Shubha Poonja: ನನ್ನ ಹುಡುಗನಿಗೆ ಪ್ರಪೋಸ್​​ ಮಾಡಿದ್ದು ನಾನಲ್ಲ, ನನ್ನ ಅಮ್ಮ; ಶುಭಾ ಪೂಂಜಾ ಪ್ರೇಮಕಥೆ ಕೇಳಿ ಬಿಗ್​ ಬಾಸ್​ ಮಂದಿ ಶಾಕ್

Bigg Boss Kannada: ಶುಭಾ ಪೂಂಜಾ ಮೇ 3ರ ಸಂಚಿಕೆಯಲ್ಲಿ ಮಾತನಾಡಿದ ಟಾಪಿಕ್ ತುಂಬ ಆಸಕ್ತಿಕರವಾಗಿತ್ತು. ತಮ್ಮ ಮತ್ತು ಸುಮಂತ್ ನಡುವೆ ಪ್ರೀತಿ ಹೇಗೆ ಚಿಗುರಿತು ಎಂಬುದನ್ನು ಅವರು ವಿವರಿಸಿದ್ದಾರೆ.

Shubha Poonja: ನನ್ನ ಹುಡುಗನಿಗೆ ಪ್ರಪೋಸ್​​ ಮಾಡಿದ್ದು ನಾನಲ್ಲ, ನನ್ನ ಅಮ್ಮ; ಶುಭಾ ಪೂಂಜಾ ಪ್ರೇಮಕಥೆ ಕೇಳಿ ಬಿಗ್​ ಬಾಸ್​ ಮಂದಿ ಶಾಕ್
ಮದುವೆ ಯಾವಾಗ? ಸುದೀಪ್​ ಎದುರು ಗುಟ್ಟು ಬಿಚ್ಚಿಟ್ಟ ಶುಭಾ ಪೂಂಜಾ
Edited By:

Updated on: May 04, 2021 | 6:02 PM

ಬಿಗ್​ ಬಾಸ್​ ಎಂದರೆ ಅದೊಂದು ಕಾಂಟ್ರವರ್ಸಿ ಶೋ ಎಂದು ಅನೇಕರು ಹೇಳುತ್ತಾರೆ. ಆದರೆ ಅದಕ್ಕೂ ಮೀರಿದ ವಿಚಾರಗಳು ದೊಡ್ಮನೆಯೊಳಗೆ ನಡೆಯುತ್ತವೆ. ಸ್ಪರ್ಧಿಗಳು ಮನಬಿಚ್ಚಿ ತಮ್ಮ ಖಾಸಗಿ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಒಮ್ಮೆ ಕಂಫರ್ಟ್​ ವಾತಾವರಣ ನಿರ್ಮಾಣ ಆಗಿಬಿಟ್ಟರೆ ಎಲ್ಲವನ್ನೂ ಮುಕ್ತವಾಗಿ ಮಾತನಾಡುತ್ತಾರೆ. ಈಗ ನಟಿ ಶುಭಾ ಪೂಂಜಾ ಅವರು ತಮ್ಮ ಬಾಯ್​ ಫ್ರೆಂಡ್​ ಬಗ್ಗೆ ಕೆಲವು ಮಾತುಗಳನ್ನು ಬಿಗ್​ ಬಾಸ್​ ಮನೆಯಲ್ಲಿ ಹಂಚಿಕೊಂಡಿದ್ದಾರೆ.

ಸುಮಂತ್​ ಎಂಬುವವರ ಜೊತೆ ಶುಭಾ ಪೂಂಜಾ ಮದುವೆ ಆಗಲು ಸಜ್ಜಾಗಿದ್ದಾರೆ. ತಮ್ಮ ಭಾವಿ ಪತಿ ಬಗ್ಗೆ ಬಿಗ್​ ಬಾಸ್​ನಲ್ಲಿ ಅವರು ಅನೇಕ ಬಾರಿ ಮಾತನಾಡಿದ್ದಾರೆ. ಮೇ 3ರ ಸಂಚಿಕೆಯಲ್ಲಿ ಅವರು ಮಾತನಾಡಿದ ಟಾಪಿಕ್​ ತುಂಬ ಆಸಕ್ತಿಕರವಾಗಿತ್ತು. ತಮ್ಮ ಮತ್ತು ಸುಮಂತ್​ ನಡುವೆ ಪ್ರೀತಿ ಹೇಗೆ ಚಿಗುರಿತು ಎಂಬುದನ್ನು ಅವರು ವಿವರಿಸಿದ್ದಾರೆ. ಅಂತಿಮವಾಗಿ ತಮ್ಮಿಬ್ಬರಲ್ಲಿ ಪ್ರಪೋಸ್​ ಮಾಡಿದ್ದು ಯಾರು ಎಂಬುದನ್ನು ಕೂಡ ಅವರು ತಿಳಿಸಿದ್ದಾರೆ.

‘ಡೇಟಿಂಗ್​ ಮಾಡುತ್ತಿರುವಾಗ ನಾನು ಅವನಿಗೆ ಒಂದು ಸಾಂಗ್​ ಕಳಿಸಿದ್ದೆ. ಅವನು ಏನೂ ರಿಪ್ಲೈ ಮಾಡಲಿಲ್ಲ. ಐದಾರು ದಿನ ಆದ ಬಳಿಕ ನಾನೇ ಆ ಬಗ್ಗೆ ಮಾತು ಎತ್ತಿದೆ. ಸಾಂಗ್​ ನೋಡಿದ್ಯಾ ಅಂತ ಕೇಳಿದೆ. ಅದರಲ್ಲಿ ಏನು ವಿಶೇಷ ಇದೆ ಅನ್ನೋ ರೀತಿ ಉತ್ತರ ನೀಡಿದ. ನನ್ನ ಮಗನೇ ಸ್ವಲ್ಪನೂ ರೊಮ್ಯಾನ್ಸ್​ ಇಲ್ಲವಲ್ಲೋ ಅನಿಸಿತು. ಮೊದಲೆಲ್ಲಾ ಅವನು ಹಾಗೆಯೇ ಇದ್ದ. ಶೂಟಿಂಗ್​ ವೇಳೆ ಅವನನ್ನು ಮಿಸ್​ ಮಾಡಿಕೊಂಡು ನಾನು ಉದ್ದುದ್ದ ಮೆಸೇಜ್​ ಕಳಿಸುತ್ತಿದ್ದೆ. ಅವನು ಬರೀ ಓಕೆ ಅಂತ ರಿಪ್ಲೈ ಮಾಡ್ತಿದ್ದ’ ಎಂದು ಶುಭಾ ಪೂಂಜಾ ಹೇಳಿದ್ದಾರೆ.

‘ಅವನು ನನಗೆ ಪ್ರಪೋಸ್​ ಮಾಡಿದ್ದು ಎಷ್ಟು ವಿಚಿತ್ರವಾಗಿತ್ತು ಎಂದರೆ, ಏನೇನೋ ಮಾತನಾಡಿ ಕೊನೆಗೆ ಇದು ಎಷ್ಟು ಚೆನ್ನಾಗಿದೆ ಅಲ್ಲವಾ. ಇದನ್ನೆಲ್ಲ ನಾಳೆ ನಾನು ಹೇಗೆ ಬಿಟ್ಟಿರುವುದು ಅಂತ ಗೊತ್ತಿಲ್ಲ. ನನಗೆ ಡಮ್​ ಡಮ್​ ಅಂತ ಎದೆ ಹೊಡೆದುಕೊಳ್ಳುತ್ತಿದೆ ಅಂತ ವಾಯ್ಸ್​ ನೋಟ್​ ಕಳಿಸಿದ. ನಾನು ಅದಕ್ಕೆ ಏನೂ ರಿಪ್ಲೈ ಮಾಡಲಿಲ್ಲ. ಅವನು ಬಾಯಿ ಬಿಟ್ಟು ಐ ಲವ್​ ಯೂ, ನನ್ನ ಮದುವೆ ಆಗ್ತೀಯಾ ಅಂತ ಹೇಳಬಹುದಿತ್ತು. ಅದರ ಬದಲು 10 ದಿನ ಇಂಥ ಮಾತಲ್ಲೇ ಸರ್ಕಲ್​ ಹೊಡೆದ. ಕೊನೆಗೆ ಯಾರು ಪ್ರಪೋಸ್​ ಮಾಡಿದ್ದು ಗೊತ್ತಾ? ನಮ್ಮ ಅಮ್ಮ! ನನಗೆ ನೀನು ಇಷ್ಟ ಆಗ್ತೀಯ. ನಮ್ಮ ಮನೆಗೆ ನೀನು ಅಳಿಯಾ ಆಗ್ತೀಯಾ ಅಂತ ಅಮ್ಮ ಕೇಳಿದರು’ ಎಂದು ಶುಭಾ ಹೇಳಿದ ಕಥೆ ಕೇಳಿ ಎಲ್ಲರಿಗೂ ಅಚ್ಚರಿ ಆಯಿತು.

ಇದನ್ನೂ ಓದಿ:

ಬಿಗ್​ ಬಾಸ್​ ಎದುರು ಶುಭಾ ಪೂಂಜಾ ಇಟ್ಟ ಬೇಡಿಕೆ ನೋಡಿ ಮನೆಯವರಿಗೆ ಅಳಬೇಕೋ ನಗಬೇಕೋ ಗೊತ್ತಾಗ್ತಿಲ್ಲ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us