ಶೋಭಿತಾ ದುಲಿಪಾಲ್ (Sobhita Dhulipala) ಆಗಾಗ ಸುದ್ದಿ ಆಗುತ್ತಿದ್ದಾರೆ. ನಾಗ ಚೈತನ್ಯ ಜೊತೆಗೆ ಬೆಳೆದಿರೋ ಆಪ್ತತೆ ಇದಕ್ಕೆ ಕಾರಣ. ಇಬ್ಬರೂ ಡೇಟ್ ಮಾಡುತ್ತಿದ್ದಾರೆ ಎನ್ನುವ ವರದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಆದರೆ, ಇದನ್ನು ಅವರು ಒಪ್ಪಿಕೊಂಡಿಲ್ಲ. ಇವರ ಪ್ರೀತಿ ವಿಚಾರದಲ್ಲಿ ಸ್ಪಷ್ಟನೆ ಸಿಗೋ ಸಾಧ್ಯತೆ ಇದೆ. ಇಂದು (ಮೇ 31) ಶೋಭಿತಾ ಜನ್ಮದಿನ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಬರುತ್ತಿದೆ. ಒಂದೊಮ್ಮೆ ನಾಗ ಚೈತನ್ಯ ಅವರಿಗೆ ಪ್ರೀತಿಯಿಂದ ವಿಶ್ ತಿಳಿಸಿದರೆ ಅವರ ಪ್ರೀತಿ ವಿಚಾರ ಖಚಿತ ಆಗಲಿದೆ.
ನಾಗ ಚೈತನ್ಯ ಹಾಗೂ ಸಮಂತಾ ಮದುವೆ ಆಗಿ ನಾಲ್ಕು ವರ್ಷ ಸಂಸಾರ ನಡೆಸಿದ್ದರು. 2021ರ ಅಕ್ಟೋಬರ್ನಲ್ಲಿ ಇವರು ಬೇರೆ ಆಗುವ ನಿರ್ಧಾರಕ್ಕೆ ಬಂದರು. ಇದು ಅನೇಕರಿಗೆ ಶಾಕಿಂಗ್ ಎನಿಸಿತ್ತು. ಆ ಬಳಿಕ ಇಬ್ಬರೂ ಮುಖಾಮುಖಿ ಆಗಿಲ್ಲ. ಈಗ ಇಬ್ಬರೂ ತಮ್ಮ ತಮ್ಮ ವೃತ್ತಿ ಜೀವನದಲ್ಲಿ ಬ್ಯುಸಿ ಇದ್ದಾರೆ. ನಾಗ ಚೈತನ್ಯ ಅವರು ಈಗ ಶೋಭಿತಾ ಜೊತೆ ಕ್ಲೋಸ್ ಆಗಿದ್ದಾರೆ.
ಶೋಭಿತಾ ಅವರು ಹಿಂದಿ, ತೆಲುಗು ಇಂಡಸ್ಟ್ರಿಯಲ್ಲಿ ಬ್ಯುಸಿ ಇದ್ದಾರೆ. ಅವರಿಗೆ ನಾಗ ಚೈತನ್ಯ ಜೊತೆ ಒಳ್ಳೆಯ ಗೆಳೆತನ ಬೆಳೆದಿದೆ. ಆ ಬಳಿಕ ಗೆಳೆತನ ಪ್ರೀತಿಗೆ ತಿರುಗಿದೆ ಎನ್ನುವ ಮಾತು ಇದೆ. ಆದರೆ, ಈ ವಿಚಾರವನ್ನು ಎಲ್ಲಿಯೂ ರಿವೀಲ್ ಮಾಡಿಲ್ಲ. ಒಂದೊಮ್ಮೆ ಇಂದು ನಾಗ ಚೈತನ್ಯ ಅವರು ಶೋಭಿತಾಗೆ ಪ್ರೀತಿಯಿಂದ ಬರ್ತ್ಡೇ ವಿಶ್ ತಿಳಿಸಿದರೆ ಡೇಟಿಂಗ್ ವಿಚಾರ ಖಚಿತವಾಗಲಿದೆ.
ಇದನ್ನೂ ಓದಿ: ನಾಗ ಚೈತನ್ಯ-ಶೋಭಿತಾ ಆಪ್ತವಾಗಿರೋದು ಹೌದು, ಆದರೆ ಮದುವೆ ಆಗೋ ಆಲೋಚನೆ ಇಲ್ಲ
ಶೋಭಿತಾ ಅವರು ಮಾಡೆಲಿಂಗ್ ಕ್ಷೇತ್ರವನ್ನು ಮೊದಲು ಆಯ್ಕೆ ಮಾಡಿಕೊಂಡರು. ಆ ಬಳಿಕ ಅವರು ಆಯ್ಕೆ ಮಾಡಿದ್ದು ಸಿನಿಮಾ ರಂಗವನ್ನು. ‘ರಮಣ್ ರಾಘವ್ 2.0’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು. ಈ ಚಿತ್ರ 2016ರಲ್ಲಿ ಬಿಡುಗಡೆ ಆಯಿತು. ಆ ಬಳಿಕ ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದರು. ಶೋಭಿತಾ ನಟನೆಯ ‘ದಿ ನೈಟ್ ಮ್ಯಾನೇಜರ್’ ವೆಬ್ ಸೀರಿಸ್ ಗಮನ ಸೆಳೆದಿದೆ. ಇದರಲ್ಲಿ ಅವರು ಕಾವೇರಿ ದೀಕ್ಷಿತ್ ಹೆಸರಿನ ಪಾತ್ರ ಮಾಡಿದ್ದಾರೆ. ಇದಕ್ಕೆ ಅವರಿಗೆ ಅವಾರ್ಡ್ ಕೂಡ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:26 am, Fri, 31 May 24