ಮೆಚ್ಚಿನ ನಟನಿಗೆ ಮೋಸ, ತಮಿಳು ನಿರ್ದೇಶಕನ ಮೇಲೆ ಸೂರ್ಯ ಅಭಿಮಾನಿಗಳು ಕಿಡಿ

|

Updated on: Nov 06, 2024 | 6:03 PM

ತಮಿಳಿನ ಸ್ಟಾರ್ ನಟ ಸೂರ್ಯ ನಟನೆಯ ‘ಕಂಗುವ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಇದರ ನಡುವೆ ಸೂರ್ಯ ಅಭಿಮಾನಿಗಳು ತಮಿಳಿನ ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್ ಮೇಲೆ ಆಕ್ರೋಶ ಹೊರಹಾಕಿದ್ದಾರೆ.

ಮೆಚ್ಚಿನ ನಟನಿಗೆ ಮೋಸ, ತಮಿಳು ನಿರ್ದೇಶಕನ ಮೇಲೆ ಸೂರ್ಯ ಅಭಿಮಾನಿಗಳು ಕಿಡಿ
ಸೂರ್ಯ (ಸಾಂದರ್ಭಿಕ ಚಿತ್ರ)
Follow us on

ತಮಿಳು ಸ್ಟಾರ್ ನಟ ಸೂರ್ಯ ಕಮರ್ಶಿಯಲ್ ಸಿನಿಮಾಗಳ ಜೊತೆಗೆ ಗಟ್ಟಿ ಸಾಮಾಜಿಕ ಸಂದೇಶ ಇರುವ ಸಿನಿಮಾಗಳಲ್ಲಿಯೂ ನಟಿಸುತ್ತಾ ಬರುತ್ತಿದ್ದಾರೆ. ಅವರ ನಟನೆಯ ‘ಜೈ ಭೀಮ್’ ಸಿನಿಮಾ ಭಾರಿ ಯಶಸ್ಸು ಗಳಿಸಿದ್ದು ಮಾತ್ರವೇ ಅಲ್ಲದೆ ಆಸ್ಕರ್​ಗೆ ಶಾರ್ಟ್ ಲಿಸ್ಟ್ ಆಗಿತ್ತು. ಇದೀಗ ಸೂರ್ಯ ನಟನೆಯ ‘ಕಂಗುವ’ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ. ಈ ಪ್ಯಾನ್ ಇಂಡಿಯಾ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಸೂರ್ಯ ನಿರತರಾಗಿದ್ದಾರೆ. ಇದರ ನಡುವೆ ತಮಿಳಿನ ಸ್ಟಾರ್ ನಿರ್ದೇಶಕರೊಬ್ಬರ ಮೇಲೆ ಸೂರ್ಯ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ತಮ್ಮ ನಟನಿಗೆ ಮೋಸ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.

ಸೂರ್ಯ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿರುವುದು ತಮಿಳಿನ ಪ್ರಸ್ತುತ ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್ ವಿರುದ್ಧ. ‘ಖೈದಿ’, ‘ಮಾಸ್ಟರ್’, ‘ಲಿಯೋ’, ‘ವಿಕ್ರಂ’ ಸಿನಿಮಾಗಳನ್ನು ನಿರ್ದೇಶಿಸಿರುವ ಲೋಕೇಶ್ ಕನಗರಾಜ್, ಸೂರ್ಯ ಜೊತೆಗೆ ಪೂರ್ಣ ಪ್ರಮಾಣದ ಸಿನಿಮಾ ಮಾಡಿಲ್ಲ. ಸೂರ್ಯಗೆ ಲೋಕೇಶ್ ಎರಡು ಕತೆ ಹೇಳಿದ್ದರಂತೆ. ಅದರಲ್ಲಿ ಒಂದು ಒಬ್ಬ ಸೂಪರ್ ಹೀರೋ ಕತೆ. ಒಂದು ಕೈ ಕಳೆದುಕೊಂಡ ಒಬ್ಬ ವ್ಯಕ್ತಿಯ ಕತೆ ಅದು. ಸಿನಿಮಾಕ್ಕೆ ‘ಇರುಂಬು ಕೈ ಮಾಯಾವಿ’ ಎಂದು ಹೆಸರು ಸಹ ಇಡಲಾಗಿತ್ತು.

ಇದನ್ನೂ ಓದಿ:ಪ್ರಭಾಸ್ ಸರಳತೆಯ ಕೊಂಡಾಡಿದ ಸೂರ್ಯ, ಬಿಚ್ಚಿಟ್ಟರು ಅಪರೂಪದ ಘಟನೆ

ಆದರೆ ಈಗ ಸೂರ್ಯ ಅವರೇ ಹೇಳಿರುವಂತೆ ಆ ಸೂಪರ್ ಹೀರೋ ಸಿನಿಮಾ ಅವರ ಕೈಗೆ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲವಂತೆ. ಲೋಕೇಶ್ ಕನಗರಾಜ್, ‘ಇರುಂಬು ಕೈ ಮಾಯಾವಿ’ ಸಿನಿಮಾವನ್ನು ಬಾಲಿವುಡ್ ನಟ ಆಮಿರ್ ಖಾನ್ ಅವರಿಗೆ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ಅನುಪಮಾ ಚೋಪ್ರಾ ಜೊತೆಗಿನ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಲೋಕೇಶ್ ಕನಗರಾಜ್, ತಾವು ಆಮಿರ್ ಖಾನ್ ಜೊತೆಗೆ ಸಿನಿಮಾ ಮಾಡುತ್ತಿರುವುದಾಗಿ ಹೇಳಿದ್ದಾರೆ. ‘ಕಂಗುವ’ ಪ್ರಚಾರದಲ್ಲಿರುವ ಸೂರ್ಯ ಸಹ ಇದೇ ಸಮಯದಲ್ಲಿ ‘ಇರುಂಬು ಕೈ ಮಾಯಾವಿ’ ನನ್ನ ಕೈಗೆ ಸಿಗುತ್ತದೆಯೋ ಅಥವಾ ಇನ್ನೂ ದೊಡ್ಡ ಸ್ಟಾರ್​ ಕೈ ಸೇರುತ್ತದೆಯೋ ನೋಡಬೇಕು’ ಎಂದು ಬೇಸರದಿಂದಲೇ ಹೇಳಿದ್ದಾರೆ.

ಇನ್ನು ಲೋಕೇಶ್ ಕನಗರಾಜ್, ಸೂರ್ಯಗೆ ‘ವಿಕ್ರಂ’ ಸಿನಿಮಾದ ರೋಲೆಕ್ಸ್ ಪಾತ್ರವನ್ನು ಪ್ರಧಾನವಾಗಿ ಇಟ್ಟುಕೊಂಡು ಪ್ರತ್ಯೇಕ ಸಿನಿಮಾ ಮಾಡುವ ಬಗ್ಗೆ ಹೇಳಿದ್ದಾರಂತೆ. ಅದರ ಬಗ್ಗೆ ಕೇವಲ ಒನ್​ಲೈನರ್ ಮಾತ್ರವೇ ಇದ್ದು ಅದರ ಚಿತ್ರಕತೆ ಇನ್ನಷ್ಟೆ ರೆಡಿಯಾಗಬೇಕಿದೆ. ಇನ್ನು ಕಾರ್ತಿ ಜೊತೆಗೆ ‘ಕೈದಿ 2’ ಸಿನಿಮಾ ಸಹ ಲೋಕೇಶ್ ಮಾಡುವವರಿದ್ದಾರೆ. ಆ ಸಿನಿಮಾದಲ್ಲಿ ರೋಲೆಕ್ಸ್ ಮುಖ್ಯ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದಕ್ಕೆಲ್ಲ ಕಾಲವೇ ಉತ್ತರ ನೀಡಬೇಕಿದೆ. ಸೂರ್ಯ ನಟಿಸಿರುವ ‘ಕಂಗುವ’ ಸಿನಿಮಾ ನವೆಂಬರ್ 14ಕ್ಕೆ ಬಿಡುಗಡೆ ಆಗುತ್ತಿದೆ. ಸಿನಿಮಾದಲ್ಲಿ ದಿಶಾ ಪಟಾನಿ ನಾಯಕಿ, ಬಾಲಿವುಡ್​ನ ಬಾಬಿ ಡಿಯೋಲ್ ವಿಲನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ