
ಮಹೇಶ್ ಬಾಬು (Mahesh Babu) ಸ್ಟಾರ್ ನಟ, ಅವರ ಪುತ್ರಿ ಸಿತಾರಾ ಗಟ್ಟಿಮನೇನಿ (Sitara Gattimaneni) ಒಂದೂ ಸಿನಿಮಾ ಮಾಡುವ ಮುಂಚೆಯೇ ಸ್ಟಾರ್ ಆಗಿಬಿಟ್ಟಿದ್ದಾರೆ. ಸಿತಾರಾರ ಸುಂದರ ಚಿತ್ರಗಳು ಇತ್ತೀಚೆಗಷ್ಟೆ ನ್ಯೂಯಾರ್ಕ್ ಟೈಮ್ಸ್ ಸ್ಕೇರ್ನಲ್ಲಿ ಪ್ರದರ್ಶಿತಗೊಂಡಿದ್ದವು. ಪಿಎಂಜೆ ಹೆಸರಿನ ಆಭರಣ ಸಂಸ್ಥೆಗಾಗಿ ಸಿತಾರಾ ಮಾಡೆಲಿಂಗ್ ಮಾಡಿದ್ದರು. ಆಭರಣ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ಒಳ್ಳೆಯ ಸಂಭಾವನೆ ಸಿತಾರಾಗೆ ದೊರೆತಿದ್ದು, ಆದರೆ ಸಿತಾರಾ ತಮಗೆ ದೊರೆತ ಮೊದಲ ಸಂಭಾವನೆಯನ್ನು ಒಂದೊಳ್ಳೆ ಕಾರ್ಯಕ್ಕೆ ಬಳಸಿದ್ದಾರೆ.
ಸಿತಾರಾ ತಮಗೆ ದೊರೆತ ದೊಡ್ಡ ಮೊತ್ತದ ಮೊದಲ ಸಂಭಾವನೆಯನ್ನು ಸಮಾಜ ಸೇವೆ ಮಾಡುತ್ತಿರುವ ಸಂಸ್ಥೆಯೊಂದಕ್ಕೆ ನೀಡಿದ್ದಾಗಿ ಹೇಳಿದ್ದಾರೆ. ಸಿತಾರಾ ಅವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಮಹೇಶ್ ಬಾಬು ಸಹ ನವಜಾತ ಶಿಶುಗಳ ಆರೋಗ್ಯಕ್ಕೆ ಸಂಬಂಧಿಸಿದ ಚಾರಿಟಿ ನಡೆಸುತ್ತಿದ್ದು, ಈವರೆಗೆ ಹಲವು ಪುಟ್ಟ ಮಕ್ಕಳ ಜೀವ ಉಳಿಸುವ ಕಾರ್ಯ ಮಾಡಿದ್ದಾರೆ. ಸಿತಾರಾ ಸಹ ತಂದೆಯಂತೆಯೇ ಸಾಮಾಜಿಕ ಕಾರ್ಯದ ಬಗ್ಗೆ ಆಸಕ್ತಿವಹಿಸಿರುವುದು ಮಹೇಶ್ ಬಾಬು ಹಾಗೂ ಅವರ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.
ಸಿತಾರಾ, ಬಹುಮುಖ ಪ್ರತಿಭೆಯುಳ್ಳ ಬಾಲಕಿ. ಎಳವೆಯಲ್ಲೇ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿ ತಮ್ಮ ಗೆಳತಿಯರೊಟ್ಟಿಗೆ ಸೇರಿ ಕೆಲವು ಪಠ್ಯ ಸಂಬಂಧಿ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದರು. ಅದಾದ ಬಳಿಕ ತಮ್ಮ ಡ್ಯಾನ್ಸ್ ವಿಡಿಯೋಗಳನ್ನು ಹಂಚಿಕೊಳ್ಳಲು ಆರಂಭಿಸಿದರು. ಡ್ಯಾನ್ಸ್ ರಿಯಾಲಿಟಿ ಶೋನಲ್ಲಿಯೂ ಕಾಣಿಸಿಕೊಂಡು ಅದ್ಭುತವಾಗಿ ಡ್ಯಾನ್ಸ್ ಮಾಡಿ ವಾವ್ ಎನಿಸಿಕೊಂಡರು. ಆ ಬಳಿಕ ‘ಫ್ರೋಜನ್ 2’ ಸಿನಿಮಾದ ತೆಲುಗು ಅವತರಣಿಕೆಯಲ್ಲಿ ನಾಯಕಿಗೆ ಧ್ವನಿ ನೀಡಿದರು. ಈಗ ಮಾಡೆಲ್ ಆಗಿದ್ದಾರೆ.
ಇದನ್ನೂ ಓದಿ:Sitara: ಚಿಕ್ಕ ವಯಸ್ಸಿನಲ್ಲೇ ದೊಡ್ಡ ಡೀಲ್ ಒಪ್ಪಿಕೊಂಡ ಮಹೇಶ್ ಬಾಬು ಪುತ್ರಿ ಸಿತಾರಾ; ಸಿಗುತ್ತಿದೆ ಭರ್ಜರಿ ಸಂಭಾವನೆ
ಸಿತಾರಾ ಇನ್ನೂ ಬಾಲಕಿಯಾಗಿದ್ದು ಅವರ ವಯಸ್ಸು 10 ವರ್ಷಗಳಷ್ಟೆ. ಶಿಕ್ಷಣದಲ್ಲಿಯೂ ಚುರುಕಾಗಿರುವ ಸಿತಾರಾ, ಸಿನಿಮಾಗಳ ಬಗ್ಗೆ ಬಹಳ ಆಸಕ್ತಿವಹಿಸಿದ್ದಾರೆ. ತಂದೆಯೊಟ್ಟಿಗೆ ಶೂಟಿಂಗ್ ಸೆಟ್ಗೆ ಭೇಟಿ ನೀಡುವ ಸಿತಾರಾ. ತಂದೆಯ ಸಿನಿಮಾಗಳ ಹಾಡುಗಳಿಗೆ ತಮ್ಮದೇ ರೀತಿಯಲ್ಲಿ ಡ್ಯಾನ್ಸ್ ಮಾಡಿ ವಿಡಿಯೋಗಳನ್ನು ಅಪ್ಲೋಡ್ ಮಾಡತ್ತಿರುತ್ತಾರೆ. ಈಗಾಗಲೇ ಹಲವು ಸಿನಿಮಾ ಅವಕಾಶಗಳು ಸಿತಾರಾಗೆ ಬರುತ್ತಿವೆ ಆದರೆ ತಾಯಿ ನಮ್ರತಾಗೆ, ಈಗಲೇ ಮಗಳು ಸಿನಿಮಾ ಲೋಕಕ್ಕೆ ಎಂಟ್ರಿ ನೀಡುವುದು ಇಷ್ಟವಿಲ್ಲವಂತೆ. ಶಿಕ್ಷಣ ಮುಗಿಸಿದ ಬಳಿಕ ನಾಯಕಿಯಾಗಲಿ ಎಂಬುದು ನಮ್ರತಾ ಬಯಕೆ.
ಮಹೇಶ್ ಬಾಬು ಹಾಗೂ ನಮ್ರತಾ ಶಿರೋಡ್ಕರ್ ಜೋಡಿಗೆ ಇಬ್ಬರು ಮಕ್ಕಳು. ಮಗ ಗೌತಮ್ ಈಗಾಗಲೇ ತಂದೆಯೊಟ್ಟಿಗೆ ‘ನೇನೊಕ್ಕಡಿನೆ’ ಸಿನಿಮಾದಲ್ಲಿ ನಟಿಸಿದ್ದಾರೆ. ಸಿತಾರಾ ಇನ್ನೂ ಸಿನಿಮಾಗಳಲ್ಲಿ ನಟಿಸಿಲ್ಲವಾದರೂ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ