‘ನಾನು ನಿಮ್ಮ ತೊಡೆಯ ಅಭಿಮಾನಿ’ ಎಂದವನಿಗೆ ನಟಿ ಕೊಟ್ಟ ಉತ್ತರ ಏನು?
ದಕ್ಷಾ ಅವರು ಇನ್ಸ್ಟಾಗ್ರಾಮ್ನಲ್ಲಿ ಅಭಿಮಾನಿಗಳಿಗೆ ಪ್ರಶ್ನೆ ಕೇಳುವ ಅವಕಾಶವನ್ನು ನೀಡಿದ್ದರು. ಹಲವು ರೀತಿಯ ಪ್ರಶ್ನೆಗಳು ಬಂದವು. ಈ ಪೈಕಿ ಅವರಿಗೆ ತೊಡೆಯ ಕುರಿತ ಪ್ರಶ್ನೆ ಕೂಡ ಇತ್ತು. ಇದನ್ನು ಬೇಕಿದ್ದರೆ ಅವರು ನಿರ್ಲಕ್ಷಿಸಬಹುದಿತ್ತು. ಆದರೆ, ಅವರು ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಸೋಶಿಯಲ್ ಮೀಡಿಯಾ ಬಳಕೆ ಹೆಚ್ಚುತ್ತಿದೆ. ನಟಿಯರು ಬೋಲ್ಡ್ ಫೋಟೋ ಹಾಕಿದರೆ ಸಾಕು ಅದಕ್ಕೆ ನಾನಾ ರೀತಿಯ ಕಮೆಂಟ್ಗಳು ಬರುತ್ತವೆ. ಕೆಲವರು ನಟಿಯರ ದೇಹದ ಅಂಗಗಳ ಬಗ್ಗೆ, ಅವರು ಹಾಕಿಕೊಂಡ ಬಟ್ಟೆಯ ಬಗ್ಗೆ ಕೆಟ್ಟ ಕಮೆಂಟ್ಗಳನ್ನು ಮಾಡುತ್ತಾರೆ. ಬಹುತೇಕರು ಇದನ್ನು ನಿರ್ಲಕ್ಷಿಸುತ್ತಾರೆ. ಈಗ ತೆಲುಗು ನಟಿ ದಕ್ಷಾ ನಗರ್ಕರ್ (Daksha Nagarkar) ಅವರ ತೊಡೆಯ ಬಗ್ಗೆ ಅಭಿಮಾನಿಯೋರ್ವ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ನಟಿ ಸಿಟ್ಟು ಮಾಡಿಕೊಂಡಿಲ್ಲ, ಬದಲಿಗೆ ಫನ್ನಿ ಆಗಿ ಉತ್ತರಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ದಕ್ಷಾ ಅವರು ಅಭಿಮಾನಿಗಳಿಗೆ ಪ್ರಶ್ನೆ ಕೇಳುವ ಅವಕಾಶವನ್ನು ನೀಡಿದ್ದರು. ಅವರಿಗೆ ಹಲವು ಪ್ರಶ್ನೆಗಳು ಬಂದಿದ್ದವು. ಈ ಪೈಕಿ ಅವರಿಗೆ ತೊಡೆಯ ಕುರಿತ ಪ್ರಶ್ನೆ ಕೂಡ ಇತ್ತು. ಇದನ್ನು ಬೇಕಿದ್ದರೆ ಅವರು ನಿರ್ಲಕ್ಷಿಸಬಹುದಿತ್ತು. ಆದರೆ, ದಕ್ಷಾ ಹಾಗೆ ಮಾಡಿಲ್ಲ. ಬದಲಿಗೆ ಅವರು ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಇದು ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ: ‘ಬಿಗ್ ಬಾಸ್’ಗೆ ಎಂಟ್ರಿ ಕೊಟ್ಟ ಈ ಸ್ಪರ್ಧಿಗಳ ಇನ್ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆಯಲ್ಲಿ ಭಾರೀ ಹೆಚ್ಚಳ
‘ನಾನು ನಿಮ್ಮ ತೊಡೆಯ ದೊಡ್ಡ ಅಭಿಮಾನಿ. ಅವುಗಳ ರಹಸ್ಯ ಏನು’ ಎಂದು ಅಭಿಮಾನಿಯೋರ್ವ ಪ್ರಶ್ನೆ ಮಾಡಿದ್ದಾನೆ. ಈ ಪ್ರಶ್ನೆಯನ್ನು ಅವರು ಪೋಸ್ಟ್ ಮಾಡಿದ್ದಾರೆ. ಜೊತೆಗೆ ‘ನಾನು ಮಸಾಲ ವಡೆ ತಿನ್ನುತ್ತೇನೆ’ ಎಂದು ಉತ್ತರ ನೀಡಿದ್ದಾರೆ. ಸದ್ಯ ಈ ಫನ್ನಿ ಉತ್ತರ ವೈರಲ್ ಆಗುತ್ತಿದೆ. ನಟಿಯ ಉತ್ತರವನ್ನು ಅನೇಕರು ಶ್ಲಾಘಿಸಿದ್ದಾರೆ.
ನಟಿ ಮಾಡಿದ ಪೋಸ್ಟ್
Big fan of your Thodalu anta 🤣🤣🤣
Heroine reply Adhurs 🔥🔥 pic.twitter.com/H8GbTCrkwt
— M A N I (@Manirebelism) February 5, 2024
ದಕ್ಷಾ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2014ರಲ್ಲಿ. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು 10 ವರ್ಷಗಳ ಮೇಲಾಗಿದೆ. ಅವರ ಮೊದಲ ಸಿನಿಮಾ ‘ಎಕೆ ರಾವ್ ಪಿಕೆ ರಾವ್’. ಈ ಚಿತ್ರ ಯಶಸ್ಸು ಕಾಣಲಿಲ್ಲ. ನಂತರ ‘ಹೋರಾ ಹೋರಿ’, ‘ಹುಶಾರು’, ‘ಜಾಂಬಿ ರೆಡ್ಡಿ’, ‘ಬಂಗಾರ್ ರಾಜು’ ಚಿತ್ರಗಳಲ್ಲಿ ನಟಿಸಿದರು. 2023ರಲ್ಲಿ ರಿಲೀಸ್ ಆದ ರವಿತೇಜ ನಟನೆಯ ‘ರಾವಣಾಸುರ’ ಚಿತ್ರದಲ್ಲಿ ಜಾನು ಹೆಸರಿನ ಪಾತ್ರ ಮಾಡಿ ಗಮನ ಸೆಳೆದರು. ಸಿನಿಮಾ ಆಯ್ಕೆಯಲ್ಲಿ ದಕ್ಷಾ ಸಖತ್ ಚ್ಯೂಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಾರೆ. ಅವರು ಇನ್ಸ್ಟಾಗ್ರಾಮ್ನಲ್ಲಿ ಆ್ಯಕ್ಟೀವ್ ಆಗಿದ್ದು ಹಲವು ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ