‘ತಾಯಿ ಕಿಳವಿ’ ಚಿತ್ರದ ಯಶಸ್ಸು: ನಿರ್ದೇಶಕನಿಗೆ ದುಬಾರಿ ಕಾರು ಗಿಫ್ಟ್ ನೀಡಿದ ನಟ ಶಿವಕಾರ್ತಿಕೇಯನ್

ನಟ ಮತ್ತು ನಿರ್ಮಾಪಕ ಶಿವಕಾರ್ತಿಕೇಯನ್ ಅವರು ತಮ್ಮ ನಿರ್ಮಾಣದ 'ತಾಯಿ ಕಿಳವಿ' ಸಿನಿಮಾ 100 ದಿನ ಪೂರೈಸಿದ ಸಂಭ್ರಮದಲ್ಲಿದ್ದಾರೆ. ಈ ಭರ್ಜರಿ ಬಾಕ್ಸ್ ಆಫೀಸ್ ಯಶಸ್ಸಿನ ಹಿನ್ನೆಲೆಯಲ್ಲಿ, ಚಿತ್ರದ ನಿರ್ದೇಶಕ ಶಿವಕುಮಾರ್ ಮುರುಗೇಶನ್ ಅವರಿಗೆ ಹೊಚ್ಚ ಹೊಸ ಮಹೀಂದ್ರಾ BE 6 ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಹಿರಿಯ ನಟಿ ರಾಧಿಕಾ ಶರತ್‌ಕುಮಾರ್ ಕೂಡ ಚಿತ್ರದ ಯಶಸ್ಸು ಮತ್ತು ನಿರ್ದೇಶಕನ ಪ್ರತಿಭೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ತಾಯಿ ಕಿಳವಿ ಚಿತ್ರದ ಯಶಸ್ಸು: ನಿರ್ದೇಶಕನಿಗೆ ದುಬಾರಿ ಕಾರು ಗಿಫ್ಟ್ ನೀಡಿದ ನಟ ಶಿವಕಾರ್ತಿಕೇಯನ್
ಶಿವಕಾರ್ತಿಕೇಯನ್
Edited By:

Updated on: Jul 09, 2026 | 7:53 AM

ಮುಖ್ಯಾಂಶಗಳು

  • ಶಿವಕಾರ್ತಿಕೇಯನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿಬಂದ 'ತಾಯಿ ಕಿಳವಿ'
  • ಚಿತ್ರಮಂದಿರಗಳಲ್ಲಿ 100 ದಿನಗಳನ್ನು ಪೂರೈಸಿದ ಸಿನಿಮಾ
  • ಶಿವಕಾರ್ತಿಕೇಯನ್ ಕಡೆಯಿಂದ ವಿಶೇಷ ಉಡುಗೊರೆ

ಕಾಲಿವುಡ್ ಸ್ಟಾರ್ ನಟ ಮತ್ತು ನಿರ್ಮಾಪಕ ಶಿವಕಾರ್ತಿಕೇಯನ್ ಆಗಾಗಾ ಸುದ್ದಿ ಆಗುತ್ತಾ ಇರುತ್ತಾರೆ. ಅವರು ಸಿನಿಮಾ ರಂಗದಲ್ಲಿ ಒಳ್ಳೊಳ್ಳೆಯ ಸಿನಿಮಾಗಳನ್ನು ನೀಡುತ್ತಾ ಇದ್ದಾರೆ. ಈಗ ಅವರು ತಮ್ಮ ಉದಾರ ಗುಣದಿಂದ ಮತ್ತೆ ಸುದ್ದಿಯಾಗಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆಯಡಿ ಮೂಡಿಬಂದ ‘ತಾಯಿ ಕಿಳವಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದು ಅವರಿಗೆ ಖುಷಿ ನೀಡಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ದೇಶಕ ಶಿವಕುಮಾರ್ ಮುರುಗೇಶನ್ ಅವರಿಗೆ ಶಿವಕಾರ್ತಿಕೇಯನ್ ಹೊಚ್ಚ ಹೊಸ ‘ಮಹೀಂದ್ರಾ BE 6’ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಚಿತ್ರಮಂದಿರಗಳಲ್ಲಿ ಸಿನಿಮಾ ಯಶಸ್ವಿಯಾಗಿ 100 ದಿನಗಳನ್ನು ಪೂರೈಸಿದ ಸಂಭ್ರಮಾಚರಣೆಯ ದಿನದಂದೇ ಈ ದುಬಾರಿ ಕಾರನ್ನು ಗಿಫ್ಟ್ ಆಗಿ ನೀಡಲಾಗಿದೆ. ಕಾರು ನೀಡುತ್ತಿರುವ ಫೋಟೋಗಳನ್ನು ಶಿವಕಾರ್ತಿಕೇಯನ್ ಪ್ರೊಡಕ್ಷನ್ಸ್ ಸಂಸ್ಥೆಯು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ‘ನಾವು ಯಾವಾಗಲೂ ಹೆಮ್ಮೆಪಡುವಂತಹ ಪ್ರಯಾಣಕ್ಕೆ ಒಂದು ವಿಶೇಷ ಉಡುಗೊರೆ’ ಎಂದು ಬರೆದುಕೊಂಡಿದೆ. ಅಲ್ಲದೆ ಚಿತ್ರದ ಯಶಸ್ಸಿಗೆ ಕಾರಣರಾದ ಕಲಾವಿದರು, ತಂತ್ರಜ್ಞರು, ವಿತರಕರು ಮತ್ತು ಪ್ರದರ್ಶಕರಿಗೆ ಧನ್ಯವಾದಗಳನ್ನು ಅರ್ಪಿಸಿದೆ.

ರಾಧಿಕಾ ಶರತ್‌ಕುಮಾರ್ ಶ್ಲಾಘನೆ:

ಈ ಚಿತ್ರದಲ್ಲಿ ಹಿರಿಯ ನಟಿ ರಾಧಿಕಾ ಶರತ್‌ಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೆಲವು ತಿಂಗಳುಗಳ ಹಿಂದೆ ನಡೆದ ಚಿತ್ರದ ಯಶಸ್ಸಿನ ಸಭೆಯಲ್ಲಿ ಅವರು ನಿರ್ದೇಶಕರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು.

‘ಒಮ್ಮೆ ಕಮಲ್ ಹಾಸನ್ ಅವರು ನನ್ನ ಬಳಿ ಮಾತನಾಡುತ್ತಾ, ಈ ಸಿನಿಮಾ ಯಶಸ್ವಿಯಾಗಬೇಕು. ಸಿನಿಮಾ ಚೆನ್ನಾಗಿದ್ದರೆ ನಿನಗೆ ಮೆಚ್ಚುಗೆ ಸಿಗುತ್ತದೆ. ಆದರೆ ಸಿನಿಮಾ ಸೂಪರ್ ಹಿಟ್ ಆದಲ್ಲಿ ನಿರ್ದೇಶಕ ಶಿವಕುಮಾರ್ ಮುರುಗೇಶನ್ ಸೇರಿದಂತೆ ಚಿತ್ರದ ಎಲ್ಲರಿಗೂ ದೊಡ್ಡ ಬ್ರೇಕ್ ಸಿಗುತ್ತದೆ ಎಂದು ಹೇಳಿದ್ದರು’ ಎಂದು ರಾಧಿಕಾ ನೆನಪಿಸಿಕೊಂಡಿದ್ದರು.

ಇದನ್ನೂ ಓದಿ: ‘ನಿಮ್ಮ ಲೀಡರ್​​ಶಿಪ್ ಇಷ್ಟ’; ಧೋನಿ ಹಾಡಿ ಹೊಗಳಿದ ಶಿವಕಾರ್ತಿಕೇಯನ್

ದೊಡ್ಡ ಸ್ಟಾರ್ ಸಿನಿಮಾಗಳಂತೆ ಟಿಕೆಟ್ ದರವನ್ನು ಹೆಚ್ಚಿಸದೆ, ಸಾಮಾನ್ಯ ದರದಲ್ಲೇ ಈ ಸಿನಿಮಾ ಕಮರ್ಷಿಯಲ್ ಆಗಿ ದೊಡ್ಡ ಕಮಾಯಿ ಮಾಡಿದೆ. ಈ ಚಿತ್ರವು ಮಾನವೀಯ ಸಂಬಂಧಗಳು ಮತ್ತು ಹೆಣ್ಣಿನ ಧ್ವನಿಗೆ ಗೌರವ ಕೊಡುವ ಕಥೆಯನ್ನು ಹೊಂದಿದ್ದು, ಪ್ರೇಕ್ಷಕರ ಹೃದಯ ಮುಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us