‘ನಿನ್ನ ಹೊಟ್ಟೆಯಲ್ಲಿ ನಮ್ಮ ಮಗಳಾಗಿ ಬರುತ್ತಾಳೆ’; ತಾಯಿ ನಿಧನದ ಬಗ್ಗೆ ಜಾಕ್ವೆಲಿನ್​ಗೆ ಮುಕೇಶ್ ಪತ್ರ

ಜಾಕ್ವೆಲಿನ್ ಫರ್ನಾಂಡಿಸ್ ಅವರ ತಾಯಿ ಕಿಮ್ ಫರ್ನಾಂಡಿಸ್ ನಿಧನ ಹೊಂದಿದ್ದಾರೆ. ಆ ಬಳಿಕ 200 ಕೋಟಿ ರೂಪಾಯಿ ವಂಚನೆ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್ ಅವರು ಜಾಕ್ವೆಲಿನ್ ಗೆ ಸಂತಾಪ ಸೂಚಿಸುವ ಪತ್ರ ಬರೆದಿದ್ದಾನೆ.ಜಾಕ್ವೆಲಿನ್ ಸುಕೇಶ್ ಜೊತೆಗಿನ ಸಂಬಂಧದಿಂದಾಗಿ ತನಿಖೆಯನ್ನು ಎದುರಿಸುತ್ತಿದ್ದಾರೆ.

‘ನಿನ್ನ ಹೊಟ್ಟೆಯಲ್ಲಿ ನಮ್ಮ ಮಗಳಾಗಿ ಬರುತ್ತಾಳೆ’; ತಾಯಿ ನಿಧನದ ಬಗ್ಗೆ ಜಾಕ್ವೆಲಿನ್​ಗೆ ಮುಕೇಶ್ ಪತ್ರ
ಜಾಕ್ವೆಲಿನ್

Updated on: Apr 24, 2025 | 11:02 AM

ಏಪ್ರಿಲ್ 6ರಂದು ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ತಾಯಿ ಕಿಮ್ ಫರ್ನಾಂಡಿಸ್ ನಿಧನ ಹೊಂದಿದರು. ಅವರ ಸಾವು ಕುಟುಂಬಕ್ಕೆ ಸಾಕಷ್ಟು ನೋವು ತಂದಿತ್ತು. ಈ ನೋವಿನಲ್ಲೇ ಜಾಕ್ವೆಲಿನ್ ಮಾಜಿ ಬಾಯ್​ಫ್ರೆಂಡ್ ಹಾಗೂ 200 ಕೋಟಿ ರೂಪಾಯಿ ವಂಚನೆ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್ ಅವರು ಪತ್ರ ಬರೆದು ಜಾಕ್ವೆಲಿನ್​ಗೆ ಮತ್ತಷ್ಟು ನೋವು ಮಾಡಿದ್ದಾನೆ. ಕಿಮ್​ ಸಾವಿಗೆ ಸಂತಾಪ ಸೂಚಿಸಿರೋ ಅವರು, ಜಾಕ್ವೆಲಿನ್​ಗೆ ಒಂದಷ್ಟು ಭರವಸೆ ನೀಡಿದ್ದಾನೆ.

‘ನನಗೆ ಬಾಲಿಯಲ್ಲಿ ಸಣ್ಣ ಜಾಗವಿದೆ. ಅಲ್ಲಿರೋ ಗಾರ್ಡನ್​ಗೆ ಕಿಮ್ ಎಂದು ಹೆಸರು ಇಟ್ಟಿದ್ದೇನೆ. ಅದನ್ನು ಈಸ್ಟರ್ ಗಿಫ್ಟ್ ಆಗಿ ನಿನನಗೆ ನೀಡುತ್ತಿದ್ದೇನೆ. ನಿನ್ನ ತಾಯಿಯ ನೆನಪಿಗೆ ಅದನ್ನು ಇಟ್ಟುಕೋ. ಬೇಬಿ, ಸಂತಾಪ ಸೂಚಿಸಲು ಏನೆಲ್ಲ ಬೇಕೋ ಅದೆಲ್ಲವನ್ನೂ ಮಾಡುತ್ತಿದ್ದೇನೆ. ಈ ನಿನ್ನ ಕೆಟ್ಟ ಕ್ಷಣದಲ್ಲಿ ನಾನು ನಿನ್ನ ಜೊತೆಗಿದ್ದೇನೆ. ಕೆಲವರು ನಿನ್ನ ಜೊತೆ ಇದ್ದಂತೆ ತೋರಿಸಕೊಳ್ಳುತ್ತಾರೆ. ಅದಕ್ಕೆ ಅವರ ಸ್ವಾರ್ಥ ಕಾರಣ. ಅದು ನಿನಗೂ ಗೊತ್ತಿದೆ’ ಎಂದಿದ್ದಾರೆ ಅವರು.

‘ಅಮ್ಮ ನಮ್ಮ ಮಗಳಾಗಿ ನಿನ್ನ ಹೊಟ್ಟೆಯಲ್ಲಿ ಹುಟ್ಟಿ ಬರುತ್ತಾಳೆ. ತಂದೆ ಜೊತೆ ಈಸ್ಟರ್ ಗಿಫ್ಟ್ ನೋಡಲು ನೀನು ಹೋಗಬೇಕು. ನಿನ್ನ ತಾಯಿಯ ಇರುವಿಕೆ ನಿನಗೆ ಭಾಸವಾಗುತ್ತದೆ’ ಎಂದು ಸುಕೇಶ್ ಹೇಳಿದ್ದಾನೆ. ಈತನ ಸಂದೇಶದಿಂದ ಜಾಕ್ವೆಲಿನ್ ಮತ್ತಷ್ಟು ವಿಚಲಿತರಾಗಿರಬಹದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ
ಮಂತ್ರಾಲಯದ ಗರ್ಭಗುಡಿಯಲ್ಲಿ ಮಲಗಿದ್ದ ರಾಜ್​ಕುಮಾರ್; ಆ ಬಳಿಕ ನಡೆದಿದ್ದು ಏನು
ರಾಜ್​ಕುಮಾರ್ ಮೊದಲ ಆಡಿಷನ್ ಹೇಗಿತ್ತು? ವಿವರಿಸಿದ್ದ ಅಣ್ಣಾವ್ರು
ಪಹಲ್ಗಾಮ್ ದಾಳಿ ಬಗ್ಗೆ ಪಾಕ್ ನಟನ ಅಭಿಪ್ರಾಯವೇನು? ದೂಷಿಸಿದ್ದು ಯಾರನ್ನು?
ರಾಜ್​ಕುಮಾರ್ ಜನ್ಮದಿನಕ್ಕೆ ಶಿವಣ್ಣನ ಹೊಸ ಸಿನಿಮಾ ಘೋಷಣೆ; ಟೈಟಲ್ ಏನು?

ಜಾಕ್ವೆಲಿನ್ ಫರ್ನಾಂಡಿಸ್ ಅವರು ಸುಕೇಶ್ ಜೊತೆ ರಿಲೇಶನ್​ಶಿಪ್​ನಲ್ಲಿ ಇದ್ದರು ಎನ್ನಲಾಗಿದೆ. ಅವರ ಖಾಸಗಿ ಫೋಟೋಗಳನ್ನು ಸುಕೇಶ್ ಅವರೇ ರಿವೀಲ್ ಮಾಡಿದ್ದರು. ರಿಲೇಶನ್​ಶಿಪ್ ವೇಳೆ ಇದ್ದ ಸಂದರ್ಭದಲ್ಲಿ ಜಾಕ್ವೆಲಿನ್​ಗೆ ದುಬಾರಿ ಕುದುರೆ, ಬೆಕ್ಕುಗಳನ್ನು ಉಡುಗೊರೆ ಆಗಿ ನೀಡಿದ್ದರು. ಇದರಿಂದ ಜಾಕ್ವೆಲಿನ್ ಸಮಸ್ಯೆ ಎದುರಿಸಿದ್ದರು.

ಇದನ್ನೂ ಓದಿ: ನಟಿ ಜಾಕ್ವೆಲಿನ್ ಫರ್ನಾಂಡಿಸ್ ತಾಯಿ ಕಿಮ್ ಫರ್ನಾಂಡಿಸ್ ನಿಧನ

ಜಾಕ್ವೆಲಿನ್ ಅವರು ಸದ್ಯ ಜಾರಿ ನಿರ್ದೇಶನಾಲಯದ ರೇಡಾರ್​ನಲ್ಲಿ ಇದ್ದಾರೆ. ಈಗಾಗಲೇ ಅನೇಕ ಬಾರಿ ವಿಚಾರಣೆ ಎದುರಿಸಿ ಆಗಿದೆ. ಅವರು ವಿದೇಶಕ್ಕೆ ಹೋಗುವುದರ ಮೇಲೂ ತಡೆ ಹೇರಲಾಗಿತ್ತು. ಆದರೆ, ಅವರು ವಿಚಾರಣೆಗೆ ಸಹಕರಿಸುತ್ತಿರುವುದರಿಂದ ಯಾವುದೇ ತೊಂದರೆ ಇಲ್ಲ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:00 am, Thu, 24 April 25