AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sonu Nigam: ಸೋನು ನಿಗಮ್ ಹೆಸರಲ್ಲಿ ಮಹಾ ಮೋಸ; ಎಚ್ಚರಿಕೆ ನೀಡಿದ ಗಾಯಕ

ಖ್ಯಾತ ಗಾಯಕ ಸೋನು ನಿಗಮ್ ಅವರ ಹೆಸರಿನಲ್ಲಿ ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳು ಸೃಷ್ಟಿಯಾಗಿವೆ ಎಂದು ವರದಿಯಾಗಿದೆ. ಅವರ ಹೆಸರಿನಲ್ಲಿ ವಿವಾದಾತ್ಮಕ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಸೋನು ನಿಗಮ್ ಅವರು ಟ್ವಿಟರ್‌ನಲ್ಲಿ ಸಕ್ರಿಯರಾಗಿಲ್ಲ ಎಂದು ಹೇಳಿದ್ದಾರೆ. ಅವರು ತಮ್ಮ ಅಭಿಮಾನಿಗಳಿಗೆ ಈ ನಕಲಿ ಖಾತೆಗಳನ್ನು ವರದಿ ಮಾಡಲು ಮತ್ತು ಬ್ಲಾಕ್ ಮಾಡಲು ಮನವಿ ಮಾಡಿದ್ದಾರೆ.

Sonu Nigam: ಸೋನು ನಿಗಮ್ ಹೆಸರಲ್ಲಿ ಮಹಾ ಮೋಸ; ಎಚ್ಚರಿಕೆ ನೀಡಿದ ಗಾಯಕ
ಸೋನು ನಿಗಮ್
ರಾಜೇಶ್ ದುಗ್ಗುಮನೆ
|

Updated on: Apr 22, 2025 | 9:55 AM

Share

ಖ್ಯಾತ ಗಾಯಕ ಸೋನು ನಿಗಮ್ (Sonu Nigam) ಹೆಸರಲ್ಲಿ ಮೋಸ ನಡೆಯುತ್ತಿದೆ. ಆನ್​ಲೈನ್​​ನಲ್ಲಿ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸೋನು ನಿಗಮ್ ಅವರು ಹಲವು ವರ್ಷಗಳಿಂದ ಟ್ವಿಟರ್​ನಲ್ಲಿ ಆ್ಯಕ್ಟೀವ್ ಆಗಿಲ್ಲ. ಆದಾಗ್ಯೂ ಅವರ ಹೆಸರಲ್ಲಿ ಖಾತೆ ತೆರೆಯಲಾಗಿದೆ. ಸೋನು ನಿಗಮ್ ಅವರ ನಿಜವಾದ ಖಾತೆ ಎಂದು ಬಿಂಬಿಸಿಕೊಳ್ಳುತ್ತಾ, ವಿವಾದಾತ್ಮಕ ವಿಚಾರಗಳನ್ನು ಪೋಸ್ಟ್ ಮಾಡಲಾಗುತ್ತಿದೆ. ಇದು ನಟನ ಗಮನಕ್ಕೆ ಬಂದಿದೆ. ಈ ಬಗ್ಗೆ ಇನ್​ಸ್ಟಾಗ್ರಾಮ್​​ನಲ್ಲಿ ಅವರು ಎಚ್ಚರಿಕೆ ನೀಡಿದ್ದಾರೆ.

‘ಆನ್​ಲೈನ್​​ನಲ್ಲಿ ನನ್ನ ಐಡೆಂಟಿಟಿಯನ್ನು ಯಾರೋ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನನ್ನ ತಂಡದವರು ಯಾವುದೇ ಕಾರಣಕ್ಕೂ ಯಾರನ್ನೂ ಸಂಪರ್ಕಿಸಿಲ್ಲ. ನನ್ನ ಹೆಸರಲ್ಲಿ ಯಾವುದಾದರೂ ಫೇಕ್ ಖಾತೆ ಕಂಡರೆ ಅದನ್ನು ರಿಪೋರ್ಟ್ ಮಾಡಿ ಮತ್ತು ಬ್ಲಾಕ್ ಮಾಡಿ’ ಎಂದು ಸೋನು ನಿಗಮ್ ಅವರು ಕೋರಿದ್ದಾರೆ.

ಇದನ್ನೂ ಓದಿ
Image
ಮಹೇಶ್ ಬಾಬುಗೆ ಸಂಕಷ್ಟ; ಖ್ಯಾತ ನಟನಿಗೆ ಬಂತು ಇಡಿ ನೋಟಿಸ್
Image
ಶ್ರೀದೇವಿನ ಕನ್ನಡಕ್ಕೆ ತರಲು ಹೋಗಿದ್ದ ರವಿಚಂದ್ರನ್; ಆಮೇಲೆ ಆಗಿದ್ದೇನು?
Image
ಚಾಕು ಇರಿತ ಪ್ರಕರಣ ನಡೆದ 3 ತಿಂಗಳಿಗೆ ಹೊಸ ಮನೆ ಖರೀದಿಸಿದ ಸೈಫ್ ಅಲಿ ಖಾನ್
Image
‘ನಾನು ಮಾತ್ರ ಅಲ್ಲಾರೀ’; ಸ್ಟಾರ್ ಕಲಾವಿದರ ಡ್ರಗ್ಸ್ ಪುರಾಣ ಬಿಚ್ಚಿಟ್ಟ ಶೈನ್

‘ನಾನು ಟ್ವಿಟರ್​ನ ಕಳೆದ 8 ವರ್ಷಗಳಿಂದ ಬಳಸುತ್ತಿಲ್ಲ. ಆದಾಗ್ಯೂ ನನ್ನ ಹೆಸರಲ್ಲಿ ಕೆಲವರು ಖಾತೆ ಮಾಡಿಕೊಂಡಿದ್ದಾರೆ. ವಿವಾದಾತ್ಮಕ ವಿಚಾರಗಳನ್ನು ಅದರಲ್ಲಿ ಪೋಸ್ಟ್ ಮಾಡುವ ಕೆಲಸ ಮಾಡುತ್ತಾ ಇದ್ದಾರೆ’ ಎಂದು ಅವರು ಆತಂಕ ಹೊರಹಾಕಿದ್ದಾರೆ.

‘ಈ ವಿಚಾರವನ್ನು ನನ್ನ ಗಮನಕ್ಕೆ ತಂದ ಎಲ್ಲರಿಗೂ ಧನ್ಯವಾದ. ನನ್ನನ್ನು ಅರ್ಥೈಸಿಕೊಂಡ ನಿಮಗೆ ಧನ್ಯವಾದ’ ಎಂದು ಹೇಳಿದ್ದಾರೆ ಅವರು. ಇದನ್ನು ಸೋನು ನಿಗಮ್ ಅವರ ಅಭಿಮಾನಿಗಳು ಮತ್ತಷ್ಟು ಶೇರ್ ಮಾಡಿಕೊಳ್ಳುತ್ತಾ ಇದ್ದಾರೆ.

ಮಾರ್ಚ್ ತಿಂಗಳಲ್ಲಿ ಶ್ರೇಯಾ ಘೋಷಾಲ್ ಅವರ ಖಾತೆಯೂ ಹ್ಯಾಕ್ ಆಗಿತ್ತು. ಆದರೆ, ಹೆಚ್ಚು ಹಾನಿ ಸಂಭವಿಸುವ ಮೊದಲೇ ಈ ಖಾತೆಯನ್ನು ಮರಳಿ ಪಡೆಯಲಾಯಿತು. ಸೆಲಿಬ್ರಿಟಿಗಳ ಹೆಸರಲ್ಲಿ ನಕಲಿ ಖಾತೆ ಸೃಷ್ಟಿ ಮಾಡುವುದು ಹಾಗೂ ಖಾತೆ ಹ್ಯಾಕ್ ಮಾಡೋದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ಇದನ್ನೂ ಓದಿ: ‘ನೀವು ಗೆದ್ದ ಮನಸ್ಸುಗಳಿಗಿಂತ ದೊಡ್ಡದು ಯಾವುದೂ ಇಲ್ಲ’; ಬೇಸರದಲ್ಲಿರೋ ಸೋನು ನಿಗಮ್ ಬೆಂಬಲಕ್ಕೆ ನಿಂತ ಸಂಗೀತಾ ಶೃಂಗೇರಿ

ಅನೇಕ ಸೆಲೆಬ್ರಿಟಿಗಳು ಸಿನಿಮಾ ಪ್ರಚಾರಕ್ಕಾಗಿ ಸೋಶಿಯಲ್ ಮೀಡಿಯಾ ಖಾತೆ ಬಳಕೆ ಮಾಡುತ್ತಾರೆ. ಆದರೆ, ಇನ್ನೂ ಕೆಲವರು ಇದನ್ನು ಬಳಕೆ ಮಾಡಲು ಹೆಚ್ಚು ಇಷ್ಟಪಡೋದಿಲ್ಲ. ಟಾಕ್ಸಿಕ್ ಎಂಬ ಕಾರಣಕ್ಕೆ ಇದರಿಂದ ದೂರವೇ ಇರಲು ಹೆಚ್ಚು ಇಷ್ಟಪಡುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ