ಬದುಕಿರುವ ಖ್ಯಾತ ನಟ ಸತ್ತಿದ್ದಾರೆ ಎಂದ ಯುಟ್ಯೂಬ್ ಚಾನೆಲ್; ರಿಪೋರ್ಟ್ ಮಾಡಿದ ನಟನಿಗೆ ಬಂದಿತ್ತು ಶಾಕಿಂಗ್ ಆನ್ಸರ್!

| Updated By: shivaprasad.hs

Updated on: Jul 18, 2021 | 6:04 PM

Siddarth: ಖ್ಯಾತ ತಮಿಳು ಮತ್ತು ಹಿಂದಿ ನಟ ಸಿದ್ದಾರ್ಥ್ ಬದುಕಿಲ್ಲ ಎಂಬ ಸಂಂದೇಶ ಸೂಚಿಸುವ ವಿಡಿಯೊವೊಂದು ಯುಟ್ಯೂಬ್​ನಲ್ಲಿದೆ. ಅದರ ಕುರಿತು ಸ್ವತಃ ಸಿದ್ದಾರ್ಥ್ ಅವರೇ ಆಕ್ಷೇಪಣೆ ಸಲ್ಲಿಸಿದ್ದರೂ ಸಹ, ಯುಟ್ಯೂಬ್​ ಇಂದ ಬಂದ ಉತ್ತರ ಶಾಕಿಂಗ್ ಆಗಿತ್ತು.!

ಬದುಕಿರುವ ಖ್ಯಾತ ನಟ ಸತ್ತಿದ್ದಾರೆ ಎಂದ ಯುಟ್ಯೂಬ್ ಚಾನೆಲ್; ರಿಪೋರ್ಟ್ ಮಾಡಿದ ನಟನಿಗೆ ಬಂದಿತ್ತು ಶಾಕಿಂಗ್ ಆನ್ಸರ್!
ನಟ ಸಿದ್ದಾರ್ಥ್(ಸಂಗ್ರಹ ಚಿತ್ರ)
Follow us on

ಇತ್ತೀಚೆಗಷ್ಟೇ ತಮಿಳು ಮತ್ತು ಹಿಂದಿಯ ಖ್ಯಾತ ನಟ ಸಿದ್ದಾರ್ಥ್ ಅವರಿಗೆ ಅವರ ಅಭಿಮಾನಿಗಳು ಒಂದು ಶಾಕಿಂಗ್ ನ್ಯೂಸ್ ತಿಳಿಸಿದ್ದರು. ಅದೇನೆಂದರೆ, ಯುಟ್ಯೂಬ್ ಚಾನೆಲ್ ಒಂದು ಅಕಾಲಿಕ ಮರಣಕ್ಕೆ ತುತ್ತಾದ ದಕ್ಷಿಣ ಭಾರತದ ಖ್ಯಾತ ನಟ ಮತ್ತು ನಟಿಯರ ಪಟ್ಟಿ ತಯಾರಿಸಿತ್ತು. ಅದರ ಚಿತ್ರದಲ್ಲಿ ನಟ ಸಿದ್ದಾರ್ಥ್ ಅವರನ್ನೂ ಸೇರಿಸಲಾಗಿತ್ತು. ಇದನ್ನು ಸಿದ್ದಾರ್ಥ್ ಗಮನಕ್ಕೆ ತಂದಿದ್ದ ಅವರ ಅಭಿಮಾನಿಗಳು, ಈ ಜಗತ್ತಿನಲ್ಲಿ ಎಂತೆಂಥವರು ಇರುತ್ತಾರೆ; ಕೇವಲ ಹೆಚ್ಚು ಜನರು ವೀಕ್ಷಿಸಲು ಬದುಕಿರುವ ನಟನನ್ನು ಸತ್ತಿದ್ದಾನೆ ಎಂದು ತಪ್ಪು ಮಾಹಿತಿ ಹಂಚುತ್ತಾರಲ್ಲಾ ಎಂದು ಬೇಸರ ವ್ಯಕ್ತಪಡಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ನಟ ಸಿದ್ದಾರ್ಥ್ ಅಚ್ಚರಿಯ ಮಾಹಿತಿಯೊಂದನ್ನು ಹೊರಗೆಡವಿದ್ದಾರೆ. ಆ ವಿಡಿಯೊವನ್ನು ಸಿದ್ದಾರ್ಥ್ ಈ ಮೊದಲೇ ಗಮನಿಸಿದ್ದರಂತೆ. ಅದೂ ವರ್ಷಗಳ ಮೊದಲು! ಅದರ ಮಾಹಿತಿ ನೋಡಿ ಗಾಬರಿಗೊಂಡ ಅವರು ಯುಟ್ಯೂಬ್​ಗೆ ರಿಪೋರ್ಟ್ ಸಹ ಮಾಡಿದ್ದರಂತೆ. ಆದರೆ ಯುಟ್ಯೂಬ್ ತಂಡದಿಂದ ಬಂದ ಉತ್ತರ ಹಾಸ್ಯಾಸ್ಪದವಾಗಿತ್ತು. ಆ ವಿಡಿಯೊದಲ್ಲಿ ನಮಗೆ ಯಾವುದೇ ಸಮಸ್ಯೆ ಕಾಣುತ್ತಿಲ್ಲ ಎಂದು ಯುಟ್ಯೂಬ್ ಪ್ರತಿಕ್ರಿಯಿಸಿತಂತೆ. ಇದನ್ನು ಹಂಚಿಕೊಂಡ ಸಿದ್ದಾರ್ಥ್, ನಾನು ಯುಟ್ಯೂಬ್ ರಿಪ್ಲೆ ನೋಡಿ ಎಲಾ ಇವರಾ.. ಎಂದುಕೊಂಡೆ ಎಂದಿದ್ದಾರೆ. ದುರಂತವೆಂದರೆ ತಪ್ಪು ಮಾಹಿತಿ ಸಾರುತ್ತಿರುವ ಆ ವಿಡಿಯೊ ನಾಲ್ಕು ಮಿಲಿಯನ್​ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಸಿದ್ದಾರ್ಥ್ ಅವರು ‘ಜಿಗರಿಥಂಡಾ’, ‘ಸಿವಪ್ಪು ಮಂಜಲ್ ಪಚಾಯ್’ ಸೇರಿದಂತೆ ಹಲವು ತೆಲುಗು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆಮೀರ್ ಖಾನ್ ಅವರೊಂದಿಗೆ ತೆರೆ ಹಂಚಿಕೊಂಡ ‘ರಂಗ್ ದೆ ಬಸಂತಿ’ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ಹಾಗೂ ಯಶಸ್ಸು ತಂದುಕೊಟ್ಟಿತ್ತು.

ಸಿದ್ದಾರ್ಥ್ ಹಂಚಿಕೊಂಡಿರುವ ಟ್ವೀಟ್:

ಇದನ್ನೂ ನೋಡಿ: ಹೊಸ ಕತೆ ರೆಡಿ ಮಾಡ್ತಿದ್ದಾರೆ ಬಾಹುಬಲಿ ಖ್ಯಾತಿಯ ಈ ಕತೆಗಾರ; ನಾಯಕ ಯಾರು ಗೊತ್ತಾ?

ಇದನ್ನೂ ನೋಡಿ: ಬಾಯ್​ಫ್ರೆಂಡ್​ ಬಗ್ಗೆ ಹೊಸ ದೂರು ತಂದ ಆಮಿರ್ ಖಾನ್​ ಮಗಳು ಇರಾ ಖಾನ್​

(Siddarth shares hilarious reply from Youtube for reporting a video that says he is dead)

Published On - 5:36 pm, Sun, 18 July 21