AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅನಿಮಲ್’ ಸಿನಿಮಾದಲ್ಲಿ ನಟಿಸಿದ್ದಕ್ಕೆ ಹಲವರ ಬಳಿ ಕ್ಷಮೆ ಕೇಳಿದ್ದ ರಣ್​ಬೀರ್ ಕಪೂರ್

ರಣ್​ಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭಾರಿ ಕಲೆಕ್ಷನ್ ಮಾಡಿತ್ತು, ಆದರೆ ಸಿನಿಮಾದ ಬಗ್ಗೆ ಅಷ್ಟೆ ನೆಗೆಟಿವ್ ವಿಮರ್ಶೆಗಳು ಸಹ ಬಂದಿದ್ದವು. ಆ ಬಗ್ಗೆ ಮಾತನಾಡಿರುವ ರಣ್​ಬೀರ್ ಕಪೂರ್ ಸಿನಿಮಾ ಮಾಡಿದ್ದಕ್ಕೆ ಹಲವರ ಬಳಿ ನಾನು ಕ್ಷಮೆ ಕೇಳಿದ್ದೇನೆ ಎಂದಿದ್ದಾರೆ.

‘ಅನಿಮಲ್’ ಸಿನಿಮಾದಲ್ಲಿ ನಟಿಸಿದ್ದಕ್ಕೆ ಹಲವರ ಬಳಿ ಕ್ಷಮೆ ಕೇಳಿದ್ದ ರಣ್​ಬೀರ್ ಕಪೂರ್
ಮಂಜುನಾಥ ಸಿ.
|

Updated on: Nov 06, 2024 | 11:33 AM

Share

ಬಾಲಿವುಡ್ ಸ್ಟಾರ್ ನಟ ರಣ್​ಬೀರ್ ಕಪೂರ್, ಅವರ ಸಾಲು-ಸಾಲು ಸಿನಿಮಾಗಳು ಸೋಲುತ್ತಿರುವಾಗ ಮರುಜೀವ ಕೊಟ್ಟ ಸಿನಿಮಾ ‘ಅನಿಮಲ್’ ಅದಕ್ಕೆ ಮುಂಚೆ ಬಿಡುಗಡೆ ಆಗಿದ್ದ ‘ಬ್ರಹ್ಮಾಸ್ತ್ರ’ ಹಿಟ್ ಆಗಿತ್ತಾದರೂ ರಣ್​ಬೀರ್ ಕಪೂರ್​ಗೆ ಮಾಸ್ ಇಮೇಜು ತಂದುಕೊಟ್ಟ ಸಿನಿಮಾ ಎಂದರೆ ಅದು ‘ಅನಿಮಲ್’. ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ ‘ಅನಿಮಲ್’ ಸಿನಿಮಾ ಬಿಡುಗಡೆ ಆದ ಬಳಿಕ ಹಲವು ಟೀಕೆ, ವಿಮರ್ಶೆಗಳಿಗೆ ಗುರಿಯಾಯ್ತು, ಹಾಗಿದ್ದರೂ ಸಹ ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಆದರೆ ರಣ್​ಬೀರ್ ಕಪೂರ್ ಮಾತ್ರ ‘ಅನಿಮಲ್’ ಸಿನಿಮಾದಲ್ಲಿ ನಟಿಸಿದ್ದಕ್ಕೆ ಆಪ್ತರಿಂದಲೇ ಟೀಕೆಗೆ ಒಳಗಾದರಂತೆ, ಆ ಬಗ್ಗೆ ಕ್ಷಮೆಯನ್ನೂ ಸಹ ಕೇಳಿದರಂತೆ.

ಪಾಡ್​ಕಾಸ್ಟ್ ಒಂದರಲ್ಲಿ ಈ ಬಗ್ಗೆ ಮಾತನಾಡಿರುವ ರಣ್​ಬೀರ್ ಕಪೂರ್, ‘ಅನಿಮಲ್’ ಸಿನಿಮಾದಲ್ಲಿ ನಟಿಸಿದ ಬಳಿಕ ನನ್ನ ಹಲವು ಆಪ್ತರು, ಹತ್ತಿರದವರು ನನಗೆ ಈ ಸಿನಿಮಾದಲ್ಲಿ ನಟಿಸಬಾರದಿತ್ತು, ಇದೊಂದು ಕೆಟ್ಟ ಸಿನಿಮಾ ಎಂದೆಲ್ಲ ಹೇಳಿದರು. ನಾನು ಅವರಿಗೆ ಕ್ಷಮೆ ಕೇಳಿದೆ, ‘ಕ್ಷಮಿಸಿ, ಇನ್ನು ಮುಂದಕ್ಕೆ ನಾನು ಎಚ್ಚರದಿಂದ ಇರುತ್ತೇನೆ, ಇನ್ನೂ ಒಳ್ಳೆಯ ಸಿನಿಮಾಗಳನ್ನು ಆಯ್ದುಕೊಳ್ಳುತ್ತೇನೆ, ಇನ್ನಷ್ಟು ಕಷ್ಟಪಟ್ಟು ನಿಮ್ಮನ್ನು ರಂಜಿಸುತ್ತೇನೆ’ ಎಂದರಂತೆ.

ಇದನ್ನೂ ಓದಿ:‘ಅನಿಮಲ್​’ ಸಿನಿಮಾ ನಟಿ ತೃಪ್ತಿ ದಿಮ್ರಿ ಒಟ್ಟು ಆಸ್ತಿ ಎಷ್ಟು?

ಹಾಗೆಂದು ‘ಅನಿಮಲ್’ ಸಿನಿಮಾದಲ್ಲಿ ನಟಿಸಿರುವ ಬಗ್ಗೆ ರಣ್​ಬೀರ್ ಕಪೂರ್​ಗೆ ಬೇಸರ ಅಥವಾ ಪಶ್ಚಾತ್ತಾಪ ಏನಿಲ್ಲ. ‘ಅನಿಮಲ್’ ಸಿನಿಮಾದಲ್ಲಿ ನಟಿಸಿದ್ದು ಜೀವನದ ಒಳ್ಳೆಯ ನಿರ್ಧಾರಗಳಲ್ಲಿ ಒಂದೆಂದು ಸಹ ರಣ್​ಬೀರ್ ಅದೇ ಶೋನಲ್ಲಿ ಹೇಳಿದ್ದಾರೆ. ಹಾಗಿದ್ದರೆ ಕ್ಷಮೆ ಏಕೆ ಕೇಳಿದಿರಿ ಎಂದರೆ, ‘ನನ್ನ ಜೀವನದಲ್ಲಿ ಒಂದು ಹಂತವನ್ನು ಈಗ ತಲುಪಿಟ್ಟಿದ್ದೀನಿ, ಯಾರೊಂದಿಗೂ ಬಿರುಸಿನ ಚರ್ಚೆ ಮಾಡುವುದಿಲ್ಲ, ಕ್ಷಮೆ ಕೇಳಿ ಮುಂದೆ ಹೋಗುತ್ತಿರುತ್ತೀನಿ, ನಾನು ಮಾಡಬೇಕಾದ ಕೆಲಸ, ನನಗೆ ಸರಿ ಎನಿಸಿದ ಕೆಲಸಗಳ ಮೇಲೆ ನಾನು ನಿಗಾ ವಹಿಸುತ್ತೇನೆ’ ಎಂದಿದ್ದಾರೆ.

‘ನಾನು ಒಂದು ಸಮಯದಲ್ಲಿ ದೊಡ್ಡ ಯಶಸ್ಸು ನೋಡಿದೆ. ನನ್ನನ್ನು ಮುಂದಿನ ಸೂಪರ್ ಸ್ಟಾರ್ ಎಂದು ಕರೆಯಲಾಗುತ್ತಿತ್ತು, ಆದರೆ ಆ ನಂತರ ನಾನು ಸತತ ಸೋಲುಗಳನ್ನು ಕಂಡೆ, ಟೀಕೆ, ವಿಮರ್ಶೆಗೆ ಗುರಿಯಾದೆ, ಒಂದೇ ರೀತಿಯ ಪಾತ್ರಗಳನ್ನು ಮಾಡುತ್ತಾನೆ ಎಂದರು. ಅಂಥಹಾ ಸಮಯದಲ್ಲಿ ನನಗೆ ‘ಅನಿಮಲ್’ ಸಿಕ್ಕಿತು. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡೆ, ನನಗೆ ಆ ರೀತಿಯ ಒಂದು ಸಿನಿಮಾ ಬೇಕಿತ್ತು, ಲವ್ವರ್ ಬಾಯ್​ನಿಂದ ಮಾಚೋ ಮ್ಯಾನ್ ಹಂತಕ್ಕೆ ಹೋಗಲು ಅದು ಸಹಾಯ ಮಾಡಿತು’ ಎಂದಿದ್ದಾರೆ ರಣ್​ಬೀರ್ ಕಪೂರ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ
ಎಸ್​ಐಆರ್​ನಲ್ಲಿ 1.7 ಕೋಟಿ ಹೆಸರು ತೆಗೆದಿದ್ದಾರೆ: ಸಚಿವ ರಿಜ್ವಾನ್ ಆರೋಪ
ಎಸ್​ಐಆರ್​ನಲ್ಲಿ 1.7 ಕೋಟಿ ಹೆಸರು ತೆಗೆದಿದ್ದಾರೆ: ಸಚಿವ ರಿಜ್ವಾನ್ ಆರೋಪ
ಸಕ್ರೇಬೈಲು ಆನೆ ಬಿಡಾರದಲ್ಲಿ ಶೌರ್ಯ ಆನೆ ಸಾವು
ಸಕ್ರೇಬೈಲು ಆನೆ ಬಿಡಾರದಲ್ಲಿ ಶೌರ್ಯ ಆನೆ ಸಾವು
ಹುಚ್ಚರನ್ನು ಜೈಲಿಗೆ ಹಾಕ್ತಾರಾ? ಪ್ರಕಾಶ್ ರಾಜ್​ಗೆ ಪ್ರತಾಪ್ ಸಿಂಹ ತಿರುಗೇಟು
ಹುಚ್ಚರನ್ನು ಜೈಲಿಗೆ ಹಾಕ್ತಾರಾ? ಪ್ರಕಾಶ್ ರಾಜ್​ಗೆ ಪ್ರತಾಪ್ ಸಿಂಹ ತಿರುಗೇಟು