ಭೂಗತ ಜಗತ್ತಿನ ಕೈವಾಡದಿಂದ ಸೋನಾಲಿ ಬೇಂದ್ರೆಗೆ ತಪ್ಪಿತ್ತು ಹಲವು ಸಿನಿಮಾ ಆಫರ್

ಸೋನಾಲಿ 1994ರಲ್ಲಿ ಬಿಡುಗಡೆಯಾದ ‘ಆಗ್' ಸಿನಿಮಾ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಸೋನಾಲಿಗೆ ಆಗ 19 ವರ್ಷ. ಇದಕ್ಕೂ ಮೊದಲು ಅವರು ಟಿವಿ ಜಾಹೀರಾತುಗಳಲ್ಲಿ ನಟಿಸಿದ್ದರು. ‘ಸರ್ಫರೋಷ್’, ‘ಮೇಜರ್ ಸಾಬ್’ ಸೇರಿ ಅನೇಕ ಹಿಟ್ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಅವರು ಭೂಗತ ಜಗತ್ತಿನ ಬಗ್ಗೆ ಮಾತನಾಡಿದ್ದರು.

ಭೂಗತ ಜಗತ್ತಿನ ಕೈವಾಡದಿಂದ ಸೋನಾಲಿ ಬೇಂದ್ರೆಗೆ ತಪ್ಪಿತ್ತು ಹಲವು ಸಿನಿಮಾ ಆಫರ್
ಸೋನಾಲಿ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Feb 06, 2024 | 12:11 PM

ನಟಿ ಸೋನಾಲಿ ಬೇಂದ್ರೆ (Sonali Bendre) ಬಾಲಿವುಡ್‌ನಲ್ಲಿ ಸಕ್ರಿಯವಾಗಿಲ್ಲ. ಅವರು ಸದ್ಯ ಕಿರುತೆರೆಯಲ್ಲಿ ಅನೇಕ ಶೋಗಳಿಗೆ ಜಡ್ಜ್ ಆಗಿ ಗಮನ ಸೆಳೆಯುತ್ತಿದ್ದಾರೆ. ವೆಬ್ ಸೀರಿಸ್ ಲೋಕಕ್ಕೂ ಅವರು ಕಾಲಿಟ್ಟಿದ್ದಾರೆ. ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಅವರು ಸಕ್ರಿಯರಾಗಿದ್ದಾರೆ. ತಮ್ಮ ಫೋಟೋಗಳನ್ನು ಅವರು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಸೋನಾಲಿ ಹಲವು ವಿವಾದಗಳನ್ನು ಮಾಡಿಕೊಂಡಿದ್ದಾರೆ. 90ರ ದಶಕದಲ್ಲಿ ಸೋನಾಲಿ ಅಭಿಮಾನಿಗಳು ಫೇವರಿಟ್ ಆಗಿದ್ದರು. ಬಾಲಿವುಡ್‌ಗೆ ಇದ್ದ ಭೂಗತ ಜಗತ್ತಿನ ಸಂಪರ್ಕದಿಂದ ಸೋನಾಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಸಂದರ್ಶನವೊಂದರಲ್ಲಿ ಭೂಗತ ಜಗತ್ತಿನ ಬಗ್ಗೆ ಹೇಳಿಕೆ ನೀಡಿದ್ದರು. ಹಲವು ಆಫರ್​ಗಳನ್ನು ಅವರು ಕಳೆದುಕೊಳ್ಳುಲು ಅಂಡರ್​ವರ್ಲ್ಡ್​ ಕಾರಣ ಆಗಿತ್ತು.

ಭೂಗತ ಲೋಕದವರು ಸಿನಿಮಾ ನಿರ್ಮಾಪಕರು ಮತ್ತು ನಿರ್ದೇಶಕರ ಮೇಲೆ ಒತ್ತಡ ಹೇರುತ್ತಿದ್ದರು. ಯಾವ ನಟಿ ಯಾವ ಸಿನಿಮಾದಲ್ಲಿ ನಟಿಸಬೇಕು ಎಂಬುದನ್ನು ಅಂಡರ್​ವರ್ಲ್ಡ್ ನಿರ್ಧರಿಸುತ್ತಿತ್ತು. 1990ರ ದಶಕದಲ್ಲಿ ಭೂಗತ ಜಗತ್ತು ನನ್ನನ್ನು ಬಾಲಿವುಡ್‌ನಿಂದ ದೂರವೇ ಇಡುವ ಪ್ರಯತ್ನ ಮಾಡಿತು ಎಂದಿದ್ದಾರೆ ಅವರು. ಈ ಸಂದರ್ಭದಲ್ಲಿ ಅವರ ಬಾಯ್​ಫ್ರೆಂಡ್ (ಈಗ ಪತಿ) ಹಾಗೂ ನಿರ್ಮಾಪಕ ಗೋಲ್ಡಿ ಅವರು ಸೋನಾಲಿಗೆ ಸಹಾಯ ಮಾಡಿದರು.

ನಟಿ ಸೋನಾಲಿ 1994ರಲ್ಲಿ ಬಿಡುಗಡೆಯಾದ ‘ಆಗ್’ ಸಿನಿಮಾ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆಗ ಸೋನಾಲಿಗೆ ಕೇವಲ 19 ವರ್ಷ. ಇದಕ್ಕೂ ಮೊದಲು ಅವರು ಟಿವಿ ಜಾಹೀರಾತುಗಳಲ್ಲಿ ನಟಿಸಿದ್ದರು. ‘ಸರ್ಫರೋಷ್’, ‘ಮೇಜರ್ ಸಾಬ್’ ಸೇರಿ ಅನೇಕ ಹಿಟ್ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

‘ಕೆಲವು ಶುದ್ಧ ಹಸ್ತಗಳು ಸಿನಿಮಾ ಮಾಡುತ್ತಿದ್ದವು. ಇದರ ಜೊತೆಗೆ ಕೆಲವರು ನಿರ್ಮಾಪಕರಿಗೆ ಎಲ್ಲೆಲ್ಲಿಂದಲೋ ಹಣಗಳು ಬರುತ್ತಿದ್ದವು. ಆ ಹಣಗಳು ಬ್ಯಾಂಕ್​ನಿಂದ ಬರುತ್ತಿರಲಿಲ್ಲ. ಹಲವು ಬಾರಿ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ ಕೆಲವೇ ದಿನಗಳಲ್ಲಿ ನನ್ನ ಸ್ಥಾನಕ್ಕೆ ಮತ್ತೋರ್ವ ನಟಿ ಬರುತ್ತಿದ್ದರು. ಭೂಗತ ಜಗತ್ತಿನ ಒತ್ತಡಕ್ಕೆ ಮಣಿದು ಹಲವು ಚಿತ್ರಗಳಲ್ಲಿ ನಟಿಸುವ ಅವಕಾಶ ತಪ್ಪಿದೆ’ ಎಂದು ಅವರು ಹೇಳಿದ್ದರು.

ಸೋನಾಲಿ ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅವರು ಕುಟುಂಬದ ಕಡೆ ಹೆಚ್ಚು ಒಲವು ತೋರುತ್ತಿದ್ದಾರೆ. 49ರ ಹರೆಯದಲ್ಲೂ ಸೊನಾಲಿ ಸೌಂದರ್ಯ ಕುಗ್ಗಿಲ್ಲ. 2022ರಲ್ಲಿ ರಿಲೀಸ್ ಆದ ‘ದಿ ಬ್ರೋಕನ್ ನ್ಯೂಸ್’ ವೆಬ್ ಸೀರಿಸ್​ನಲ್ಲಿ ಸೋನಾಲಿ ನಟಿಸಿದ್ದಾರೆ.

ಇದನ್ನೂ ಓದಿ: ‘ನಾನು ನಿಮ್ಮ ಸಿನಿಮಾಗಳನ್ನು ನೋಡಿಯೇ ಇಲ್ಲ’; ‘ಅನಿಮಲ್’ ನಿರ್ದೇಶಕನ ಟೀಕೆಗೆ ಆಮಿರ್ ಪತ್ನಿಯ ಉತ್ತರ

1998ರಲ್ಲಿ ನಡೆದ ಪ್ರಕರಣ ಅವರ ವೃತ್ತಿ ಜೀವನಕ್ಕೆ ಕಪ್ಪು ಚುಕ್ಕಿಯಾಗಿದೆ. ಜೋದ್​ಪುರದ ಹೊರ ಭಾಗದಲ್ಲಿ ‘ಹಮ್ ಸಾತ್​ ಸಾತ್ ಹೈ’ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಈ ಚಿತ್ರಕ್ಕೆ ಸಲ್ಮಾನ್ ಖಾನ್ ಹೀರೋ. ಸಲ್ಮಾನ್ ಖಾನ್ ಅವರು ಕೃಷ್ಣಮೃಗ ಬೇಟೆ ಆಡಿದ್ದರು. ಈ ಪ್ರಕರಣದಲ್ಲಿ ಸೋನಾಲಿ ಹೆಸರು ಸೇರಿತ್ತು. ನಂತರ ಅವರ ಹೆಸರನ್ನು ಕೈ ಬಿಡಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ