ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾ 2021ರಲ್ಲಿ ಬಿಡುಗಡೆ ಆಯಿತು. ಬ್ಲಾಕ್ ಬಸ್ಟರ್ ಹಿಟ್ ಆದ ಆ ಸಿನಿಮಾದಲ್ಲಿ ಪ್ರೇಕ್ಷಕರಿಗೆ ತೋರಿಸಿರುವುದು ಅರ್ಧ ಕಥೆ ಮಾತ್ರ. ಇನ್ನುಳಿದ ಕಥೆಯನ್ನು 2ನೇ ಪಾರ್ಟ್ನಲ್ಲಿ ಹೇಳಲಾಗುತ್ತಿದೆ. ‘ಪುಷ್ಪ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಡಿಸೆಂಬರ್ 5ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಕಾಣಲಿದೆ. ನಿರ್ದೇಶಕ ಸುಕುಮಾರ್ ಅವರು ಸಾಕಷ್ಟು ಸಮಯ ತೆಗೆದುಕೊಂಡು ಈ ಸಿನಿಮಾವನ್ನು ಮಾಡಿದ್ದಾರೆ. ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಇತ್ತೀಚೆಗೆ ಹೈದರಾಬಾದ್ನಲ್ಲಿ ನಡೆಯಿತು. ಆ ವೇದಿಕೆಯಲ್ಲಿ ಸುಕುಮಾರ್ ಅವರು ಒಂದು ವಿಷಯ ಹಂಚಿಕೊಂಡರು.
ಆರಂಭದಲ್ಲಿ ‘ಪುಷ್ಪ’ ಸಿನಿಮಾದ ಕಥೆ ಒಂದೇ ಪಾರ್ಟ್ನಲ್ಲಿ ಮುಗಿಯುವಂತಿತ್ತು. ಆದರೆ ನಿರ್ದೇಶಕ ಸುಕುಮಾರ್ ಅವರಿಗೆ ಒಂದು ಐಡಿಯಾ ಕೊಡಲಾಯಿತು. ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆಯ ಸಿಇಓ ಚೆರಿ ಅವರು 2 ಪಾರ್ಟ್ ಮಾಡುವ ಐಡಿಯಾ ಕೊಟ್ಟರು. ಆ ಕಾರಣದಿಂದ ಸುಕುಮಾರ್ ಅವರು ಈ ಸಿನಿಮಾದ ಕಥೆಯನ್ನು ವಿಸ್ತರಿಸಿದರು. ಮೊದಲ ಪಾರ್ಟ್ ಸೂಪರ್ ಹಿಟ್ ಆಯಿತು. ಎರಡನೇ ಪಾರ್ಟ್ ಕೂಡ ಅದ್ದೂರಿಯಾಗಿ ಮೂಡಿಬಂದಿದೆ.
‘ಪುಷ್ಪ’ ಸೂಪರ್ ಹಿಟ್ ಆಗಿದ್ದರಿಂದ ‘ಪುಷ್ಪ 2’ ಸಿನಿಮಾಗೆ ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆಯು ನೂರಾರು ಕೋಟಿ ರೂಪಾಯಿ ಬಂಡವಾಳ ಹೂಡಿದೆ. ಈ ಸಿನಿಮಾದ ಬಿಡುಗಡೆಗೂ ಮುನ್ನವೇ ಬಹುಕೋಟಿ ರೂಪಾಯಿ ಬಿಸ್ನೆಸ್ ಆಗಿದೆ. ಜನರಿಗೆ ಇರುವ ನಿರೀಕ್ಷೆಯ ಮಟ್ಟವನ್ನು ಗಮನಿಸಿದರೆ ಬಾಕ್ಸ್ ಆಫೀಸ್ನಲ್ಲಿ ಖಂಡಿತವಾಗಿಯೂ ‘ಪುಷ್ಪ 2’ ಸಿನಿಮಾ ಹೊಸ ಮೈಲಿಗಲ್ಲು ಸ್ಥಾಪಿಸಲಿದೆ.
ಇದನ್ನೂ ಓದಿ: ಲಂಡನ್ ಬೀದಿಯಲ್ಲಿ ‘ಪುಷ್ಪ 2’ ಹಾಡಿಗೆ ಹೆಜ್ಜೆ ಹಾಕಿದ ಅಲ್ಲು ಅರ್ಜುನ್ ಫ್ಯಾನ್ಸ್
ಅಲ್ಲು ಅರ್ಜುನ್ ಅವರ ವೃತ್ತಿಜೀವನದಲ್ಲಿ ‘ಪುಷ್ಪ 2’ ಸಿನಿಮಾ ಬಹಳ ಮಹತ್ವದ್ದಾಗಿದೆ. ಈ ಚಿತ್ರಕ್ಕಾಗಿ ಅವರು ಹಲವು ವರ್ಷಗಳ ಸಮಯವನ್ನು ಮೀಸಲಿಟ್ಟರು. ನಟಿ ರಶ್ಮಿಕಾ ಮಂದಣ್ಣ, ನಿರ್ದೇಶಕ ಸುಕುಮಾರ್ ಮುಂತಾದವರು ಕೂಡ ಹೆಚ್ಚು ಸಮಯ ನೀಡಿದ್ದಾರೆ. ಅವರೆಲ್ಲರ ಶ್ರಮಕ್ಕೆ ಪ್ರತಿಫಲ ಸಿಗುವ ಸಮಯ ಈಗ ಬಂದಿದೆ. ಹಾಡುಗಳು ಸೂಪರ್ ಹಿಟ್ ಆಗಿವೆ. ಟ್ರೇಲರ್ ನೋಡಿದ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.