Mark Movie: ಮೂರು ವಾರಗಳಲ್ಲಿ ‘ಮಾರ್ಕ್’ ಸಿನಿಮಾ ಗಳಿಸಿದ್ದೆಷ್ಟು?
Mark movie collection: ಮೂರನೇ ವಾರದ ಬಳಿಕವೂ ‘ಮಾರ್ಕ್’ ಮೇನಿಯಾ ಹಲವೆಡೆ ಮುಂದುವರೆದಿದೆ. ಬೆಂಗಳೂರಿನಲ್ಲಿ ಸಹ ಮೂರನೇ ವಾರದ ಬಳಿಕವೂ ಹಲವು ಚಿತ್ರಮಂದಿರಗಳಲ್ಲಿ ‘ಮಾರ್ಕ್’ ಸಿನಿಮಾದ ಶೋಗಳು ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿವೆ. ಮೊದಲ ಎರಡು ವಾರ ಉತ್ತಮ ಕಲೆಕ್ಷನ್ ಮಾಡಿರುವ ಸಿನಿಮಾ ಈಗ ಮೂರನೇ ವಾರಕ್ಕೆ ಕಾಲಿಟ್ಟಿದೆ. ಮೂರನೇ ವಾರದ ವೇಳೆಗೆ ‘ಮಾರ್ಕ್’ ಸಿನಿಮಾ ಗಳಿಸಿರುವುದೆಷ್ಟು?

ಸುದೀಪ್ (Sudeep) ನಟನೆಯ ‘ಮಾರ್ಕ್’ ಸಿನಿಮಾ ಡಿಸೆಂಬರ್ ಅಂತ್ಯದಲ್ಲಿ ಬಿಡುಗಡೆ ಆಯ್ತು. 2025 ರಲ್ಲಿ ಏಕೈಕ ಸುದೀಪ್ ಸಿನಿಮಾ ‘ಮಾರ್ಕ’. ಅದರ ಜೊತೆಗೆ ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ ‘45’ ಸಹ ಬಿಡುಗಡೆ ಆಗಿತ್ತು. ಈ ಎರಡೂ ಸಿನಿಮಾಗಳ ಬಿಡುಗಡೆಗೆ ಕೆಲ ದಿನಗಳ ಮುಂಚೆ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಸಹ ತೆರೆಗೆ ಬಂದಿತ್ತು. ಇವೆಲ್ಲವುದರ ಜೊತೆಗೆ ‘ಮಾರ್ಕ್’ ಸಿನಿಮಾಕ್ಕೆ ಪೈರಸಿ ಸಮಸ್ಯೆ ಸಹ ಎದುರಾಗಿತ್ತು. ಇಷ್ಟೆಲ್ಲ ಸ್ಪರ್ಧೆ, ಬೆದರಿಕೆಗಳ ಮಧ್ಯವೂ ‘ಮಾರ್ಕ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಗಳಿಕೆ ಮಾಡಿದೆ. ಇದೀಗ ಸಿನಿಮಾ ಬಿಡುಗಡೆ ಆಗಿ ಮೂರು ವಾರಗಳಾಗಿದ್ದು, ಸಿನಿಮಾ ಗಳಿಸಿರುವುದೆಷ್ಟು?
ಮೂರನೇ ವಾರದ ಬಳಿಕವೂ ‘ಮಾರ್ಕ್’ ಮೇನಿಯಾ ಹಲವೆಡೆ ಮುಂದುವರೆದಿದೆ. ಬೆಂಗಳೂರಿನಲ್ಲಿ ಸಹ ಮೂರನೇ ವಾರದ ಬಳಿಕವೂ ಹಲವು ಚಿತ್ರಮಂದಿರಗಳಲ್ಲಿ ‘ಮಾರ್ಕ್’ ಸಿನಿಮಾದ ಶೋಗಳು ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿವೆ. ಮೊದಲ ಎರಡು ವಾರ ಉತ್ತಮ ಕಲೆಕ್ಷನ್ ಮಾಡಿರುವ ಸಿನಿಮಾವೀಗ ಮೂರನೇ ವಾರಕ್ಕೆ ಕಾಲಿಟ್ಟಿದೆ. ಮೂರನೇ ವಾರದ ವೇಳೆಗೆ ‘ಮಾರ್ಕ್’ ಸಿನಿಮಾದ ಒಟ್ಟು ಕಲೆಕ್ಷನ್ 50 ಕೋಟಿ ರೂಪಾಯಿ ದಾಟಿದೆ.
ಇಲ್ಲಿಯವರೆಗೆ ‘ಮಾರ್ಕ್’ ಸಿನಿಮಾ ಬರೋಬ್ಬರಿ 51 ಕೋಟಿ 30 ಲಕ್ಷವನ್ನು ಬಾಚಿಕೊಂಡಿದೆ. ಸುದೀಪ್ ಅವರ ಅಭಿಮಾನಿಗಳ ಜೊತೆಗೆ ಕುಟುಂಬ ಪ್ರೇಕ್ಷಕರು ಸಹ ಚಿತ್ರಮಂದಿರಕ್ಕೆ ಭೇಟಿ ನೀಡಿ ಸಿನಿಮಾ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. 2024ರ ಅಂತ್ಯದಲ್ಲಿ ಬಿಡುಗಡೆ ಆಗಿದ್ದ ‘ಮ್ಯಾಕ್ಸ್’ ಸಿನಿಮಾ ಸಹ ಇದೇ ರೀತಿಯ ಮೋಡಿ ಮಾಡಿತ್ತು. ಆ ಸಿನಿಮಾ ಬ್ಲಾಕ್ ಬಸ್ಟರ್ ಎನಿಸಿಕೊಂಡಿತ್ತು. ಇದೀಗ ‘ಮಾರ್ಕ್’ ಸಿನಿಮಾ ಸಹ ‘ಮ್ಯಾಕ್ಸ್’ನ ಹಾದಿಯಲ್ಲೇ ಇದೆ.
ಇದನ್ನೂ ಓದಿ:‘ಅಲೆಗಳ ವಿರುದ್ಧ ಹೋಗಲು ಸಮಯ ಬೇಕು’; ‘ಟಾಕ್ಸಿಕ್’ ಟೀಸರ್ಗೆ ಸುದೀಪ್ ವಿಶ್
ಟೈಟ್ ಆದ ಚಿತ್ರಕತೆ ಹೊಂದಿರುವ ‘ಮಾರ್ಕ್’ ಸಿನಿಮಾವನ್ನು ನಿರ್ದೇಶನ ಮಾಡಿರುವುದು ವಿಜಯ್ ಕಾರ್ತಿಕೇಯ. ‘ಮ್ಯಾಕ್ಸ್’ ಸಿನಿಮಾಕ್ಕೂ ಇವರದ್ದೆ ನಿರ್ದೇಶನ. ಈ ಸಿನಿಮಾದಲ್ಲಿ ಸುದೀಪ್ ಜೊತೆ ತಮಿಳಿನ ಯೋಗಿ ಬಾಬು, ಮಲಯಾಳಂನ ಶೈನ್ ಟಾಮ್ ಚಾಕೊ, ನವೀನ್ ಚಂದ್ರ ಮೊದಲಾದವರು ನಟಿಸಿದ್ದಾರೆ. ನಾಯಕಿಯರಾಗಿ ನಿಶ್ವಿಕಾ ನಾಯ್ಡು, ರೋಶಿಕಾ ಅವರುಗಳು ಇದ್ದಾರೆ. ಸಿನಿಮಾಕ್ಕೆ ಸತ್ಯಜ್ಯೋತಿ ಕ್ರಿಯೇಷನ್ಸ್ ಮತ್ತು ಸ್ವತಃ ಸುದೀಪ್ ಅವರ ನಿರ್ಮಾಣ ಸಂಸ್ಥೆಯಾದ ಕಿಚ್ಚ ಕ್ರಿಯೇಷನ್ಸ್ ಬಂಡವಾಳ ಹೂಡಿದೆ. ಸಿನಿಮಾದ ವಿತರಣೆಯಲ್ಲಿ ಸುದೀಪ್ ಪುತ್ರಿ ಸಾನ್ವಿ ಸಹ ಕೈಜೋಡಿಸಿರುವುದು ವಿಶೇಷ.
ಸುದೀಪ್ ಅವರು ಪ್ರಸ್ತುತ ಬಿಗ್ಬಾಸ್ ನಿರೂಪಣೆ ಮಾಡುತ್ತಿದ್ದು, ಮುಂದಿನ ವಾರ ಅದು ಸಹ ಅಂತ್ಯಗೊಳ್ಳಲಿದೆ. ಪ್ರಸ್ತುತ ಸುದೀಪ್ ಅವರು ‘ಬಿಲ್ಲ ರಂಗ ಭಾಷಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ದೊಡ್ಡ ಸ್ಕೇಲ್ನಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾ ಇದಾಗಿದ್ದು, ಸಿನಿಮಾ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಅದರ ಬಳಿಕ ರೊಮ್ಯಾಂಟಿಕ ಕಾಮಿಡಿ ಸಿನಿಮಾ ಒಂದರಲ್ಲಿ ಕಿಚ್ಚ ನಟಿಸಲಿದ್ದು, ತಮಿಳಿನ ಹೆಸರಾಂತ ನಿರ್ದೇಶಕರೊಬ್ಬರು ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




