‘ಡ್ರಗ್ ಜಾಸ್ತಿ ಆಯ್ತು, ಆತ್ಮಹತ್ಯೆ ಪ್ರಯತ್ನವಲ್ಲ’; ಖ್ಯಾತ ಗಾಯಕಿ ಕಲ್ಪನಾ ಮಗಳ ಪ್ರತಿಕ್ರಿಯೆ
ಖ್ಯಾತ ಗಾಯಕಿ ಕಲ್ಪನಾ ರಾಘವೇಂದ್ರ ಅವರು ನಿದ್ರಾಮಾತ್ರೆ ಅತಿಯಾಗಿ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಘಟನೆ ಆತ್ಮಹತ್ಯೆ ಪ್ರಯತ್ನವಲ್ಲ ಎಂದು ಅವರ ಮಗಳು ಸ್ಪಷ್ಟಪಡಿಸಿದ್ದಾರೆ. ನಿದ್ರಾಹೀನತೆಯಿಂದ ಬಳಲುತ್ತಿದ್ದ ಕಲ್ಪನಾ ಅವರು ಅತಿಯಾಗಿ ಮಾತ್ರೆ ಸೇವಿಸಿದ್ದಾರೆ ಎಂದು ಹೇಳಲಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಅಭಿಮಾನಿಗಳು ನಿಟ್ಟುಸಿರು ಬಿಡುವಂತಾಗಿದೆ.

ಖ್ಯಾತ ಗಾಯಕಿ ಕಲ್ಪಾನಾ ರಾಘವೇದ್ರ (Kalpana Raghavendra) ಅವರು ನಿದ್ರೆ ಮಾತ್ರೆ ಸೇವನೆ ಮಾಡಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂಬ ವಿಚಾರ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಕಲ್ಪನಾ ಅವರು ಇಷ್ಟೆಲ್ಲ ಸೂಪರ್ ಹಿಟ್ ಹಾಡುಗಳನ್ನು ನೀಡಿದರೂ ಜೀವವನ್ನು ಕೊನೆಗೊಳಿಸಿಕೊಳ್ಳುವಂಥದೇನಾಗಿತ್ತು ಎಂಬುದು ಅನೇಕರ ಪ್ರಶ್ನೆ ಆಗಿತ್ತು. ಇದಕ್ಕೆ ಅವರ ಮಗಳು ಸ್ಪಷ್ಟನೆ ನೀಡಿದ್ದಾರೆ. ಹೈದರಾಬಾದ್ನಲ್ಲೇ ಇರೋ ಅವರು ಎಲ್ಲಾ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ. ಇದು ಆತ್ಮಹತ್ಯೆ ಪ್ರಯತ್ನ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದರಿಂದ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.
‘ನನ್ನ ತಾಯಿಗೆ ಯಾವುದೇ ಸಮಸ್ಯೆ ಇಲ್ಲ. ಅವರು ಆರೋಗ್ಯವಾಗಿದ್ದಾರೆ. ಅವರು ಎಲ್ಎಲ್ಬಿ ಹಾಗೂ ಪಿಎಚ್ಡಿ ಮಾಡುತ್ತಿದ್ದಾರೆ. ಅವರಿಗೆ ನಿದ್ರಾಹೀನತೆ ಇದೆ. ಅವರು ನಿದ್ರೆಮಾತ್ರೆ ತೆಗೆದುಕೊಂಡಿದ್ದಾರೆ. ಇದು ಓವರ್ಡೋಸ್ ಆಗಿದೆ. ಇದು ಆತ್ಮಹತ್ಯೆ ಪ್ರಯತ್ನವಲ್ಲ’ ಎಂದಿದ್ದಾರೆ ಕಲ್ಪನಾ ಮಗಳು.
‘ನಮಗೆ ಅವರ ಬಗ್ಗೆ ಖುಷಿ ಇದೆ. ನಡೆದ ಘಟನೆಯನ್ನು ತಿರುಚಬೇಡಿ. ಇದು ಡ್ರಗ್ (ಔಷಧ) ಓವರ್ಡೋಸ್ ಆಗಿದೆ ಅಷ್ಟೇ’ ಎಂದು ಹೇಳುವ ಮೂಲಕ ಎಲ್ಲಾ ವಂದತಿಗಳನ್ನು ತಳ್ಳಿ ಹಾಕಿದ್ದಾರೆ. ಕಲ್ಪನಾ ಅವರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದಾರೆ.
ಕಲ್ಪನಾ ಅವರು ಮಂಗಳವಾರ (ಮಾರ್ಚ್ 4) ಮಧ್ಯಾಹ್ನ 3 ಗಂಟೆಗೆ ನಿದ್ರೆ ಮಾತ್ರೆ ಸೇವನೆ ಮಾಡಿದರು. ಅವರ ಪತಿ ಸಂಜೆ ಕರೆ ಮಾಡಿದರೂ ಕಲ್ಪನಾ ಕರೆ ಸ್ವೀಕರಿಸಿಲ್ಲ. ಆ ಬಳಿಕ ಕಲ್ಪನಾ ಪತಿ ಪರಿಚಯಸ್ಥರಿಗೆ ಕರೆ ಮಾಡಿ ತಿಳಿಸಿದರು. ಪರಿಚಯಸ್ಥರು ಮನೆ ಬಾಗಿಲು ತಟ್ಟಿದರೂ ಅವರು ತೆಗೆದಿಲ್ಲ. ನಂತರ ಬಾಗಿಲು ಒಡೆದು ಒಳ ಹೋದಾಗ ಕಲ್ಪನಾ ಪ್ರಜ್ಞಾ ಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಇದನ್ನೂ ಓದಿ: ಎರಡು ದಿನಗಳಿಂದ ಬಾಗಿಲನ್ನೇ ತೆರೆಯದ ಗಾಯಕಿ; ಒಳಗೆ ಆಗಿತ್ತು ಯಾರೂ ಊಹಿಸದ ಘಟನೆ
ಕಲ್ಪನಾ ಅವರು ಹಲವು ಹಾಡುಗಳನ್ನು ಹಾಡಿದ್ದಾರೆ. ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಅವರು ಹೆಚ್ಚು ಗುರುತಿಸಿಕೊಂಡಿದ್ದಾರೆ. ಅವರಿಗೆ ಈ ರೀತಿ ಆಗಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:59 pm, Wed, 5 March 25








