ಬಾಯ್​ಫ್ರೆಂಡ್​​ ಸುಮಂತ್​ ಮೇಲೆ ಶುಭಾ ಪೂಂಜಾಗೆ ಶುರುವಾಗಿದೆ ಅನುಮಾನ; ಡೌಟ್​ ಡಬಲ್​ ಮಾಡಿದ ಸುದೀಪ್​

ಈ ವಿಚಾರ ವೀಕೆಂಡ್​ನಲ್ಲಿ ಚರ್ಚೆಗೆ ಬಂದಿದೆ. ಈ ವೇಳೆ ಮಾತನಾಡಿದ್ದ ಶುಭಾ, ಸುಮಂತ್​ ನನ್ನನ್ನು ತುಂಬಾನೇ ಮಿಸ್​ ಮಾಡಿಕೊಳ್ಳುತ್ತಿದ್ದಾರೆ ಎಂದು ನನಗನ್ನಿಸುತ್ತದೆ ಎಂದಿದ್ದರು. ಇದಕ್ಕೆ ಉತ್ತರಿಸಿದ್ದ ಸುದೀಪ್​, ಓ ಭ್ರಮ ಎಂದರು.

ಬಾಯ್​ಫ್ರೆಂಡ್​​ ಸುಮಂತ್​ ಮೇಲೆ ಶುಭಾ ಪೂಂಜಾಗೆ ಶುರುವಾಗಿದೆ ಅನುಮಾನ; ಡೌಟ್​ ಡಬಲ್​ ಮಾಡಿದ ಸುದೀಪ್​

Updated on: Mar 21, 2021 | 9:33 PM

ಶುಭಾ ಅವರು ಸುಮಂತ್​ ಎಂಬುವವರನ್ನು ವಿವಾಹವಾಗುತ್ತಿದ್ದಾರೆ. ಅವರು ಹೇಳಿದ್ದಕ್ಕೇ ಬಿಗ್​ ಬಾಸ್​ ಮನೆಗೆ ಬಂದಿರುವುದಾಗಿ ಶುಭಾ ಹೇಳಿಕೊಂಡಿದ್ದರು. ಈಗ ಶುಭಾಗೆ ಸುಮಂತ್​ ಮೇಲೆ ಒಂದು ಸಣ್ಣ ಅನುಮಾನ ಶುರುವಾಗಿದೆ. ಅಷ್ಟೇ ಅಲ್ಲ, ಈ ಅನುಮಾನವನ್ನು ಕಿಚ್ಚ ಸುದೀಪ್​ ಡಬಲ್​ ಮಾಡಿದ್ದಾರೆ.

ಇತ್ತೀಚೆಗೆ ಶುಭಾ ಕನಸಲ್ಲಿ ಸುಮಂತ್​ ಬಂದಿದ್ದರು ಎನ್ನುವ ವಿಚಾರ ಹೇಳಿಕೊಂಡಿದ್ದರು. ಈ ಬಗ್ಗೆ ಮನೆ ಮಂದಿ ಜತೆ ಮಾತನಾಡಿದ್ದ ಶುಭಾ, ನನಗೆ ನಿನ್ನೆ ಒಂದು ಕನಸು ಬಿದ್ದಿತ್ತು. ಆ ಕನಸಲ್ಲಿ ಸುಮಂತ್​ ಬಂದಿದ್ದರು. ಅವರು ಬಿಗ್​ ಬಾಸ್​ ಮನೆಗೆ ಬಂದಿದ್ದರು. ಮನೆಯಲ್ಲಿ ಅವರನ್ನು ಸುತ್ತಾಡಿಸಿದ್ದೆ. ಆದರೆ, ನೋಡಿದ್ರೆ ಒಂದೇ ಕ್ಷಣಕ್ಕೆ ಅದು ಹಳ್ಳಿ ಮನೆಯಾಗಿಬಿಟ್ಟಿತ್ತು. ಎಲ್ಲಾ ಸ್ಪರ್ಧಿಗಳು ಸಣ್ಣ ಸಣ್ಣ ಗೂಡಲ್ಲಿ ಅಡಗಿ ಕೂತಿದ್ದರು ಎಂದು ಕನಸಿನ ಬಗ್ಗೆ ಹೇಳಿಕೊಂಡಿದ್ದಾರೆ. ಈ ವೇಳೆ ಮಂಜು ಪಾವಗಡ, ನಾವು ಯಾರನ್ನು ಹೆಚ್ಚು ನೆನಪಿಸಿಕೊಳ್ಳುತ್ತೇವೋ ಅವರೇ ಕನಸಲ್ಲಿ ಬರುತ್ತಾರೆ ಎಂದಿದ್ದರು.

ಈ ವಿಚಾರ ವೀಕೆಂಡ್​ನಲ್ಲಿ ಚರ್ಚೆಗೆ ಬಂದಿದೆ. ಈ ವೇಳೆ ಮಾತನಾಡಿದ್ದ ಶುಭಾ, ಸುಮಂತ್​ ನನ್ನನ್ನು ತುಂಬಾನೇ ಮಿಸ್​ ಮಾಡಿಕೊಳ್ಳುತ್ತಿದ್ದಾರೆ ಎಂದು ನನಗನ್ನಿಸುತ್ತದೆ ಎಂದಿದ್ದರು. ಇದಕ್ಕೆ ಉತ್ತರಿಸಿದ್ದ ಸುದೀಪ್​, ಓ ಭ್ರಮ ಎಂದರು.

ನಾವು ಏನೆ ನಡೆದರೂ ನಿಮಗೆ ಹೇಳಲ್ಲ ಬಿಡಿ. ನಮಗೆ ನಿಮ್ಮ ನಂಬಿಕೆ ಮುರಿದು ಹೋಗಬಾರದು ಅಷ್ಟೇ ಎಂದು ಶುಭಾ ತಲೆಯಲ್ಲಿ ಹುಳ ಬಿಟ್ಟರು ಸುದೀಪ್​. ಅವನು ಬೈಕ್​ನಲ್ಲಿ ಯಾರನ್ನಾದರೂ ಕೂರಿಸಿಕೊಂಡು ಹೋಗುತ್ತಿದ್ದರೇ ಎಂದು ಪ್ರಶ್ನೆ ಮಾಡಿದರು ಶುಭಾ. ಈ ವಿಚಾರ ತುಂಬಾನೇ ಚರ್ಚೆ ಆಗಿದೆ. ನಂತರ ಕೊನೆಯಲ್ಲಿ ಶುಭಾ, ಅವನು ಹಾಗೆಲ್ಲ ಮಾಡುವನಲ್ಲ ಎಂದಿದ್ದಾರೆ.

ಇದನ್ನೂ ಓದಿ: Bigg Boss Kannada: ಮನೆಯೊಳಗಿನ ಕಷ್ಟ ತಾಳಲಾರದೆ ಬಿಕ್ಕಿ ಬಿಕ್ಕಿ ಅತ್ತ ನಿಧಿ ಸುಬ್ಬಯ್ಯ, ಶುಭಾ ಪೂಂಜಾ!

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us