Ayesha Takia: ಎಲ್ಲರ ಗಮನ ಸೆಳೆದು ಮೆಚ್ಚುಗೆ ಪಡೆದ ಈ ನಟಿ ಈಗೇನು ಮಾಡುತ್ತಿದ್ದಾರೆ?
ಆಯೇಶಾ ಅವರು ಸಖತ್ ಗ್ಲಾಮರಸ್ ಆಗಿದ್ದರು. ಅವರು ಅವರು ಅನೇಕ ಸೂಪರ್ ಸ್ಟಾರ್ಗಳೊಂದಿಗೆ ರೊಮ್ಯಾನ್ಸ್ ಮಾಡಿದರು. ಅವರು 2004ರಲ್ಲಿ ‘ಟಾರ್ಜನ್ ದಿ ವಂಡರ್ ಕಾರ್’ ಚಿತ್ರದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅಂದಿನಿಂದ ಅವರನ್ನು ಫ್ಯಾನ್ಸ್ ಟಾರ್ಜನ್ ಗರ್ಲ್ ಎಂದು ಕರೆಯಲಾರಂಭಿಸಿದರು.

ಬಾಲಿವುಡ್ ಇಂಡಸ್ಟ್ರಿಯಲ್ಲಿ ಹಲವಾರು ಕಲಾವಿದ್ದಾರೆ. ಅನೇಕ ಕಲಾವಿದರು ದೀರ್ಘಕಾಲ ಚಿತ್ರರಂಗದಲ್ಲಿ ಇರುತ್ತಾರೆ ಜನರಿಗೆ ಸಂಪೂರ್ಣ ಮನರಂಜನೆಯನ್ನು ನೀಡುತ್ತಾರೆ. ಕೆಲವು ಕಲಾವಿದರು ಇಂಡಸ್ಟ್ರಿಯಲ್ಲಿ ಕಡಿಮೆ ಸಮಯ ಇದ್ದರೂ ಶಾಶ್ವತವಾಗಿ ತಮ್ಮ ಛಾಪು ಮೂಡಿಸಿ ಹೋಗುತ್ತಾರೆ. ಅಂತಹ ನಟಿಯರಲ್ಲಿ ಆಯೇಶಾ ಟಾಕಿಯಾ ಕೂಡ ಒಬ್ಬರು. ಆಯೇಶಾ ಇಂಡಸ್ಟ್ರಿಗೆ ಬಂದಾಗ ಆರಂಭದಲ್ಲಿ ಎಲ್ಲರನ್ನೂ ತುಂಬಾ ಇಂಪ್ರೆಸ್ ಮಾಡಿದ್ದರು. ಸೌಂದರ್ಯದ ವಿಷಯದಲ್ಲೂ ಅವಳಿಗೆ ಸರಿಸಾಟಿ ಇರಲಿಲ್ಲ. ಭವಿಷ್ಯದಲ್ಲಿ ಅವರು ಪ್ರಮುಖ ನಟಿಯಾಗುತ್ತಾರೆ ಎಂದು ಎಲ್ಲರೂ ಹೇಳಿದ್ದರು. ಆದರೆ ನಂತರ ನಟಿಯ ನಿರ್ಧಾರವು ಎಲ್ಲವನ್ನೂ ಬದಲಾಯಿಸಿತು. ಆಯೇಶಾ ಟಾಕಿಯಾ (Ayesha Takia) ಚಿತ್ರರಂಗದಿಂದ ನಿವೃತ್ತರಾದರು.
ಆಯೇಶಾ ಅವರು ಸಖತ್ ಗ್ಲಾಮರಸ್ ಆಗಿದ್ದರು. ಅವರು ಅವರು ಅನೇಕ ಸೂಪರ್ ಸ್ಟಾರ್ಗಳೊಂದಿಗೆ ರೊಮ್ಯಾನ್ಸ್ ಮಾಡಿದರು. ಅವರು 2004ರಲ್ಲಿ ‘ಟಾರ್ಜನ್ ದಿ ವಂಡರ್ ಕಾರ್’ ಚಿತ್ರದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅಂದಿನಿಂದ ಅವರನ್ನು ಫ್ಯಾನ್ಸ್ ಟಾರ್ಜನ್ ಗರ್ಲ್ ಎಂದು ಕರೆಯಲಾರಂಭಿಸಿದರು. ಆ ಸಂದರ್ಭದಲ್ಲಿ ಸಿನಿಮಾ ಸೂಪರ್ ಹಿಟ್ ಆಯಿತು. ಇದರ ನಂತರ ಅವರು ‘ಶಾದಿ ಸೆ ಪೆಹ್ಲೆ’, ‘ಶಾದಿ ನಂ. 1’, ‘ಯು ಹೋತಾ ತೋ ಕ್ಯಾ ಹೋತಾ’, ‘ಸಲಾಮ್-ಎ-ಇಷ್ಕ್’, ‘ಡೋರ್ ಮತ್ತು ಫೂಲ್’ ಮತ್ತು ‘ಫೈನಲ್’ನಂತಹ ಚಿತ್ರಗಳಲ್ಲಿ ಅವರು ನಟಿಸಿದ್ದರು.
ಆಯೇಶಾ ದೊಡ್ಡ ಸ್ಟಾರ್ಗಳ ಜೊತೆ ನಟಿಸಲು ಪ್ರಾರಂಭಿಸಿದರು. ಅವರ ನಟನೆಯೂ ಚೆನ್ನಾಗಿತ್ತು ಮತ್ತು ಈ ಸಮಯದಲ್ಲಿ ನಟಿ ನಿರ್ದೇಶಕರ ವಿಶ್ವಾಸವನ್ನೂ ಗಳಿಸಿದರು. ಅಜಯ್ ದೇವಗನ್ ಅವರ ‘ಸಂಡೇ’ ಚಿತ್ರದಲ್ಲಿ ಕಾಣಿಸಿಕೊಂಡರು. ಇದರ ನಂತರ ಅವರು ಅಕ್ಷಯ್ ಕುಮಾರ್ ಅವರೊಂದಿಗೆ ‘8 x 10 ತಸ್ವೀರ್’ ಚಿತ್ರದಲ್ಲಿ ಕಾಣಿಸಿಕೊಂಡರು.
ಆಯೆಶಾ ಅವರು ಸಲ್ಮಾನ್ ಖಾನ್ ಜೊತೆ ‘ವಾಂಟೆಡ್’ ಚಿತ್ರದಲ್ಲಿ ನಟಿಸಿದರು. ಈ ಚಿತ್ರವು ಸೂಪರ್‌ಹಿಟ್ ಆಗಿತ್ತು. ಆ ಬಳಿಕ ಎರಡೇ ಎರಡು ಸಿನಿಮಾಗಳಲ್ಲಿ ನಟಿಸಿದ್ದರು. ಆಯೇಶಾ ವೃತ್ತಿಜೀವನ ಉತ್ತುಂಗಕ್ಕೇರಿತು. ಆಗ ಅವರು ಅಭಿಮಾನಿಗಳ ಹೃದಯವನ್ನು ಶಾಶ್ವತವಾಗಿ ಮುರಿಯುವ ನಿರ್ಧಾರವನ್ನು ತೆಗೆದುಕೊಂಡರು.
ಇದನ್ನೂ ಓದಿ: ಅಕ್ಷಯ್ ಕುಮಾರ್ ಸಿನಿಮಾ ಉದ್ದಕ್ಕೂ ಕಾಣಲ್ಲ ಪೃಥ್ವಿರಾಜ್ ಮುಖ? ಮೂಡಿದೆ ಅನುಮಾನ
‘ವಾಂಟೆಡ್’ ಚಿತ್ರದ ಯಶಸ್ಸಿನ ನಂತರ ಆಯೇಶಾ ಟಾಕಿಯಾ ಅವರು ತಮ್ಮ ಮುಂದಿನ ಚಿತ್ರ ‘ಪಾಠಶಾಲಾ’ದಲ್ಲಿ ನಟಿಸಿದರು. ಈ ಚಿತ್ರದಲ್ಲಿ ಶಾಹಿದ್ ಕಪೂರ್ ಮತ್ತು ನಾಅಕ್ಷಯ್ ಕುಮಾರ್ ನಾ ಪಾಟೇಕರ್ ಮುಖ್ಯ ಭೂಮಿಕೆಯಲ್ಲಿದ್ದರು. ಆಯೇಶಾ ಟಾಕಿಯಾ ರಾಜಕಾರಣಿ ಅಬು ಅಜ್ಮಿ ಅವರ ಪುತ್ರ ಫರ್ಹಾನ್ ಅಜ್ಮಿ ಅವರನ್ನು 2009ರಲ್ಲಿ ವಿವಾಹವಾದರು. ಇದಾದ ನಂತರ ನಟಿ ಸಿನಿಮಾ ಮಾಡುವುದನ್ನು ನಿಲ್ಲಿಸಿ ತಮ್ಮ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾದರು. ನಟಿ ಪ್ರಸ್ತುತ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ ಮತ್ತು ಅವರಿಗೆ ಒಬ್ಬ ಮಗನೂ ಇದ್ದಾನೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:03 pm, Wed, 10 April 24



