Rajinikanth: ದಾದಾಸಾಹೇಬ್​ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ರಜನಿಕಾಂತ್​; 67ನೇ ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಲೈವಾ

| Updated By: ಮದನ್​ ಕುಮಾರ್​

Updated on: Oct 25, 2021 | 1:04 PM

Dadasaheb Phalke Award: ನಟ ರಜನಿಕಾಂತ್​ ಪಾಲಿಗೆ ಇಂದು (ಅ.25) ಮಹತ್ವದ ದಿನ. ದೆಹಲಿಯ ವಿಜ್ಞಾನ ಭವನದಲ್ಲಿ ಅವರು ‘ದಾದಾ ಸಾಹೇಬ್​ ಫಾಲ್ಕೆ’ ಪ್ರಶಸ್ತಿ ಸ್ವೀಕರಿಸಿದ್ದಾರೆ.

Rajinikanth: ದಾದಾಸಾಹೇಬ್​ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ರಜನಿಕಾಂತ್​; 67ನೇ ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಲೈವಾ
67ನೇ ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಜನಿಕಾಂತ್, ಧನುಶ್
Follow us on

ಭಾರತೀಯ ಚಿತ್ರರಂಗದ ‘ಸೂಪರ್​ ಸ್ಟಾರ್​’ ರಜನಿಕಾಂತ್ (Rajinikanth)​ ಅವರು ಇಂದು (ಅ.25) ಪ್ರತಿಷ್ಠಿತ ‘ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ’ (Dadasaheb Phalke Award) ಸ್ವೀಕರಿಸಿದ್ದಾರೆ. ದೆಹಲಿಯ ವಿಜ್ಞಾನ ಭವನದಲ್ಲಿ ಈ ಸಮಾರಂಭ ನಡೆದಿದೆ. ಸಿನಿಮಾ ಕ್ಷೇತ್ರದಲ್ಲಿ ಸಾಧನೆಗಾಗಿ ರಜನಿಕಾಂತ್​ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. 67ನೇ ರಾಷ್ಟ್ರ ಪ್ರಶಸ್ತಿ ಸಮಾರಂಭ (67th National Film Awards) ಇದಾಗಿದ್ದು, 2019ರಲ್ಲಿ ತೆರೆಕಂಡ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಿದ್ದಾರೆ.

ಮಲಯಾಳಂ ಸಿನಿಮಾ ‘ಮರಕ್ಕರ್​: ಲಯನ್​ ಆಫ್​ ದಿ ಅರೇಬಿಯನ್​ ಸೀ’ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ‘ಭೋಂಸ್ಲೆ’ ಚಿತ್ರಕ್ಕಾಗಿ ಮನೋಜ್​ ಬಾಜಪೇಯಿ ಹಾಗೂ ‘ಅಸುರನ್​’ ಚಿತ್ರಕ್ಕಾಗಿ ಧನುಶ್​ ಅವರು ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ್ದಾರೆ. ‘ಪಂಗಾ’ ಮತ್ತು ‘ಮಣಿಕರ್ಣಿಕಾ’ ಚಿತ್ರಗಳಿಗಾಗಿ ಕಂಗನಾ ರಣಾವತ್​ ಅವರಿಗೆ ‘ಅತ್ಯುತ್ತಮ ನಟಿ’ ಪ್ರಶಸ್ತಿ ಸಿಕ್ಕಿದೆ.

ಕನ್ನಡದ ಅತ್ಯುತ್ತಮ ಸಿನಿಮಾ ಎಂಬ ಖ್ಯಾತಿಗೆ ಈ ವರ್ಷ ‘ಅಕ್ಷಿ’ ಚಿತ್ರ ಪಾತ್ರವಾಗಿದೆ. ಇದಕ್ಕೆ ನಿರ್ದೇಶನ ಮಾಡಿರುವುದು ಹೊಸ ನಿರ್ದೇಶಕ ಮನೋಜ್​ ಕುಮಾರ್. ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿರುವ​ ಅವರಿಗೆ ನಿರ್ದೇಶಕನಾಗಿ ‘ಅಕ್ಷಿ’ ಮೊದಲ ಸಿನಿಮಾ. ಚೊಚ್ಚಲ ಪ್ರಯತ್ನದಲ್ಲೇ ರಾಷ್ಟ್ರ ಪ್ರಶಸ್ತಿ ಸಿಕ್ಕಿರುವುದು ತಂತಸದ ವಿಚಾರ.

ಪ್ರಶಸ್ತಿ ವಿಜೇತರ ಪಟ್ಟಿ

ಅತ್ಯುತ್ತಮ ಸಿನಿಮಾ: ಮರಕ್ಕರ್: ಲೈನ್​ ಆಫ್​ ದಿ ಅರೇಬಿಯನ್​ ಸೀ

ಅತ್ಯುತ್ತಮ ನಟಿ: ಕಂಗನಾ ರಣಾವತ್​ (ಮಣಿಕರ್ಣಿಕಾ, ಪಂಗಾ)

ಅತ್ಯುತ್ತಮ ನಟ: ಧನುಷ್​ (ಅಸುರನ್​) ಮನೋಜ್​ ಬಾಜಪಯ್​ (ಭೋನ್ಸ್​ಲೆ)

ಅತ್ಯುತ್ತಮ ಚಿತ್ರ ಕನ್ನಡ ಸಿನಿಮಾ: ಅಕ್ಷಿ

ಅತ್ಯುತ್ತಮ ಚಿತ್ರ ಸಾಹಸ ನಿರ್ದೇಶನ: ವಿಕ್ರಂ ಮೋರ್​ (ಅವನೇ ಶ್ರೀಮನ್ನಾರಾಯಣ)

ಅತ್ಯುತ್ತಮ ನಿರ್ದೇಶನ: ಬಹತಾರ್​ ಹುರೈನ್​

ಅತ್ಯುತ್ತಮ ಪೋಷಕ ನಟ: ವಿಜಯ್​​ ಸೇತುಪತಿ (ಸೂಪರ್​ ಡಿಲಕ್ಸ್​)

ಅತ್ಯುತ್ತಮ ಪೋಷಕ ನಟಿ: ಪಲ್ಲವಿ ಜೋಶಿ (ದಿ ತಾಷ್ಕೆಂಟ್​ ಫೈಲ್ಸ್​)

ಅತ್ಯುತ್ತಮ ನೃತ್ಯ ನಿರ್ದೇಶನ: ಮಹರ್ಷಿ (ತೆಲುಗು)

ಅತ್ಯುತ್ತಮ ಜನಪ್ರಿಯ ಮನರಂಜನೆ ಸಿನಿಮಾ: ಮಹರ್ಷಿ (ತೆಲುಗು)

ಅತ್ಯುತ್ತಮ ಗೀತ ಸಾಹಿತ್ಯ: ಪ್ರಭಾವರ್ಮಾ-ಕೊಲಾಂಬಿ (ಮಲಯಾಳಂ)

ಅತ್ಯುತ್ತಮ ಸಂಗೀತ ನಿರ್ದೇಶಕ: ಡಿ. ಇಮ್ಮಾನ್​-ವಿಶ್ವಾಸಮ್​(ತಮಿಳು)

ಅತ್ಯುತ್ತಮ ಸಂಕಲನ: ಜೆರ್ಸಿ (ತೆಲುಗು)

ಅತ್ಯುತ್ತಮ ಮೇಕಪ್​ ಆರ್ಟಿಸ್ಟ್​​: ರಂಜಿತ್​-ಹೆಲನ್​ (ಮಲಯಾಳಂ)

ಚೊಚ್ಚಲ ಅತ್ಯುತ್ತಮ ನಿರ್ದೇಶನ: ಮತ್ತುಕುಟ್ಟಿ (ಹೆಲನ್​ -ಮಲಯಾಳಂ)

ಅತ್ಯುತ್ತಮ ಮಕ್ಕಳ ಚಿತ್ರ: ಕಸ್ತೂರಿ (ಹಿಂದಿ)

ಸಾಮಾಜಿಕ ಸಮಸ್ಯೆಗಳ ಕುರಿತ ಅತ್ಯುತ್ತಮ ಚಿತ್ರ: ಆನಂದಿ ಗೋಪಾಲ್​ (ಮರಾಠಿ)

ಇದನ್ನೂ ಓದಿ:

National Film Awards 2019: ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಒಲಿದ ರಾಷ್ಟ್ರ ಪ್ರಶಸ್ತಿ

‘ನಿನ್ನ ಸನಿಹಕೆ’ ಚಿತ್ರ ನೋಡಲಿರುವ ರಜನಿಕಾಂತ್​; ಧನ್ಯಾ ರಾಮ್​ಕುಮಾರ್​-ಸೂರಜ್​ಗೆ ತಲೈವಾ ಬೆಂಬಲ

ಎವರ್​ಗ್ರೀನ್​ ಹೀರೋ ರಜನಿಕಾಂತ್​ಗೆ ನಾಯಕಿಯಾಗಲಿದ್ದಾರೆ ಯಂಗ್​ ಬ್ಯೂಟಿ ದೀಪಿಕಾ ಪಡುಕೋಣೆ

Published On - 12:49 pm, Mon, 25 October 21