ರಾಜಮೌಳಿ ಸಿನಿಮಾ ಲೀಕ್ ವಿಡಿಯೋ ನೋಡುವವರಿಗೆ ಸ್ವೀಟ್ ಎಚ್ಚರಿಕೆ ಕೊಟ್ಟ ಪೃಥ್ವಿರಾಜ್

|

Updated on: Mar 22, 2025 | 7:33 AM

ರಾಜಮೌಳಿ ಮತ್ತು ಮಹೇಶ್ ಬಾಬು ಅವರ 'SSMB29' ಸಿನಿಮಾದ ಸೆಟ್ ವಿಡಿಯೋ ಲೀಕ್ ಆಗಿರುವುದಕ್ಕೆ ಪೃಥ್ವಿರಾಜ್ ಸುಕುಮಾರನ್ ಅವರು ದುಃಖ ವ್ಯಕ್ತಪಡಿಸಿದ್ದಾರೆ. ಲೀಕ್ ಆದ ವಿಡಿಯೋಗಳನ್ನು ನೋಡದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದು, ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸುವ ಅನುಭವವನ್ನು ಹಾಳು ಮಾಡಬೇಡಿ ಎಂದು ಕೋರಿದ್ದಾರೆ.

ರಾಜಮೌಳಿ ಸಿನಿಮಾ ಲೀಕ್ ವಿಡಿಯೋ ನೋಡುವವರಿಗೆ ಸ್ವೀಟ್ ಎಚ್ಚರಿಕೆ ಕೊಟ್ಟ ಪೃಥ್ವಿರಾಜ್
ರಾಜಮೌಳಿ ಸಿನಿಮಾ ಲೀಕ್ ವಿಡಿಯೋ ನೋಡುವವರಿಗೆ ಸ್ವೀಟ್ ಎಚ್ಚರಿಕೆ ಕೊಟ್ಟ ಪೃಥ್ವಿರಾಜ್
Follow us on

ನಿರ್ದೇಶಕ ಎಸ್​ಎಸ್​ ರಾಜಮೌಳಿ (SS Rajamouli) ಅವರು ತಮ್ಮ ಸಿನಿಮಾ ಬಗ್ಗೆ ಯಾವುದೇ ವಿಚಾರ ಇದ್ದರೂ ಅದನ್ನು ಗುಟ್ಟಾಗಿ ಇಡಲು ಬಯಸುತ್ತಾರೆ. ಎಲ್ಲವನ್ನೂ ಥಿಯೇಟರ್​ನಲ್ಲೇ ಜನರು ನೋಡಿ ಒಳ್ಳೆಯ ಅನುಭವ ಪಡೆಯಬೇಕು ಎಂಬುದು ಅವರ ಅಭಿಪ್ರಾಯ. ಆದರೆ, ಕೆಲವು ಕಿಡಿಗೇಡಿಗಳು ರಾಜಮೌಳಿ ಉದ್ದೇಶವನ್ನು ಹಾಳು ಮಾಡುತ್ತಿದ್ದಾರೆ. ಸಿನಿಮಾ ಸೆಟ್​ಗಳ ವಿಡಿಯೋನ ಲೀಕ್ ಮಾಡುತ್ತಿದ್ದಾರೆ. ಈ ಬಗ್ಗೆ ಪೃಥ್ವಿರಾಜ್ ಸುಕುಮಾರನ್ ಅವರು ಸಂದೇಶ ಒಂದನ್ನು ನೀಡಿದ್ದಾರೆ. ಇದನ್ನು ಅನೇಕರು ಸ್ವೀಟ್ ವಾರ್ನಿಂಗ್ ಎಂದು ಕರೆದಿದ್ದಾರೆ.

ರಾಜಮೌಳಿ ಹಾಗೂ ಮಹೇಶ್ ಬಾಬು ಸಿನಿಮಾ ಮಾಡುತ್ತಿದ್ದಾರೆ. ಇದಕ್ಕೆ ತಾತ್ಕಾಲಿಕವಾಗಿ ‘ಎಸ್​ಎಸ್​ಎಂಬಿ 29’ ಎಂಬ ಶೀರ್ಷಿಕೆ ಇಡಲಾಗಿದೆ. ಈ ಚಿತ್ರದ ಸೆಟ್​ನ ವಿಡಿಯೋ ಲೀಕ್ ಆಗಿದೆ. ಇದರಲ್ಲಿ ಮಹೇಶ್ ಬಾಬು ಜೊತೆ ಪೃಥ್ವಿರಾಜ್ ಇರೋದು ಕಂಡು ಬಂದಿದೆ. ಈ ಮೂಲಕ ಪೃಥ್ವಿರಾಜ್ ಸಿನಿಮಾದಲ್ಲಿ ನಟಿಸೋದು ಖಚಿತವಾಗಿದೆ. ಈ ವಿಡಿಯೋ ಬಗ್ಗೆ ಪೃಥ್ವಿರಾಜ್ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಈ ರೀತಿ ಲೀಕ್ ಆದ ವೀಡಿಯೊಗಳನ್ನು ನೋಡಲು ಜನರು ಏಕೆ ಇಷ್ಟು ಆತುರಪಡುತ್ತಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಈ ವಿಡಿಯೋಗಳಲ್ಲಿ ಯಾವುದೇ ಅದ್ಭುತವಿಲ್ಲ. ಒಂದು ದೊಡ್ಡ ಸಿನಿಮಾದ ಲೀಕ್ ವೀಡಿಯೋನ ನೀವು ನೋಡುತ್ತಿದ್ದೀರಿ ಎಂದರೆ ನಿಮ್ಮ ಅನುಭವವನ್ನು ನೀವೆ ಕೊಲ್ಲುತ್ತಿದ್ದೀರಿ ಎಂದರ್ಥ. ಸೋರಿಕೆಯಾದ ವಿಡಿಯೋನ ನೋಡುವುದರಿಂದ ನೀವು ಏನನ್ನೂ ಗಳಿಸುವುದಿಲ್ಲ. ಬದಲಾಗಿ ಅದನ್ನು ದೊಡ್ಡ ಪರದೆ ಮೇಲೆ ನೋಡಬೇಕು ಎಂಬ ನಿಮ್ಮಲ್ಲಿರುವ ನಿರೀಕ್ಷೆ ಸತ್ತುಹೋಗುತ್ತದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ
ಬಂದ್ ವೇಳೆ ಥಿಯೇಟರ್​ನಲ್ಲಿ ಸಿನಿಮಾ ನೋಡೋ ಪ್ಲ್ಯಾನ್ ಬೇಡ; ಪ್ರದರ್ಶನ ಸಮಯ?
ಚಿರಂಜೀವಿ ಭೇಟಿ ಮಾಡಿಸೋ ನೆಪದಲ್ಲಿ ಹಣ ಪೀಕಿದ ಖದೀಮರು; ಚಿರಂಜೀವಿ ಎಚ್ಚರಿಕೆ
4 ವರ್ಷಗಳ ದಾಂಪತ್ಯ ಅಂತ್ಯ; ಧನಶ್ರೀಗೆ ಒಂದು ದಿನಕ್ಕೆ ಸಿಕ್ಕ ಹಣ ಇಷ್ಟೊಂದಾ?
ಸಿಹಿಯ ಆತ್ಮಕ್ಕೆ ಸಿಕ್ಕಿತು ಹನುಮಂತನ ರಕ್ಷಣೆ; ಪವರ್​ನಿಂದ ವಿಲನ್​ಗಳಿಗೆ ಭಯ

ಪೃಥ್ವಿರಾಜ್ ಅವರ ಹೇಳಿಕೆಯನ್ನು ಅನೇಕರು ಬೆಂಬಲಿಸಿದ್ದಾರೆ. ಈ ರೀತಿ ಲೀಕ್ ಆದ ವಿಡಿಯೋಗಳನ್ನು ನೋಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ಅದು ಯಾವುದೇ ರೀತಿಯ ಅನುಭವಗಳನ್ನು ನೀಡುವುದಿಲ್ಲ. ಅಧಿಕೃತವಾಗಿ ಎಲ್ಲವೂ ಬಿಡುಗಡೆ ಆಗುವವರೆಗೆ ಕಾಯಬೇಕು ಎಂಬುದು ಅನೇಕರ ಕೋರಿಕೆ.

ಇದನ್ನೂ ಓದಿ: ಒಡಿಶಾಗೆ ಹೋಗಿ ತಪ್ಪು ಮಾಡಿದ್ರಾ ರಾಜಮೌಳಿ? ಶೂಟಿಂಗ್ ಸೆಟ್ ಫೋಟೋ ಲೀಕ್

ಇತ್ತೀಚೆಗೆ ಒಡಿಶಾದಲ್ಲಿ ಸಿನಿಮಾದ ಶೂಟ್ ನಡೆದಿದೆ. ಪ್ರಿಯಾಂಕಾ ಚೋಪ್ರಾ ಕೂಡ ಇದರ ಭಾಗವಾಗಿದ್ದಾರೆ. ಈ ಚಿತ್ರಕ್ಕಾಗಿ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ. ಈ ಸಿನಿಮಾ 2026ರಲ್ಲಿ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.