‘ಟಾಕ್ಸಿಕ್’ ಎದುರು ಒಂದು ದಿನವೂ ನಿಲ್ಲಲ್ಲ ಅಂದ್ಕೊಂಡಿದ್ವಿ’; ‘ಹನುಮಾನ್ ಅಂಶ’ ನಿರ್ಮಾಪಕಿ ಮಾತು

ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದ ಎದುರು 'ಹನುಮಾನ್ ಅಂಶ' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸಖತ್ ಕಮಾಲ್ ಮಾಡಿದೆ. ಥಿಯೇಟರ್‌ಗಳಿಂದ ಹೊರಬೀಳುವ ಹಂತದಲ್ಲಿದ್ದ ಈ ಸಿನಿಮಾ ಜಾಗತಿಕವಾಗಿ 316 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿದೆ. ಈ ಅಚ್ಚರಿಯ ಬಾಕ್ಸ್ ಆಫೀಸ್ ಗೆಲುವಿನ ಕುರಿತು ಚಿತ್ರದ ನಿರ್ಮಾಪಕಿ ರಾಗಿಣಿ ಸೋನಾ ವಿಶೇಷ ಮಾಹಿತಿ ಹಂಚಿಕೊಂಡಿದ್ದಾರೆ.

ಟಾಕ್ಸಿಕ್ ಎದುರು ಒಂದು ದಿನವೂ ನಿಲ್ಲಲ್ಲ ಅಂದ್ಕೊಂಡಿದ್ವಿ’; ಹನುಮಾನ್ ಅಂಶ ನಿರ್ಮಾಪಕಿ ಮಾತು
ಹನುಮಾನ್ ಅಂಶ್-ಟಾಕ್ಸಿಕ್

Updated on: Sep 19, 2026 | 2:58 PM

ಮುಖ್ಯಾಂಶಗಳು

  • 'ಟಾಕ್ಸಿಕ್' ಎದುರು ಹನುಮಾನ್ ಅಂಶ ಪವಾಡ
  • 316 ಕೋಟಿ ಗಳಿಸಿ ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ಸಣ್ಣ ಸಿನಿಮಾ
  • ಥಿಯೇಟರ್‌ಗಳಿಂದ ಕಾಲು ಕೀಳುವ ಹಂತದಲ್ಲಿದ್ದ ಚಿತ್ರ 

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬೃಹತ್ ಬಜೆಟ್‌ನ ‘ಟಾಕ್ಸಿಕ್’ ಸಿನಿಮಾ ಎದುರು ಪೈಪೋಟಿ ನಡೆಸಿ ‘ಹನುಮಾನ್ ಅಂಶ್’ ಸಿನಿಮಾ ಅಭೂತಪೂರ್ವ ಗೆಲುವು ಸಾಧಿಸಿದೆ. ವಿಶಾಲ್ ಚತುರ್ವೇದಿ ನಿರ್ದೇಶನದ ಈ ಸಣ್ಣ ಬಜೆಟ್ ಚಿತ್ರವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಾ ಭಾರಿ ಕಲೆಕ್ಷನ್ ಮಾಡುತ್ತಿದೆ. ಪ್ರೇಕ್ಷಕರ ಅಪಾರ ಬೆಂಬಲದೊಂದಿಗೆ ಬಾಕ್ಸ್ ಆಫೀಸ್ ಸೂಪರ್ ಹಿಟ್ ಆಗಿ ಹೊರಹೊಮ್ಮಿದೆ. ಈ ಅದ್ಭುತ ಗೆಲುವಿನ ಬಗ್ಗೆ ನಿರ್ಮಾಪಕಿ ರಾಗಿಣಿ ಸೋನಾ ಮಾತನಾಡಿದ್ದಾರೆ.

ಚಿತ್ರ ಬಿಡುಗಡೆಯಾದ ಆರಂಭದಲ್ಲಿ ಪ್ರದರ್ಶನಗಳ ಸಂಖ್ಯೆ ತೀವ್ರವಾಗಿ ಕುಸಿದಿತ್ತು. ‘ಟಾಕ್ಸಿಕ್’ ಹಾಗೂ ‘ಆವಾರಪನ್ 2’ ಸಿನಿಮಾಗಳ ಬಿಡುಗಡೆಯಿಂದಾಗಿ ಚಿತ್ರಮಂದಿರಗಳ ಸಂಖ್ಯೆ 350 ರಿಂದ 25ಕ್ಕೆ ಇಳಿದಿತ್ತು. ಆದರೂ ಸಿನಿಮಾ ಕಲೆಕ್ಷನ್ ಮಾತ್ರ ಎಲ್ಲೂ ಕುಗ್ಗಿರಲಿಲ್ಲ. ಇದು ಚಿತ್ರತಂಡಕ್ಕೆ ದೊಡ್ಡ ಭರವಸೆಯ ಬೆಳಕಾಗಿ ಕಾಣಿಸಿಕೊಂಡಿತು’ ಎಂದಿದ್ದಾರೆ ಅವರು.

‘ಸಿನಿಮಾ ಥಿಯೇಟರ್‌ಗಳಿಂದ ಬಹುತೇಕ ಹೊರಹೋಗುವ ಹಂತ ತಲುಪಿತ್ತು. ಆ ಸಮಯದಲ್ಲಿ ನಿರ್ದೇಶಕ ವಿಶಾಲ್ ಹಾಗೂ ನಿರ್ಮಾಪಕಿ ರಾಗಿಣಿ ಧೈರ್ಯ ಮಾಡಿ ವಿತರಕರ ಜೊತೆ ಮಾತನಾಡಿದರು. ಮತ್ತಷ್ಟು ಚಿತ್ರಮಂದಿರಗಳನ್ನು ಪಡೆದು ಪ್ರದರ್ಶನ ಮುಂದುವರಿಸಲು ನಿರ್ಧರಿಸಿದರು. ಅವರ ಈ ಸಾಹಸದ ನಿರ್ಧಾರಕ್ಕೆ ಈಗ ದೊಡ್ಡ ಮಟ್ಟದ ಪ್ರತಿಫಲ ಸಿಕ್ಕಿದೆ’ ಎಂದಿದ್ದಾರೆ ರಾಗಿಣಿ.

‘ಟಾಕ್ಸಿಕ್’ ನಂತಹ ದೊಡ್ಡ ಸಿನಿಮಾದ ಎದುರು ನಮ್ಮ ಚಿತ್ರ ಒಂದು ದಿನವೂ ತಡೆಯಲಾರದು ಎಂದು ನಾವು ಭಾವಿಸಿದ್ದೆವು. ಮಾಧ್ಯಮಗಳು ಹಾಗೂ ಜನರು ಇವೆರಡು ಸಿನಿಮಾಗಳ ನಡುವೆ ಸ್ಪರ್ಧೆ ಸೃಷ್ಟಿಸಿದ್ದರು. ಆದರೆ ನಾವು ಯಾವುದೇ ಭೀತಿಯಿಲ್ಲದೆ ಹನುಮಂತನ ಮೇಲೆ ಸಂಪೂರ್ಣ ಭಾರ ಹಾಕಿ ಮುನ್ನಡೆದೆವು’ ಎಂದು ನಿರ್ಮಾಪಕಿ ಹೇಳಿದ್ದಾರೆ.

ಇದನ್ನೂ ಓದಿ: ನಿಮ್ಮ ಬುದ್ಧಿ ಉಪಯೋಗಿಸಿ ಸಿನಿಮಾ ನೋಡಿ;ಟಾಕ್ಸಿಕ್ ನೆಗೆಟಿವ್ ವಿಮರ್ಶೆಗೆ ಯಶ್ ಸಹನಟ ಖಡಕ್ ಉತ್ತರ

ಆಗಸ್ಟ್ 7 ರಂದು ಬಿಡುಗಡೆಯಾದ ‘ಹನುಮಾನ್ ಅಂಶ’ ಸಿನಿಮಾ ಜಾಗತಿಕವಾಗಿ 316.30 ಕೋಟಿ ರೂಪಾಯಿ ಗಳಿಸಿದೆ. ಶೋಭಿನವ್ ಸತ್ಯಾ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರವು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಸಣ್ಣ ಬಜೆಟ್‌ನಲ್ಲಿದ್ದರೂ ಕಂಟೆಂಟ್ ಆಧಾರಿತ ಸಿನಿಮಾಗಳು ಗೆಲ್ಲುತ್ತವೆ ಎಂಬುದನ್ನು ಈ ಚಿತ್ರ ಮತ್ತೊಮ್ಮೆ ಸಾಬೀತುಪಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us