ಸರ್ಪ್ರೈಸ್ ಕೊಡಲು ಬಂದವರಿಗೆ ಸರ್ಪ್ರೈಸ್ ಕೊಟ್ಟ ರಾಜಮೌಳಿ
SS Rajamouli movie: ಭಾರತದ ಟಾಪ್ ನಿರ್ದೇಶಕ ಆಗಿದ್ದರೂ ಸಹ ರಾಜಮೌಳಿ ಅವರು ಯಾವುದೇ ಅಹಂ ಇಲ್ಲದೆ, ಬಲು ಸರಳ ಮತ್ತು ವಿನಯವಂತಿಕೆಯಿಂದ ಇರುತ್ತಾರೆ. ಸಹಾಯ ಕೇಳಿ ಬರುವ ಕಿರಿಯ ಸಿನಿಮಾ ಕರ್ಮಿಗಳಿಗೆ ಸಹಾಯ ಮಾಡುತ್ತಾರೆ. ಇದೀಗ ರಾಜಮೌಳಿ ಅವರಿಗೆ ಸರ್ಪ್ರೈಸ್ ನೀಡಲು ಬಂದ ಕಿರಿಯ ನಿರ್ದೇಶಕ, ಸಂಗೀತ ನಿರ್ದೇಶಕರಿಗೆ ಖುದ್ದು ರಾಜಮೌಳಿ ಸರ್ಪ್ರೈಸ್ ನೀಡಿದ್ದಾರೆ.

ಎಸ್ಎಸ್ ರಾಜಮೌಳಿ (Rajamouli), ಭಾರತದ ನಂಬರ್ 1 ನಿರ್ದೇಶಕ. ‘ಆರ್ಆರ್ಆರ್’ ಮೂಲಕ ವಿಶ್ವಮಟ್ಟದಲ್ಲಿ ಗುರುತು ಪಡೆದುಕೊಂಡಿರುವುದು ಮಾತ್ರವೇ ಅಲ್ಲದೆ, ಹಾಲಿವುಡ್ ನಿರ್ದೇಶಕರು, ನಿರ್ಮಾಣ ಸಂಸ್ಥೆಗಳು ಸಹ ತಮ್ಮೊಟ್ಟಿಗೆ ಕೆಲಸ ಮಾಡುವಂತೆ ರಾಜಮೌಳಿ ಅವರನ್ನು ಕೇಳುತ್ತಿವೆ. ಭಾರತದ ಟಾಪ್ ನಿರ್ದೇಶಕ ಆಗಿದ್ದರೂ ಸಹ ರಾಜಮೌಳಿ ಅವರು ಯಾವುದೇ ಅಹಂ ಇಲ್ಲದೆ, ಬಲು ಸರಳ ಮತ್ತು ವಿನಯವಂತಿಕೆಯಿಂದ ಇರುತ್ತಾರೆ. ಸಹಾಯ ಕೇಳಿ ಬರುವ ಕಿರಿಯ ಸಿನಿಮಾ ಕರ್ಮಿಗಳಿಗೆ ಸಹಾಯ ಮಾಡುತ್ತಾರೆ. ಇದೀಗ ರಾಜಮೌಳಿ ಅವರಿಗೆ ಸರ್ಪ್ರೈಸ್ ನೀಡಲು ಬಂದ ಕಿರಿಯ ನಿರ್ದೇಶಕ, ಸಂಗೀತ ನಿರ್ದೇಶಕರಿಗೆ ಖುದ್ದು ರಾಜಮೌಳಿ ಸರ್ಪ್ರೈಸ್ ನೀಡಿದ್ದಾರೆ.
‘ಕಲ್ಕಿ 2898 ಎಡಿ’ ಸಿನಿಮಾದ ನಿರ್ದೇಶಕ ನಾಗ್ ಅಶ್ವಿನ್, ‘ಸಿಂಗ್ ಗೀತಂ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಆ ಸಿನಿಮಾ ನಾಳೆ ಅಂದರೆ ಜೂನ್ 12 ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದ ಮೊದಲ ಟಿಕೆಟ್ ಅನ್ನು ರಾಜಮೌಳಿ ಅವರಿಗೆ ಮಾರಾಟ ಮಾಡುವ ಮೂಲಕ ಶುಭಾರಂಭ ಮಾಡಲೆಂದು ನಾಗ್ ಅಶ್ವಿನ್ ಅವರು, ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರೊಟ್ಟಿಗೆ ಸೇರಿ ರಾಜಮೌಳಿ ಅವರಿಗೆ ವಿಡಿಯೋ ಕಾಲ್ ಮಾಡಿದ್ದಾರೆ.
ಆದರೆ ನಾಗ್ ಅಶ್ವಿನ್, ರಾಜಮೌಳಿ ಅವರಿಗೆ ವಿಡಿಯೋ ಕಾಲ್ ಮಾಡುವ ಮುಂಚೆಯೇ ರಾಜಮೌಳಿ, ‘ಸಿಂಗ್ ಗೀತಂ’ ಸಿನಿಮಾದ ಟಿಕೆಟ್ ಖರೀದಿಸಿದ್ದು, ವಿಡಿಯೋ ಕಾಲ್ನಲ್ಲಿ ತಾವು ಬುಕ್ ಮಾಡಿಕೊಂಡಿರುವ ಟಿಕೆಟ್ ಅನ್ನು ತೋರಿಸಿದ್ದಾರೆ. ಇದರಿಂದ ನಾಗ್ ಅಶ್ವಿನ್ ಮತ್ತು ದೇವಿ ಶ್ರೀಪ್ರಸಾದ್ ಇಬ್ಬರೂ ಶಾಕ್ ಆಗಿದ್ದಾರೆ. ಇಬ್ಬರಿಗೂ ರಾಜಮೌಳಿ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ:94ನೇ ವಯಸ್ಸಿಗೆ ನಿರ್ದೇಶನ; ‘ಸಿಂಗ್ ಗೀತಂ’ ಸಿನಿಮಾ ಈ ವಾರ ರಿಲೀಸ್
ಬಹಳ ಬ್ಯುಸಿ ನಿರ್ದೇಶಕ ರಾಜಮೌಳಿ ಅವರು ಬಿಡುವು ಮಾಡಿಕೊಂಡು ‘ಸಿಂಗ್-ಗೀತಂ’ ಸಿನಿಮಾ ನೋಡಲು ಹೋಗುತ್ತಿರುವುದಕ್ಕೆ ಮುಖ್ಯ ಕಾರಣ, ಆ ಸಿನಿಮಾದ ನಿರ್ದೇಶಕ. ಭಾರತದ ಅತ್ಯುತ್ತಮ ನಿರ್ದೇಶಕರುಗಳಲ್ಲಿ ಒಬ್ಬರಾಗಿರುವ ಸಿಂಗೀತಂ ಶ್ರೀನಿವಾಸ್ ಅವರು ತಮ್ಮ 94ನೇ ವಯಸ್ಸಿನಲ್ಲಿ ‘ಸಿಂಗ್ ಗೀತಂ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ರಾಜಮೌಳಿ ಅವರಿಗೆ ಸಿಂಗೀತಂ ಅವರ ನಿರ್ದೇಶನ ಬಲು ಅಚ್ಚು-ಮೆಚ್ಚು ಹಾಗಾಗಿ ರಾಜಮೌಳಿ ಅವರು ಸಿನಿಮಾ ನೋಡಲು ಮುಂಗಡವಾಗಿ ಟಿಕೆಟ್ ಬುಕ್ ಮಾಡಿಕೊಂಡಿದ್ದಾರೆ.
ಸಿಂಗೀತಂ ಶ್ರೀನಿವಾಸ್ ಅವರು ಅತ್ಯುತ್ತಮ ನಿರ್ದೇಶಕ. ಕನ್ನಡದಲ್ಲಿ ಕ್ಲಾಸ್ ಸಿನಿಮಾಗಳಾದ, ‘ಚಲಿಸುವ ಮೋಡಗಳು’, ‘ಹಾಲು ಜೇನು’, ‘ಭಾಗ್ಯದ ಲಕ್ಷ್ಮಿ ಬಾರಮ್ಮ’, ‘ಆನಂದ್’, ‘ಟುವ್ವಿ ಟುವ್ವಿ ಟುವ್ವಿ’, ‘ಎರಡು ನಕ್ಷತ್ರಗಳು’, ‘ಶ್ರಾವಣ ಬಂತು’, ‘ಜ್ವಾಲಾಮುಖಿ’ ಇನ್ನೂ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಕಮಲ್ ನಟನೆಯ ಕಲ್ಟ್ ಸಿನಿಮಾ ‘ಪುಷ್ಪಕ ವಿಮಾನ’, ‘ರಾಜ ಪಾರ್ವೈ’, ‘ಮುಂಬೈ ಎಕ್ಸ್ಪ್ರೆಸ್’, ತೆಲುಗಿನ ‘ಆದಿತ್ಯ 369’ ಇನ್ನೂ ಹಲವು ಕಲ್ಟ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇದೀಗ ತಮ್ಮ 94ನೇ ವಯಸ್ಸಿನಲ್ಲಿ ‘ಸಿಂಗ್ ಗೀತಂ’ ಸಿನಿಮಾ ನಿರ್ದೇಶಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




