ಅಭಿಷೇಕ್ ವಹಿಸಿಕೊಂಡು ಮಾತನಾಡಿದ ನಟಿಗೆ ಪಾಠ ಕಲಿಸಿದ ನೆಟ್ಟಿಗರು

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ವಿಚ್ಛೇದನ ಪಡೆಯಲಿದ್ದಾರೆ, ಅಭಿಷೇಕ್ ಬಚ್ಚನ್ ಮತ್ತೊಬ್ಬ ನಟಿಯೊಟ್ಟಿಗೆ ಸಂಬಂಧದಲ್ಲಿದ್ದಾರೆ ಎಂಬ ಸುದ್ದಿಗಳು ಸಹ ಹರಿದಾಡುತ್ತಿವೆ. ಈ ನಡುವೆ ಹಿರಿಯ ನಟಿ ಅಭಿಷೇಕ್ ಪರ ವಹಿಸಿ ಮಾತನಾಡಿದ್ದ ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಅಭಿಷೇಕ್ ವಹಿಸಿಕೊಂಡು ಮಾತನಾಡಿದ ನಟಿಗೆ ಪಾಠ ಕಲಿಸಿದ ನೆಟ್ಟಿಗರು
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Nov 06, 2024 | 6:37 PM

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ದೂರ ಆಗಿರುವ ವಿಚಾರ ಸದ್ಯ ಚರ್ಚೆಯಲ್ಲಿ ಇದೆ. ಇಬ್ಬರೂ ಯಾಕೆ ದೂರ ಆದರು ಎನ್ನುವುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ಮಧ್ಯೆ ಎಲ್ಲರೂ ಅಭಿಷೇಕ್ನ ಟ್ರೋಲ್ ಮಾಡುತ್ತಿದ್ದಾರೆ. ಅಭಿಷೇಕ್ನ ವಹಿಸಿಕೊಂಡು ಬಂದು ಮಾತನಾಡಿದವರು ಕಡಿಮೆ. ಹೀಗಿರುವಾಗಲೇ ಬಾಲಿವುಡ್ ನಟಿ ಸಿಮಿ ಗರೇವಾಲ್ ಅವರು ಅಭಿಷೇಕ್ ಪರವಾಗಿ ಮಾತನಾಡಿದ್ದರು. ಇದರಿಂದ ಅವರು ಸಾಕಷ್ಟು ಟ್ರೋಲ್ ಆಗಿದ್ದಾರೆ. ಆ ಬಳಿಕ ಪೋಸ್ಟ್ ಡಿಲೀಟ್ ಮಾಡಿದ್ದಾರೆ

ಅಭಿಷೇಕ್ ಹಾಗೂ ಐಶ್ವರ್ಯಾ ಬೇರೆ ಆಗಲು ಕಾರಣ ಏನು ಎಂಬುದು ಇನ್ನೂ ರಿವೀಲ್ ಆಗಿಲ್ಲ. ಈ ತಿಂಗಳ ಆರಂಭದಲ್ಲಿ ಐಶ್ವರ್ಯಾ ಬರ್ತ್ಡೇ ಆಚರಿಸಿಕೊಂಡರು. ಇದಕ್ಕೆ ಅಭಿಷೇಕ್ ಕಡೆಯಿಂದ ಯಾವುದೇ ವಿಶ್ ಬಂದಿಲ್ಲ. ಇದರಿಂದ ವಿಚ್ಛೇದನ ವಿಚಾರ ಖಚಿತ ಆದಂತೆ ಆಗಿದೆ. ಐಶ್ವರ್ಯಾ ಅವರು ಬಚ್ಚನ್ ಕುಟುಂಬದ ಜೊತೆ ಕಾಣಿಸಿಕೊಂಡಿಲ್ಲ. ಈ ಮಧ್ಯೆ ಅಭಿಷೇಕ್ ಪರವಾಗಿ ಸಿಮಿ ಮಾತನಾಡಿದ್ದರು.

‘ಅಭಿಷೇಕ್ ಅವರನ್ನು ವೈಯಕ್ತಿಕವಾಗಿ ತಿಳಿದಿರುವ ಪ್ರತಿಯೊಬ್ಬರೂ ಅವರು ಬಾಲಿವುಡ್‌ನ ಉತ್ತಮ ವ್ಯಕ್ತಿಗಳಲ್ಲಿ ಒಬ್ಬರು ಎಂದು ಒಪ್ಪಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಉತ್ತಮ ಮೌಲ್ಯಗಳು ಮತ್ತು ಸಹಜವಾದ ಸಭ್ಯತೆ ಅವರಿಗೆ ಇದೆ’ ಎಂದು ಸಿಮಿ ಹೇಳಿದ್ದರು. ಇದಕ್ಕೆ ಒಬ್ಬರೂ ಒಳ್ಳೆಯ ರೀತಿಯಲ್ಲಿ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ:‘ದುರ್ಬಲ ಪುರುಷ ಪ್ರಬಲ ಮಹಿಳೆಯನ್ನು ಹ್ಯಾಂಡಲ್ ಮಾಡಲಾರ’; ಅಭಿಷೇಕ್ ಬಚ್ಚನ್ ಬಗ್ಗೆ ಟೀಕೆ

‘ವಿವಾದಾತ್ಮಕ ಹೇಳಿಕೆ. ನೀವು ಈ ರೀತಿ ಪೋಸ್ಟ್ ಮಾಡಿದ್ದು ಸರಿ ಅಲ್ಲ’ ಎಂದು ಕೆಲವರು ಹೇಳಿದ್ದಾರೆ. ಐಶ್ವರ್ಯಾ ಅವರು ಕೆಟ್ಟವರು ಎಂದರ್ಥವೇ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಸಿಮಿ ಅವರನ್ನು ಟ್ರೋಲ್ ಮಾಡಿದ್ದಾರೆ. ಆ ಬಳಿಕ ಸಿಮಿ ಈ ಪೋಸ್ಟ್ನ ಡಿಲೀಟ್ ಮಾಡಿದ್ದಾರೆ.

ಅಭಿಷೇಕ್ ಹಾಗೂ ಐಶ್ವರ್ಯಾ ಅವರು ಮದುವೆ ಆಗಿ 17 ವರ್ಷಗಳು ಕಳೆದಿವೆ. ಇವರಿಗೆ ಆರಾಧ್ಯಾ ಬಚ್ಚನ್ ಹೆಸರಿನ ಮಗಳು ಇದ್ದಾಳೆ. ಈ ವರ್ಷದ ಆರಂಭದಿಂದಲೇ ಇವರು ದೂರ ಆಗಿದ್ದಾರೆ ಎನ್ನುವ ಸುದ್ದಿ ಇದೆ. ಅಂಬಾನಿ ಕುಟುಂಬದ ಮದುವೆಗೆ ಐಶ್ವರ್ಯಾ ಹಾಗೂ ಅಭಿಷೇಕ್ ಪ್ರತ್ಯೇಕವಾಗಿ ಬಂದಿದ್ದರು. ಐಶ್ವರ್ಯಾ ಸದ್ಯ ತಾಯಿ ಜೊತೆ ವಾಸವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಸದ್ಯ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ