ನಿರ್ದೇಶಕ ಎಸ್ಎಸ್ ರಾಜಮೌಳಿ ತುಸು ಗಂಭೀರ ಸ್ವಭಾವದವರು, ಸಿನಿಮಾ ಕಾರ್ಯಕ್ರಮಗಳಲ್ಲಿಯೂ ಸಹ ಸಣ್ಣ ಪುಟ್ಟ ತಮಾಷೆ ಮಾಡುತ್ತಾರಾದರೂ ಡ್ಯಾನ್ಸ್, ಹಾಡು ಇನ್ನಿತರೆಗಳಿಂದ ತುಸು ದೂರ. ಅಸಲಿಗೆ ಸಿನಿಮಾ ಶೂಟಿಂಗ್ ಸಮಯದಲ್ಲಿ ಪ್ರತಿ ಸೀನ್ ಅನ್ನು ಮೊದಲೇ ನಟಿಸಿ ನಟರಿಗೆ ತೋರಿಸುವ ರಾಜಮೌಳಿ, ಡ್ಯಾನ್ಸ್ ವಿಷಯದಲ್ಲಿ ದೂರ ಇದ್ದು ಬಿಡುತ್ತಾರಂತೆ. ಹಾಗೆಂದು ರಾಜಮೌಳಿಗೆ ಡ್ಯಾನ್ಸ್ ಬಾರದು ಎಂದೇನೂ ಅಲ್ಲ. ರಾಜಮೌಳಿ ಬಹಳ ಒಳ್ಳೆಯ ಡ್ಯಾನ್ಸರ್ ಇದೀಗ ಅದಕ್ಕೆ ಸಾಕ್ಷಿ ಸಹ ದೊರೆತಿದೆ. ಪತ್ನಿಯೊಟ್ಟಿಗೆ ವೇದಿಕೆ ಮೇಲೆ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ.
ಎಸ್ಎಸ್ ರಾಜಮೌಳಿ ಅವರು ನಟನೊಬ್ಬನ ಮದುವೆ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಸಖತ್ ಸ್ಟೆಪ್ ಹಾಕಿದ್ದಾರೆ. ಅವರ ಪತ್ನಿ ರಮಾ ಅವರೂ ಸಹ ರಾಜಮೌಳಿ ಅವರೊಟ್ಟಿಗೆ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಇದನ್ನೂ ಓದಿ:ರಾಜಮೌಳಿ-ಮಹೇಶ್ ಬಾಬು ಸಿನಿಮಾಕ್ಕೆ ಎಂಟ್ರಿ ಕೊಟ್ಟ ಅಚ್ಚರಿಯ ಸ್ಟಾರ್ ನಟಿ
ಎಸ್ಎಸ್ ರಾಜಮೌಳಿ ಅವರ ಹತ್ತಿರದ ಸಂಬಂಧಿ, ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಅವರ ಪುತ್ರ ಶ್ರೀ ಸಿಂಹ ಕೋಡೂರಿ ಅವರ ವಿವಾಹ ಫಿಲಂ ನಗರ್ನಲ್ಲಿ ಬಲು ಅದ್ಧೂರಿಯಾಗಿ ನಡೆಯಿತು. ಶ್ರೀ ಸಿಂಹ ಕೋಡೂರಿ ಅವರು ಹಿರಿಯ ನಟ ಮುರಿಳಿ ಮೋಹನ್ ಅವರ ಮೊಮ್ಮಗಳನ್ನು ವಿವಾಹವಾದರು. ಈ ವಿವಾಹದ ಸಂಗೀತ್ ಕಾರ್ಯಕ್ರಮದಲ್ಲಿ ಎಸ್ಎಸ್ ರಾಜಮೌಳಿ ಹಾಗೂ ಅವರ ಪತ್ನಿ ರಮಾ ವೇದಿಕೆ ಮೇಲೆ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ.
#TFNReels: Maverick Director @ssrajamouli and his wife #RamaRajamouli garu lit up stage with their dance performance!!🔥#SSRajamouli #SSMB29 #TeluguFilmNagar pic.twitter.com/O2luAX86I8
— Subhodayam Subbarao (@rajasekharaa) December 14, 2024
‘ಲಂಚಿಕೊಸ್ತಾವ’ ಹಾಡಿಗೆ ಎಸ್ಎಸ್ ರಾಜಮೌಳಿ ಹಾಗೂ ರಮಾ ಅವರು ಸ್ಟೆಪ್ ಹಾಕಿದ್ದಾರೆ. ರಾಜಮೌಳಿ ಅವರಂತೂ ವೃತ್ತಿಪರ ಡ್ಯಾನ್ಸರ್ಗಳ ರೀತಿಯಲ್ಲಿಯೇ ಹೆಜ್ಜೆ ಹಾಕಿದ್ದಾರೆ. ರಮಾ ಅವರು ಸಹ ತಾವೇನೂ ಕಡಿಮೆ ಇಲ್ಲ ಎಂಬಂತೆ ಸ್ಟೆಪ್ಸ್ ಹಾಕಿದ್ದಾರೆ. ರಮಾ ಅವರು ಬಹಳ ನಾಚಿಕೆ ಸ್ವಭಾವದವರು, ಕ್ಯಾಮೆರಾ ಮುಂದೆ ಬರುವುದು ಬಹಳ ಅಪರೂಪ, ಹಾಗಿದ್ದರೂ ಸಹ ರಮಾ ಅವರು ಚಳಿ ಬಿಟ್ಟು, ಪತಿಯೊಟ್ಟಿಗೆ ಡ್ಯಾನ್ಸ್ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ