ಒಂದು ಕಾಲದಲ್ಲಿ ನೀಲಿ ಚಿತ್ರಗಳ ತಾರೆಯಾಗಿದ್ದ ನಟಿ ಸನ್ನಿ ಲಿಯೋನ್ (Sunny Leone) ನಂತರ ಬಾಲಿವುಡ್ನಲ್ಲಿ ಭದ್ರವಾಗಿ ನೆಲೆ ಕಂಡುಕೊಂಡರು. ಬಳಿಕ ಅವರಿಗೆ ಬೇರೆ ಬೇರೆ ಭಾಷೆಗಳಲ್ಲೂ ಆಫರ್ಗಳು ಬರಲು ಆರಂಭಿಸಿದವು. ಈಗ ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ’ (Pushpa) ಚಿತ್ರದಲ್ಲಿ ಅಭಿನಯಿಸಲು ಸನ್ನಿ ಲಿಯೋನ್ಗೆ ಅವಕಾಶ ಸಿಗುತ್ತಿದೆ. ಅರೆರೆ, ಆ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ನಾಯಕಿಯಲ್ಲವೇ? ಹಾಗಾದರೆ ಸನ್ನಿ ಲಿಯೋನ್ಗೆ ಅಲ್ಲೇನು ಕೆಲಸ? ಈ ಪ್ರಶ್ನೆಗೆ ಉತ್ತರ ಐಟಂ ಡ್ಯಾನ್ಸ್!
ಹಲವು ಭಾಷೆಗಳಲ್ಲಿ ಮೂಡಿಬರುತ್ತಿರುವ ‘ಪುಷ್ಪ’ ಚಿತ್ರಕ್ಕೆ ಸುಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ತಮ್ಮ ಎಲ್ಲ ಸಿನಿಮಾದಲ್ಲೂ ಐಟಂ ಸಾಂಗ್ಗೆ ಸುಕುಮಾರ್ ಹೆಚ್ಚು ಮಹತ್ವ ನೀಡುತ್ತಾರೆ. ಅದನ್ನು ‘ಪುಷ್ಪ’ ಚಿತ್ರದಲ್ಲೂ ಮುಂದುವರಿಸಿದ್ದಾರೆ. ಮೂಲಗಳ ಪ್ರಕಾರ ಸನ್ನಿ ಲಿಯೋನ್ ಜೊತೆಗೆ ಚಿತ್ರತಂಡ ಈಗಾಗಲೇ ಒಂದು ಸುತ್ತಿನ ಮಾತುಕಥೆ ಮುಗಿಸಿದೆ. ಅವರು ಈ ಒಂದು ಐಟಂ ಸಾಂಗ್ನಲ್ಲಿ ಹೆಜ್ಜೆ ಹಾಕಲು ಬರೋಬ್ಬರಿ 50 ಲಕ್ಷ ರೂ. ಸಂಭಾವನೆ ಕೇಳುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
ಈಗಾಗಲೇ ಹಲವು ಸಿನಿಮಾಗಳಲ್ಲಿ ಐಟಂ ಡ್ಯಾನ್ಸ್ ಮಾಡಿ ಸನ್ನಿ ಫೇಮಸ್ ಆಗಿದ್ದಾರೆ. ಶಾರುಖ್ ಖಾನ್, ಸಂಜಯ್ ದತ್ ಮುಂತಾದವರ ಸಿನಿಮಾದಲ್ಲೂ ಅವರು ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅವರಿಗೆ ಎಲ್ಲ ಭಾಷೆಯಲ್ಲೂ ಅಭಿಮಾನಿಗಳಿದ್ದಾರೆ. ಹಾಗಾಗಿ ಅವರಿಂದ ಐಟಂ ಡ್ಯಾನ್ಸ್ ಮಾಡಿಸಿದರೆ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ ಎಂಬ ಲೆಕ್ಕಾಚಾರ ‘ಪುಷ್ಪ’ ತಂಡದ್ದು. ಅಲ್ಲದೇ ಈ ಸಿನಿಮಾ ಮಲಯಾಳಂ ಭಾಷೆಯಲ್ಲೂ ಬಿಡುಗಡೆ ಆಗಲಿದೆ. ಕೇರಳದಲ್ಲಿ ಸನ್ನಿ ಲಿಯೋನ್ಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಈ ಎಲ್ಲ ಆಯಾಮಗಳಲ್ಲೂ ನಿರ್ದೇಶಕ ಸುಕುಮಾರ್ ಆಲೋಚಿಸಿದಂತಿದೆ.
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ, ಫಹಾದ್ ಫಾಸಿಲ್, ಜಗಪತಿ ಬಾಬು, ಪ್ರಕಾಶ್ ರಾಜ್ ಮುಂತಾದವರು ನಟಿಸಿರುವ ‘ಪುಷ್ಪ’ ಚಿತ್ರ ಎರಡು ಪಾರ್ಟ್ಗಳಲ್ಲಿ ಮೂಡಿಬರಲಿದೆ. ಐಎಂಡಿಬಿ ವೆಬ್ಸೈಟ್ನ ಬಹುನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಈ ಚಿತ್ರಕ್ಕೆ ಮೊದಲ ಸ್ಥಾನ ಸಿಕ್ಕಿದೆ.
ಇದನ್ನೂ ಓದಿ:
Sunny Leone: ಕೇವಲ ಹ್ಯಾಟ್ ಮೂಲಕ ದೇಹ ಮುಚ್ಚಿಕೊಂಡ ಸನ್ನಿ ಲಿಯೋನ್; ವೈರಲ್ ಆಯ್ತು ನಟಿಯ ಹೊಸ ಫೋಟೋ
ನಿಮ್ಮ ಪರ್ಸನಲ್ ಮೆಸೇಜ್ ಬೇರೆ ಯಾರೂ ಓದಬಾರದು ಎಂದರೆ ಏನು ಮಾಡ್ಬೇಕು? ಇಲ್ಲಿದೆ ಸನ್ನಿ ಲಿಯೋನ್ ಉಪಾಯ