ಸೈಮಾ 2023: ಪ್ರಶಸ್ತಿ ಗೆದ್ದ ಮಲಯಾಳಂ ಸಿನಿಮಾ, ಕಲಾವಿದರು ಹಾಗೂ ತಂತ್ರಜ್ಞರ ಪಟ್ಟಿ

|

Updated on: Sep 17, 2023 | 5:35 PM

SIIMA 2023: ಸೈಮಾ 2023 ಪ್ರಶಸ್ತಿ ಗೆದ್ದ ಮಲಯಾಳಂ ಸಿನಿಮಾ, ನಟರು, ತಂತ್ರಜ್ಞರ ಪಟ್ಟಿ ಇಲ್ಲಿದೆ. ಕನ್ನಡ ಹಾಗೂ ತಮಿಳು ಚಿತ್ರರಂಗದ ಸಿನಿಮಾಗಳಿಗೆ ಸೆಪ್ಟೆಂಬರ್ 15ರಂದೇ ಪ್ರಶಸ್ತಿ ನೀಡಲಾಗಿದೆ.

ಸೈಮಾ 2023: ಪ್ರಶಸ್ತಿ ಗೆದ್ದ ಮಲಯಾಳಂ ಸಿನಿಮಾ, ಕಲಾವಿದರು ಹಾಗೂ ತಂತ್ರಜ್ಞರ ಪಟ್ಟಿ
ಮಲಯಾಳಂ
Follow us on

ಸೈಮಾ 2023 (SIIMA 2023) ದುಬೈನ ವರ್ಲ್ಡ್ ಟ್ರೇಡ್ ಸೆಂಟರ್​ನಲ್ಲಿ ಸೆಪ್ಟೆಂಬರ್ 15 ಹಾಗೂ 16ರಂದು ಅದ್ಧೂರಿಯಾಗಿ ನಡೆದಿದೆ. ಸೆಪ್ಟೆಂಬರ್ 15ರಂದು ಕನ್ನಡ, ತೆಲುಗು ಸಿನಿಮಾಗಳು, ನಟರು ಹಾಗೂ ತಂತ್ರಜ್ಞರಿಗೆ ಪ್ರಶಸ್ತಿಗಳನ್ನು ನೀಡಲಾಗಿದೆ. ಕನ್ನಡದಲ್ಲಿ ಯಶ್, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಸೇರಿದಂತೆ ಇನ್ನೂ ಹಲವು ಪ್ರಮುಖ ನಟ-ನಟಿಯರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಸೆಪ್ಟೆಂಬರ್ 16ರಂದು ತಮಿಳು ಹಾಗೂ ಮಲಯಾಳಂ ಚಿತ್ರರಂಗದ ಅತ್ಯುತ್ತಮ ನಟ-ನಟಿಯರಿಗೆ ಪ್ರಶಸ್ತಿಗಳನ್ನು ನೀಡಲಾಗಿದೆ. ಈ ಬಾರಿ ಸೈಮಾ ಪ್ರಶಸ್ತಿ ಪಡೆದ ಮಲಯಾಳಂ ಚಿತ್ರರಂಗದ ಸಿನಿಮಾ, ನಟರು, ತಂತ್ರಜ್ಞರ ಪಟ್ಟಿ ಇಲ್ಲಿದೆ.

ಸೈಮಾ ಪ್ರಶಸ್ತಿ ಗೆದ್ದ ಮಲಯಾಳಂ ಸಿನಿಮಾಗಳು, ನಟರ ಪಟ್ಟಿ

ಅತ್ಯುತ್ತಮ ನಟ: ಟೊವಿನೊ ಥಾಮಸ್ (ತಲ್ಲುಮಾಲ)

ಅತ್ಯುತ್ತಮ ನಟಿ: ಕಲ್ಯಾಣಿ ಪ್ರಿಯದರ್ಶಿನಿ (ಬ್ರೋ ಡ್ಯಾಡಿ)

ಅತ್ಯುತ್ತಮ ಸಿನಿಮಾ: ನಾ ದಾನ್ ಕೇಸ್ ಕುಡು

ಅತ್ಯುತ್ತಮ ನಿರ್ದೇಶಕ: ವಿನೀತ್ ಶ್ರೀನಿವಾಸನ್ (ಹೃದಯಂ)

ಅತ್ಯುತ್ತಮ ಗಾಯಕ: ಜೋಬ್ ಕುರಿಯನ್ (ಸೌದಿ ವೆಲಕ್ಕ)

ಅತ್ಯುತ್ತಮ ಗಾಯಕಿ: ಮೃದುಲಾ ವಾರಿಯರ್ (ಪತ್ತೋನ್​ಪತ್ತಂ ನೂಟ್ಟಾಡು)

ಅತ್ಯುತ್ತಮ ಸಿನಿಮಾಟೊಗ್ರಾಫರ್: ಶರಣ್ ವೇಲಾಯುಧನ್ (ಸೌದಿ ವೆಲಕ್ಕ)

ಅತ್ಯುತ್ತಮ ವಿಲನ್: ವಿನೀತ್ ಶ್ರೀನಿವಾಸನ್ (ಮುಕುಂದನ್ ಉನ್ನಿ ಅಸೋಸಿಯೇಟ್ಸ್)

ಅತ್ಯುತ್ತಮ ಹೊಸ ನಟ: ಅಭಿನವ್ ಸುಂದರ್ (ಮುಕುಂದನ್ ಉನ್ನಿ ಅಸೋಸಿಯೇಟ್ಸ್)

ಅತ್ಯುತ್ತಮ ಹೊಸ ನಿರ್ದೇಶಕ:

ಅತ್ಯುತ್ತಮ ಹೊಸ ನಿರ್ಮಾಪಕ: ಮೆಪ್ಪಾಡಿಯನ್ (ಉನ್ನಿ ಮುಕುಂದನ್)

ಅತ್ಯುತ್ತಮ ಹೊಸ ನಟಿ: ಗಾಯತ್ರಿ ಶಂಕರ್ (ನಾ ದಾನ್ ಕೇಸ್ ಕುಡು)

ಅತ್ಯುತ್ತಮ ಸಂಗೀತ ನಿರ್ದೇಶಕ:

ಇದನ್ನೂ ಓದಿ:SIIMA Awards 2023: ಸೈಮಾ ಅವಾರ್ಡ್​ ಗೆದ್ದ ರಿಷಬ್​ ಶೆಟ್ಟಿ, ಯಶ್​, ರಕ್ಷಿತ್ ಶೆಟ್ಟಿ; ಈ ಬಾರಿ ಯಾರಿಗೆಲ್ಲ ಒಲಿದಿದೆ ಪ್ರಶಸ್ತಿ?

ಅತ್ಯುತ್ತಮ ನಟಿ (ಕ್ರಿಟಿಕ್ಸ್): ದರ್ಶನ ರಾಜೇಂದ್ರನ್ (ಜಯ ಜಯ ಜಯ ಹೇ)

ಅತ್ಯುತ್ತಮ ನಟ (ಕ್ರಿಟಿಕ್ಸ್): ಕುಂಚಿಕೊ ಬೋಬನ್ (ನಾನ್ ದಾನ್ ಕೇಸ್ ಕುಡು)

ಅತ್ಯುತ್ತಮ ಕಲಾ ನಿರ್ದೇಶಕ:

ಅತ್ಯುತ್ತಮ ಹಾಸ್ಯ ನಟ: ರಾಜೇಶ್ ಮಾಧವನ್ (ನಾ ದಾನ್ ಕೇಸ್ ಕುಡು)

ಅತ್ಯುತ್ತಮ ಪೋಷಕ ನಟ: ಲಾಲ್ (ಮಹಾವೀರ್ಯ)

ಅತ್ಯುತ್ತಮ ಪೋಷಕ ನಟಿ: ಬಿಂದು ಪನಿಕೇರ್ (ರೊಸಾರುಚ್)

ಅತ್ಯುತ್ತಮ ಗೀತ ಸಾಹಿತಿ: ವಿನಾಯಕ್ ಸಸಿಕುಮಾರ್ (ಭೀಷ್ಮ ಪರ್ವಂ)

ಇದನ್ನೂ ಓದಿ: ಸೈಮಾ 2023: ಪ್ರಶಸ್ತಿ ಗೆದ್ದ ತಮಿಳು ಸಿನಿಮಾ, ಕಲಾವಿದರು ಹಾಗೂ ತಂತ್ರಜ್ಞರ ಪಟ್ಟಿ

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ