ಠೆಯಿಂದಲೇ ಇದ್ದೀನಿ, ಒಳ್ಳೆಯ ಸಂಗಾತಿಯಾಗಿಯೇ ಇದ್ದೀನಿ. ಆದರೆ ಬೇರೆ ಬೇರೆ ಕಾರಣಗಳಿಗೆ ಸಂಬಂಧಗಳು ಮುರಿದು ಹೋಗುತ್ತವೆ’ ಎಂದಿದ್ದಾರೆ ನಟಿ ಶ್ರುತಿ ಹಾಸನ್.
ಶ್ರುತಿ ಹಾಸನ್ ಹೆಸರು ಹಲವು ಸಿನಿಮಾ ನಟರುಗಳೊಟ್ಟಿಗೆ ಕೇಳಿ ಬಂದಿದೆ. ಶ್ರುತಿ ಹಾಸನ್ ಹೆಸರು ಕ್ರಿಕೆಟಿಗ ವಿರಾಟ್ ಕೊಹ್ಲಿ, ಸುರೇಶ್ ರೈನಾ ಜೊತೆಗೂ ಕೇಳಿ ಬಂದಿತ್ತು. ನಟ ಸಿದ್ಧಾರ್ಥ್, ರಣ್ಬೀರ್ ಕಪೂರ್, ಧನುಶ್ ಇನ್ನೂ ಕೆಲವರೊಟ್ಟಿಗೆ ಕೇಳಿ ಬಂದಿತ್ತು. ಶ್ರುತಿ, ಇತ್ತೀಚೆಗಷ್ಟೆ ಶಂತನು ಹಜಾರಿಕಾ ಜೊತೆ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ. ವಿಶ್ಯುಲ್ ಆರ್ಟಿಸ್ಟ್ ಆಗಿದ್ದ ಶಂತನು ಜೊತೆಗೆ ಲಿವಿನ್ ರಿಲೇಷನ್ನಲ್ಲಿದ್ದರು ನಟಿ. ಲಂಡನ್ ಮೂಲದ ಸಂಗೀತಗಾರ ಮೈಖಲ್ ಕೋರ್ಸೆಲ್ ಜೊತೆಗೂ ಸಹ ಶ್ರುತಿ ಹಾಸನ್ ಹೆಸರು ಕೇಳಿ ಬಂದಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ